Arvind Kejriwal Oath-Taking Ceremony LIVE: ಮೂರನೇ ಬಾರಿ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಅರವಿಂದ್​ ಕೇಜ್ರಿವಾಲ್​

ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಜೊತೆಗೆ ದೆಹಲಿಯ ಬಿಜೆಪಿ ಸಂಸದರು ಮತ್ತು ಶಾಸಕರಿಗೂ ಸಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಇನ್ನುಳಿದ ಯಾವ ರಾಜ್ಯದ ಮುಖ್ಯಮಂತ್ರಿಗಳು ಅಥವಾ ರಾಜಕೀಯ ನಾಯಕರಿಗೂ ಆಮ್​ ಆದ್ಮಿ ಪಕ್ಷ ಆಮಂತ್ರಣ ನೀಡಿಲ್ಲ.

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ್​ ಕೇಜ್ರಿವಾಲ್​

ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಅರವಿಂದ್​ ಕೇಜ್ರಿವಾಲ್​

 • Share this:
  ನವದೆಹಲಿ(ಫೆ.16): ಅರವಿಂದ್​ ಕೇಜ್ರಿವಾಲ್ ಮೂರನೇ ಬಾರಿ ದೆಹಲಿ ಮುಖ್ಯಮಂತ್ರಿಯಾಗಿ  ಇಂದು ರಾಮ್​ಲೀಲಾ ಮೈದಾನದಲ್ಲಿ  ಪ್ರಮಾಣವಚನ ಸ್ವೀಕರಿಸಿದ್ದಾರೆ. 

  ಆಮ್​ ಆದ್ಮಿ ಪಕ್ಷದ ನಾಯಕರಾದ ಮನೀಶ್​ ಸಿಸೋಡಿಯಾ, ಕೈಲಾಶ್​ ಗೆಹ್ಲೋಟ್, ಇಮ್ರಾನ್​ ಹುಸೇನ್, ಗೋಪಾಲ್​ ರಾಜ್, ಸತ್ಯೇಂದ್ರ ಜೈನ್, ರಾಜೇಂದ್ರ ಗೌತಮ್​ ಕೂಡ ಅರವಿಂದ್​ ಕೇಜ್ರಿವಾಲ್​ ಜೊತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.



  ಕಳೆದ 5 ವರ್ಷಗಳಿಂದ ದೆಹಲಿ ಅಭಿವೃದ್ದಿಗೆ ಶ್ರಮಿಸಿರುವ 50 ಮಂದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಜೊತೆಗೆ ದೆಹಲಿಯ ಬಿಜೆಪಿ ಸಂಸದರು ಮತ್ತು ಶಾಸಕರಿಗೂ ಸಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಇನ್ನುಳಿದ ಯಾವ ರಾಜ್ಯದ ಮುಖ್ಯಮಂತ್ರಿಗಳು ಅಥವಾ ರಾಜಕೀಯ ನಾಯಕರಿಗೂ ಆಮ್​ ಆದ್ಮಿ ಪಕ್ಷ ಆಮಂತ್ರಣ ನೀಡಿರಲಿಲ್ಲ.

  ದೆಹಲಿಯಲ್ಲಿ ಮತ್ತೆ ಆಪ್​​ ಸರ್ಕಾರ: ಇಂದು ಮೂರನೇ ಬಾರಿಗೆ ಸಿಎಂ ಆಗಿ ಅರವಿಂದ್​ ಕೇಜ್ರಿವಾಲ್​​ ಪ್ರಮಾಣವಚನ

  ಅಂತರಾಷ್ಟ್ರೀಯ ಟೆನ್ನಿಸ್​ ಆಟಗಾರ ಸುಮಿತ್​ ನಾಗಲ್, ದೆಹಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮತ್ತು ಜೈ ಭೀಮ್​ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆಯ ಫಲಾನುಭವಿ ಐಐಟಿ ವಿಜಯ್ ಕುಮಾರ್, ಮೊಹಲ್ಲಾ ಕ್ಲಿನಿಕ್ ವೈದ್ಯ ಅಲ್ಕಾ, ಬೈಕ್​ ಆ್ಯಂಬುಲೆನ್ಸ್​ ಸೇವೆಯ ಅಧಿಕಾರಿ ಯುಧಿಷ್ಠಿರ್ ರಥೀ ಇನ್ನೂ ಮೊದಲಾದವರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

  ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಸಂಜೆ ಸಿಎಂ ಕೇಜ್ರಿವಾಲ್​ ಭೋಜನವನ್ನು ಏರ್ಪಡಿಸಿದ್ದಾರೆ. ಈ ವೇಳೆ ಮಂತ್ರಿಗಳ ಜೊತೆ ದೆಹಲಿ ಅಭಿವೃದ್ಧಿ ಕುರಿತು ಚರ್ಚಿಸಲಿದ್ದಾರೆ. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವೈವಿಧ್ಯಮಯ ಹೂವುಗಳಿಂದ ವೇದಿಕೆಯನ್ನು ಅಲಂಕರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೈದಾನದಲ್ಲಿ ಪೊಲೀಸ್​ ಬಿಗಿ ಭದ್ರತೆ ವಹಿಸಲಾಗಿದೆ.

  ಗುಂಡು ಹೊಡೆಯೋದಾದ್ರೆ ನನ್ನ ಮೇಲೆ ಹೊಡೀರಿ; ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ ಅಸಾದುದ್ದೀನ್ ಓವೈಸಿ

  ದೆಹಲಿ ಪೊಲೀಸ್, ಸಿಆರ್​ಪಿಎಫ್​​ ಮತ್ತು ಪ್ಯಾರಾ ಮಿಲಿಟರಿಯ 2-3 ಸಾವಿರ ಭದ್ರತಾ ಸಿಬ್ಬಂದಿಯನ್ನು ರಾಮ್​ಲೀಲಾ ಮೈದಾನದ ಸುತ್ತ ನಿಯೋಜಿಸಲಾಗಿದೆ.
  First published: