ನಾಮಪತ್ರ ಸಲ್ಲಿಸುವಲ್ಲಿ ವಿಫಲರಾದ ಅರವಿಂದ್ ಕೇಜ್ರಿವಾಲ್; ಇನ್ನೊಂದೇ ದಿನ ಬಾಕಿ

ಇವತ್ತು ನಾಮಪತ್ರ ಸಲ್ಲಿಸಲು ವಿಫಲವಾಗಿರುವ ಕೇಜ್ರಿವಾಲ್ ಜನ ಜಾಸ್ತಿ ಇದ್ದುದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಜನ ಬಿಟ್ಟು ನಾನು ಹೇಗೆ ಬರಲಿ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ನಾಳೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

news18
Updated:January 20, 2020, 8:24 PM IST
ನಾಮಪತ್ರ ಸಲ್ಲಿಸುವಲ್ಲಿ ವಿಫಲರಾದ ಅರವಿಂದ್ ಕೇಜ್ರಿವಾಲ್; ಇನ್ನೊಂದೇ ದಿನ ಬಾಕಿ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
  • News18
  • Last Updated: January 20, 2020, 8:24 PM IST
  • Share this:
ನವದೆಹಲಿ(ಜ. 20): ದೆಹಲಿ ವಿಧಾನಸಭಾ ಚುನಾವಾಣೆಗೆ ನಾಮಪತ್ರ ಸಲ್ಲಿಸೋಕೆ ನಾಳೆಯೇ ಕಡೆ ದಿನ. ಆದರೂ ದೆಹಲಿಯಲ್ಲಿ ಚುನಾವಣಾ ಅಬ್ಬರ‌ ಕಾಣಿಸ್ತಿಲ್ಲ. ಇವತ್ತು ಸಿಎಂ ಅರವಿಂದ ಕೇಜ್ರಿವಾಲ್ ಗೆ ನಾಮಪತ್ರ ಸಲ್ಲಿಸೋಕೆ ಸಾಧ್ಯವಾಗಿಲ್ಲ.‌ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವತ್ತು ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಬೇಕಿತ್ತು. ಅದಕ್ಕೆ ಅಂತಾನೇ ಚುನಾವಣಾ ಅಧಿಕಾರಿ ಕಚೇರಿಗೆ ಹೋಗಿದ್ರು‌‌. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಚುನಾವಣಾ ಅಧಿಕಾರಿಗಳು 3 ಗಂಟೆ ಆಗೋಗಿರೋದ್ರಿಂದ ಇವತ್ತು ನಾಮಪತ್ರ ಸಲ್ಲಿಸೋಕೆ ಸಾಧ್ಯ ಇಲ್ಲ ಎಂದ್ರು. ಅನಿವಾರ್ಯವಾಗಿ ಕೇಜ್ರಿವಾಲ್ ವಾಪಸ್ ಬಂದರು.

ಇಷ್ಟಕ್ಕೂ ಕೇಜ್ರಿವಾಲ್ ಸಮಯಕ್ಕೆ ಸರಿಯಾಗಿ ಚುನಾವಣಾ ಕಚೇರಿಗೆ ತಲುಪದೇ ಇರಲು ಕಾರಣ ಆಗಿದ್ದು ಅವರೇ ಆಯೋಜಿಸಿದ್ದ ಮೆರವಣಿಗೆ. ಮಂದಿರ್ ಮಾರ್ಗದಲ್ಲಿರುವ ವಾಲ್ಮೀಕಿ ಮಂದಿರದಲ್ಲಿ ಪೂಜೆ ಮಾಡಿ ಅಲ್ಲಿಂದ ನವದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ‌ ಹೋಗಿ ನಾಮಪತ್ರ ಸಲ್ಲಿಸಬೇಕೆಂಬುದು ಅರವಿಂದ ಕೇಜ್ರಿವಾಲ್ ಲೆಕ್ಕಾಚಾರ ಆಗಿತ್ತು. ಅದರಂತೆ ಮೊದಲಿಗೆ ವಾಲ್ಮೀಕಿ ಮಂದಿರದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಸಾಗಿದರು. ಆದರೆ ಮೆರವಣಿಗೆಗೆ ನಿರೀಕ್ಷೆಗೂ ಮೀರಿ ಜನ‌ ಬಂದಿದ್ದರಿಂದ ಟ್ರಾಫಿಕ್ ಜಾಮ್ ಆಗಿ ತಡವಾಗಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಮಹತ್ವದ ಕಾರ್ಯಾಚರಣೆ: ಮೂವರು ಉಗ್ರರ ಹತ್ಯೆ

ವಾಸ್ತವವಾಗಿ ಆಮ್ ಆದ್ಮಿ ಪಕ್ಷ ಎಲ್ಲೂ ಮೆರವಣಿಗೆ, ಬೃಹತ್ ಸಭೆ-ಸಮಾರಂಭ ಮಾಡುತ್ತಿಲ್ಲ. ಆದರೆ ಇದಕ್ಕೆ ತದ್ವಿರುದ್ದವಾಗಿ ವಾಲ್ಮಿಕಿ ಮಂದಿರದಲ್ಲಿ ಪೂಜೆ ಮಾಡಿ ಮೆರವಣಿಗೆ ಮಾಡುವುದರ ಹಿಂದೆ ಬೇರೆ ಲೆಕ್ಕಾಚಾರ ಇತ್ತು. 2013ರಲ್ಲಿ ಆಮ್ ಆದ್ಮಿ ಪಕ್ಷ ಮೊದಲ ರಾಜಕೀಯ ನಿರ್ಣಯ ತೆಗೆದುಕೊಂಡಿದ್ದು ಇದೇ ವಾಲ್ಮಿಕಿ ಮಂದಿರದಲ್ಲಿ. ಅರವಿಂದ ಕೇಜ್ರಿವಾಲ್ ತಮ್ಮ ಪ್ರಚಾರ ಶುರುಮಾಡಿದ್ದು ಇದೇ ಮಂದಿರದಲ್ಲಿ, 25 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು ಇದೇ ನವದೆಹಲಿ ಕ್ಷೇತ್ರದಿಂದ. ಹಾಗಾಗಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಇವತ್ತು ನಾಮಪತ್ರ ಸಲ್ಲಿಸಲು ವಿಫಲವಾಗಿರುವ ಕೇಜ್ರಿವಾಲ್ 'ಜನ ಜಾಸ್ತಿ ಇದ್ದುದರಿಂದ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಜನ ಬಿಟ್ಟು ನಾನು ಹೇಗೆ ಬರಲಿ' ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ನಾಳೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು ಅರವಿಂದ ಕೇಜ್ರಿವಾಲ್ ಸೇರಿದಂತೆ ಉಳಿದವರೆಲ್ಲರೂ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಆದುದರಿಂದ ನಾಳೆ ಭರಪೂರ ನಾಮಪತ್ರಗಳ ಸಲ್ಲಿಕೆಯಾಗಲಿವೆ.

ಚುನಾವಣೆ ಹತ್ತಿರವಾಗುತ್ತಿದ್ದರೂ ಬಿಜೆಪಿ ಇವತ್ತು ಅಂಥ ಉತ್ಸಾಹ ತೋರಲಿಲ್ಲ. ಸಂಪೂರ್ಣ ಬಿಜೆಪಿ ಇವತ್ತು ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡ ಅಧಿಕಾರ ಸ್ವೀಕಾರ ಮಾಡಿದ ಸಂಭ್ರಮದಲ್ಲೇ ಇತ್ತು. ಎಲ್ಲಾ ನಾಯಕರು ಅದರಲ್ಲೇ ಬ್ಯುಸಿಯಾಗಿದ್ದರು. ಕಾಂಗ್ರೆಸ್ ಪಕ್ಷ ಸದ್ದಿಲ್ಲದೆ ನಾಮಪತ್ರ ಸಲ್ಲಿಕೆಯಲ್ಲಿ ಬ್ಯುಸಿಯಾಗಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: January 20, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading