ಬಿಜೆಪಿ ಬಾವುಟ ಹಿಡಿದ 100ಕ್ಕೂ ಅಧಿಕ ಮಂದಿಯಿಂದ ಅರವಿಂದ್​ ಕೇಜ್ರಿವಾಲ್​ ಕಾರಿನ ಮೇಲೆ ದಾಳಿ!

ದಾಳಿ ವೇಳೆ ವಾಹನದ ಕನ್ನಡಿ ಒಡೆದಿದೆ. ಕೇಜ್ರಿವಾಲ್​ ಅವರನ್ನು, ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ದಾಳಿ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಆಪ್​ ನಾಯಕರು ಆರೋಪಿಸಿದ್ದಾರೆ.

Rajesh Duggumane | news18
Updated:February 8, 2019, 6:50 PM IST
ಬಿಜೆಪಿ ಬಾವುಟ ಹಿಡಿದ 100ಕ್ಕೂ ಅಧಿಕ ಮಂದಿಯಿಂದ ಅರವಿಂದ್​ ಕೇಜ್ರಿವಾಲ್​ ಕಾರಿನ ಮೇಲೆ ದಾಳಿ!
ಕೇಜ್ರಿವಾಲ್​ ಕಾರಿನ ಮೇಲೆ ನಡೆದ ದಾಳಿ
Rajesh Duggumane | news18
Updated: February 8, 2019, 6:50 PM IST
ನವದೆಹಲಿ (ಫೆ.8): ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಸಂಚರಿಸುತ್ತಿದ್ದ ಕಾರಿನ ಮೇಲೆ ಶುಕ್ರವಾರ ಬಿಜೆಪಿ ಬಾವುಟ ಹಿಡಿದ ವ್ಯಕ್ತಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

ದೆಹಲಿ ಹೊರ ಭಾಗದಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಕೆಜ್ರೀವಾಲ್​ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ 100ಕ್ಕೂ ಅಧಿಕ ಮಂದಿ ಅವರ ವಾಹನದ ಮೇಲೆ ಕೋಲಿನಿಂದ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ.

ದಾಳಿ ವೇಳೆ ವಾಹನದ ಕನ್ನಡಿ ಒಡೆದಿದೆ. ಕೇಜ್ರಿವಾಲ್​ ಅವರನ್ನು, ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಈ ದಾಳಿ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡವಿದೆ ಎಂದು ಆಪ್​ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಕಾಲಿಡಲಿದ್ದಾರೆ ಈ ಕೋಟ್ಯಧಿಪತಿ..!

ದಾಳಿಯ ತಡೆಯಲು ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆಪ್​ ಹೇಳಿಕೊಂಡಿದೆ. “ದೆಹಲಿ ಪೊಲೀಸರು ಮುಖ್ಯಮಂತ್ರಿಗೆ ರಕ್ಷಣೆ ನೀಡಲು ಸಾಧ್ಯವಾಗದೇ ಇದ್ದರೆ, ಸಾಮಾನ್ಯರಿಗೆ ಹೇಗೆ ರಕ್ಷಣೆ ನೀಡುತ್ತಾರೆ? ಮುಖ್ಯಮಂತ್ರಿ ಮೇಲೆ ಈ ರೀತಿ ದಾಳಿಗಳು ಪದೇ ಪದೇ ನಡೆದಿರುವುದು ಬೇರೆ ರಾಜ್ಯಗಳಲ್ಲಿ ಎಲ್ಲಾದರೂ ಕಂಡಿದ್ದೀರಾ” ಎಂದು ಆಪ್​ ಪ್ರಶ್ನಿಸಿದೆ.

Loading...ಈ ಮೊದಲು ಕೂಡ ಕೇಜ್ರಿವಾಲ್​ ಮೇಲೆ ದಾಳಿ ನಡೆಸುವ ಪ್ರಯತ್ನಗಳು ನಡೆದಿದ್ದವು. ಕೆಲವರು ಚಪ್ಪಲ್ಲಿ ಹಾಗೂ ಮಸಿಯಿಂದ ದಾಳಿ ಮಾಡುವ ಪ್ರಯತ್ನ ನಡೆಸಿದ್ದರು. ಕಳೆದ ನವೆಂಬರ್​ ತಿಂಗಳಲ್ಲಿ ಕೇಜ್ರಿವಾಲ್​ ಮೇಲೆ ಮೆಣಸಿನ ಪುಡಿ ಎರೆಚಲು ಪ್ರಯತ್ನಿಸಿದ್ದರು.

ಇದನ್ನೂ ಓದಿ: ಒಂದೇ ಕಾಲೇಜು, ಒಂದೇ ಬ್ಯಾಚ್​ನ 57 ನಕಲಿ ವೈದ್ಯರು ಪತ್ತೆ

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...