PM Modi ನಾಡಲ್ಲಿ ರಾಜಕೀಯ ಹೆಣೆಯಲು ಮುಂದಾದ AAP: ಬಿಜೆಪಿಗೆ ಟಕ್ಕರ್ ಕೊಡಲು ಇವರಿಗೆ ಮಾತ್ರ ಸಾಧ್ಯನಾ?

ಮುಂಬರುವ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಫೈಟ್​ ಕೊಡಲು ಆಪ್​ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್​​ ನೂತನ ಸಿಎಂ ಭಗವಂತ್​ ಮಾನ್​ ಜೊತೆಯಾಗಿ ಕೇಜ್ರಿವಾಲ್​ 2 ದಿನಗಳ ಕಾಲ ಗುಜರಾತ್​ ಪ್ರವಾಸ ಕೈಗೊಂಡಿದ್ದಾರೆ. ಇಂದು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಉಭಯ ಮುಖ್ಯಮಂತ್ರಿಗಳು ಚರಕದಲ್ಲಿ ಹೆಣೆದರು.

ಕೇಜ್ರಿವಾಲ್​​, ಮಾನ್​

ಕೇಜ್ರಿವಾಲ್​​, ಮಾನ್​

  • Share this:
ಅಹಮದಾಬಾದ್​: ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Assembly Election Results) ಬಿಜೆಪಿಯ (BJP) ಕ್ಲೀನ್​​ಸ್ವೀಪ್​ಗೆ ತಡೆ ಹಾಕಿದ್ದೇ ಆಮ್​ ಆದ್ಮಿ ಪಾರ್ಟಿ(AAP​​). ಐದರಲ್ಲಿ ನಾಲ್ಕು ರಾಜ್ಯ ಬಿಜೆಪಿ ಗೆದ್ದರೆ, ಪಂಜಾಬ್​​ನಲ್ಲಿ ಆಪ್​​ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ಮಾತ್ರ ಸರ್ಕಾರ ಹೊಂದಿದ್ದ ಆಪ್​​ ತನ್ನ ಅಧಿಕಾರವನ್ನು ಪಂಜಾಬ್​ಗೆ ವಿಸ್ತರಿಸಿಕೊಂಡಿದೆ. ಬಿಜೆಪಿಯ ಗೆಲುವಿನ ಓಟಕ್ಕೆ, ಪ್ರಧಾನಿ ಮೋದಿಗೆ ಟಕ್ಕರ್​ ಕೊಡಬಲ್ಲ ವ್ಯಕ್ತಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ (Delhi CM Arvind Kejriwal) ಎಂದೇ ಒಂದು ವಾದ ಶುರುವಾಗಿದೆ. ಕೇಜ್ರಿವಾಲ್​ ಕೂಡ ರಾಜಕೀಯವಾಗಿ ಜಾಣ್ಮೆಯ ಹೆಜ್ಜೆ ಇಡುತ್ತಿದ್ದಾರೆ. ಮುಂಬರುವ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಫೈಟ್​ ಕೊಡಲು ಆಪ್​ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್​​ ನೂತನ ಸಿಎಂ ಭಗವಂತ್​ ಮಾನ್​ ಜೊತೆಯಾಗಿ ಕೇಜ್ರಿವಾಲ್​ 2 ದಿನಗಳ ಕಾಲ ಗುಜರಾತ್​ ಪ್ರವಾಸ ಕೈಗೊಂಡಿದ್ದಾರೆ. ಇಂದು ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಉಭಯ ಮುಖ್ಯಮಂತ್ರಿಗಳು ಚರಕದಲ್ಲಿ ಹೆಣೆದರು. ಮೋದಿ ನಾಡಲ್ಲಿ ಆಪ್​​​ ರಾಜಕೀಯ ಹೆಣೆಯಲು ಮುಂದಾಗಿ ಎಂದೇ ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಇದನ್ನೂ ಓದಿ: Imran Khan: ಇಮ್ರಾನ್ ಖಾನ್ ಹತ್ಯೆಗೆ ದೊಡ್ಡ ಸಂಚು ನಡೆದಿದೆಯೇ..? ಅವರೇ ಬಾಯ್ಬಿಟ್ಟರು ರಹಸ್ಯ!

ಗುಜರಾತ್​ ಭೇಟಿ ಬಗ್ಗೆ ಕೇಜ್ರಿವಾಲ್​ ಮಾತು

ಮಹಾತ್ಮ ಗಾಂಧಿ ಅವರ ಆಶ್ರಮದಲ್ಲಿರುವ ಹೃದಯ ಕುಂಜ್‌ನಲ್ಲಿ ಇಬ್ಬರು ನಾಯಕರು ಚರವನ್ನು ನೂಲುತ್ತಿರುವ ದೃಶ್ಯವನ್ನು ರಾಜಕೀಯವಾಗಿ ಅರ್ಥೈಸಲಾಗುತ್ತಿದೆ. ನಂತರ ನಾಯಕರು ಆಶ್ರಮದೊಳಗಿನ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿದರು.  ಸಬರಮತಿ ಆಶ್ರಮವು ಭಾರತದ ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಪ್ರಮುಖ ಕೇಂದ್ರವಾಗಿತ್ತು. ಮಹಾತ್ಮಾ ಗಾಂಧೀಜಿಯವರು ಈ ಆಶ್ರಮದಿಂದ ಬ್ರಿಟಿಷ್ ಉಪ್ಪಿನ ಕಾನೂನಿನ ವಿರುದ್ಧ ತಮ್ಮ ಐತಿಹಾಸಿಕ ದಂಡಿ ಮೆರವಣಿಗೆಯನ್ನು ಪ್ರಾರಂಭಿಸಿದರು.  ಆಶ್ರಮದ ಪ್ರವಾಸದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಗಾಂಧೀಜಿಯ ದೇಶದಲ್ಲಿ ಹುಟ್ಟಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ದೆಹಲಿ ಮುಖ್ಯಮಂತ್ರಿಯಾದ ನಂತರ ಇದು ನನ್ನ ಮೊದಲ ಭೇಟಿಯಾಗಿದೆ ಎಂದರು.

ಚರಕದೊಂದಿಗೆ ಪಂಜಾಬ್​ ಸಿಎಂ ನಂಟು

ಪಂಜಾಬ್​​ ಸಿಎಂ ಭಗವಂತ್ ಮಾನ್ ಮಾತನಾಡಿ, ನಾನು ಸ್ವಾತಂತ್ರ್ಯ ಹೋರಾಟಗಾರರ ಭೂಮಿ ಪಂಜಾಬ್‌ನಿಂದ ಬಂದಿದ್ದೇನೆ. ನಾನು ಇಲ್ಲಿ ಬಹಳಷ್ಟು ನೋಡಿದ್ದೇನೆ. ಗಾಂಧೀಜಿಯವರ ಪತ್ರಗಳು ಮತ್ತು ಅವರು ಮುನ್ನಡೆಸಿದ ವಿವಿಧ ಚಳುವಳಿಗಳು. ಚರಖಾ ಪಂಜಾಬ್‌ನ ಪ್ರತಿಯೊಂದು ಮನೆಯ ಭಾಗವಾಗಿದೆ. ನನ್ನ ತಾಯಿ ಮತ್ತು ಅಜ್ಜಿ ಕೂಡ ಬಳಸುತ್ತಾರೆ. ನನ್ನ ಬಾಲ್ಯದಿಂದಲೂ ಚರಕವನ್ನು ಬಳಸುವುದನ್ನು ನಾನು ನೋಡಿದ್ದೇನೆ. ನಾವು ರಾಷ್ಟ್ರೀಯವಾದಿಗಳು ಮತ್ತು ನಾವು ರಾಷ್ಟ್ರವನ್ನು ಪ್ರೀತಿಸುತ್ತೇವೆ. ನಾನು ಪಂಜಾಬ್ ಸಿಎಂ ಆದ ನಂತರ ಇದು ಗುಜರಾತ್‌ಗೆ ನನ್ನ ಮೊದಲ ಭೇಟಿಯಾಗಿದೆ ಎಂದರು.

ಇದನ್ನೂ ಓದಿ: Shocking: "ಮುಗ್ಧ ವೈದ್ಯರಿಗೆ ಕಿರುಕುಳ ಕೊಡಬೇಡಿ" ಡೆತ್‌ ನೋಟ್ ಬರೆದಿಟ್ಟು ವೈದ್ಯೆ ಆತ್ಮಹತ್ಯೆ; ಆಸ್ಪತ್ರೆಗಳು ಬಂದ್!

ಬಿಜೆಪಿಗೆ ಕೇಜ್ರಿವಾಲ್​ ಸವಾಲು

ಇತ್ತೀಚೆಗೆ ಕೇಜ್ರಿವಾಲ್​ ಭಾರತೀಯ ಜನತಾ ಪಕ್ಷಕ್ಕೆ ಹೊಸ ಸವಾಲನ್ನು ಹಾಕಿದ್ದಾರೆ. ದೆಹಲಿ ಮಹಾನಗರ ಪಾಲಿಕೆ (MCD) ಚುನಾವಣೆ ಮುಂದೂಡಿರುವ ಸಂಬಂಧ ಬಿಜೆಪಿ ವಿರುದ್ಧ ಕೇಜ್ರಿವಾಲ್​​ ಕೆಂಡಾಮಂಡಲರಾಗಿದ್ದಾರೆ. ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಸಮಯಕ್ಕೆ ಸರಿಯಾಗಿ ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಕೆಳಗಿಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ಕೇಜ್ರಿವಾಲ್ ಅವರು ತಮ್ಮ ಆಮ್ ಆದ್ಮಿ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಸೋತರೆ ರಾಜಕೀಯ ತ್ಯಜಿಸುವುದಾಗಿ ಘೋಷಿಸಿದರು. ಆಪ್​​ ಗೆದ್ದೇ ಗೆಲ್ಲುತ್ತೆ, ಬಿಜೆಪಿಗೆ ಸೋಲು ಖಚಿತ. ನನ್ನ ಲೆಕ್ಕಾಚಾರ ತಪ್ಪಾದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ ಎಂದು ಕೇಜ್ರಿವಾಲ್​ ಸವಾಲು ಹಾಕಿದರು.
Published by:Kavya V
First published: