Arvind Kejriwal: ನಾಪತ್ತೆಯಾದ್ರಾ ಆಮ್‌ ಆದ್ಮಿ ಶಾಸಕರು? ಬಿಜೆಪಿ ವಿರುದ್ಧ ಕೇಜ್ರಿವಾಲ್ ಕೆಂಡ!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿಯ ಆಡಳಿತಾರೂಢ ಎಎಪಿ ಪಕ್ಷದ 12ಕ್ಕಿಂತ ಹೆಚ್ಚು ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಈ ಆತಂಕದ ನಡುವೆಯೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಎಲ್ಲಾ ಶಾಸಕರ ಜತೆ ತುರ್ತು ಸಭೆ ನಡೆಸಿದರು.

  • Share this:

ದೆಹಲಿ: ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದ ದೆಹಲಿಯ (Delhi) ಆಮ್ ಆದ್ಮಿ ಸರ್ಕಾರ (Aam Admi Government) ಹಾಗೂ ಬಿಜೆಪಿ (BJP) ನಡುವಿನ ಸಂಘರ್ಷ (conflict) ಜೋರಾಗುತ್ತಿದೆ. ದೆಹಲಿಯ ಎಎಪಿ ಸರ್ಕಾರ (AAP Government) ಬೀಳಿಸಲು ಬಿಜೆಪಿ ನಾಯಕರು (BJP Leaders) ಪ್ರಯತ್ನಿಸುತ್ತಿದ್ದಾರೆ ಅಂತ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. “ನನ್ನ ಸರ್ಕಾರವನ್ನು ಬೀಳಿಸಲು 40 ಮಂದಿ ಶಾಸಕರಿಗೆ (MLAs) ಬಿಜೆಪಿ ಬರೋಬ್ಬರಿ 800 ಕೋಟಿ ರೂಪಾಯಿ ಹಣ ನೀಡಿದ್ದಾರೆ” ಅಂತ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ತಮ್ಮ ನಿವಾಸದಲ್ಲಿಂದು ಆಮ್ ಆದ್ಮಿ ಪಕ್ಷದ ಶಾಸಕರ ಸಭೆ ನಡೆಸಿದ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.


ಸಂಪರ್ಕಕ್ಕೆ ಸಿಗುತ್ತಿಲ್ಲವಾ ಆಮ್ ಆದ್ಮಿ ಶಾಸಕರು?


ದೆಹಲಿಯ ಆಡಳಿತಾರೂಢ ಎಎಪಿ ಪಕ್ಷದ 12ಕ್ಕಿಂತ ಹೆಚ್ಚು ಶಾಸಕರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಈ ಆತಂಕದ ನಡುವೆಯೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಎಲ್ಲಾ ಶಾಸಕರ ಜತೆ ತುರ್ತು ಸಭೆ ನಡೆಸಿದರು. ಬಿಜೆಪಿ ದೆಹಲಿ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ನಡೆಸುತ್ತಿದ್ದು, ತಲಾ ಶಾಸಕರಿಗೆ 20 ಕೋಟಿ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿದೆ ಎಂಬ ಗಂಭೀರ ಆರೋಪವನ್ನು ಎಎಪಿ ಮಾಡಿದೆ.


ತುರ್ತು ಸಭೆಗೆ 12ಕ್ಕೂ ಹೆಚ್ಚು ಶಾಸಕರು ಗೈರು


ಇನ್ನು ಇಂದಿನ ತುರ್ತು ಸಭೆಗೆ 12ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿದ್ದು, ಕೆಲವರು ಅಜ್ಞಾತ ಸ್ಥಳಕ್ಕೆ ತೆರಳಿರುವ ಮಾಹಿತಿ ಇದೆ. ನಿನ್ನೆ ಸಂಜೆ ಎಲ್ಲಾ ಶಾಸಕರಿಗೂ ಆಹ್ವಾನ ನೀಡಿ ಈ ಬಗ್ಗೆ ಸಭೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೂ 12ಕ್ಕೂ ಹೆಚ್ಚು ಶಾಸಕರು ಸಭೆಗೆ ಬಂದಿಲ್ಲ ಎನ್ನಲಾಗಿದೆ. ಹೀಗಾಗಿ ದೆಹಲಿ ಸರ್ಕಾರದ ಭವಿಷ್ಯ ಕೂಡ ಇಕ್ಕಟ್ಟಿಗೆ ಸಿಲುಕಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: Hemant Soren Disqualification: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ಗೆ ಅನರ್ಹತೆ ಭೀತಿ!


“40 ಶಾಸಕರಿಗೆ 800 ಕೋಟಿ ಲಂಚ”


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ಪಕ್ಷ ಬದಲಾಯಿಸಲು 40 ಎಎಪಿ ಶಾಸಕರಿಗೆ ಬಿಜೆಪಿ 800 ಕೋಟಿ ನೀಡಿದೆ ಅಂತ ಆರೋಪಿಸಿದ್ದಾರೆ. ತಮ್ಮ ನಿವಾಸದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರ ಸಭೆ ನಡೆಸಿ, ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಬಿಜೆಪಿ ನೀಡಿದ 800 ಕೋಟಿ ರೂಪಾಯಿಗಳ ಮೂಲವನ್ನು ಪ್ರಶ್ನಿಸಿದ್ದಾರೆ. ಇನ್ನು ಸಭೆ ಬಳಿಕ ಕೇಜ್ರಿವಾಲ್ ಅವರು ತಮ್ಮ ಶಾಸಕರೊಂದಿಗೆ ರಾಜ್‌ಘಾಟ್‌ಗೆ ತೆರಳಿ ಬಿಜೆಪಿಯ “ಆಪರೇಷನ್ ಕಮಲ” ವೈಫಲ್ಯವಾಗಲಿ ಅಂತ ಪ್ರಾರ್ಥಿಸಿದರು.


ದೆಹಲಿಯಲ್ಲಿ ಆಪರೇಷನ್‌ ಕಮಲ ವಿಫಲವಾಗಿದೆ”


ದೆಹಲಿಯಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ವಿಫಲವಾಗಿದೆ ಎಂದು ಆಮ್ ಆದ್ಮಿ ಹೇಳಿದೆ. ಈ ಬಗ್ಗೆ ಮಾತನಾಡಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, "ಎಎಎಪಿ ಶಾಸಕರು ಬಿಜೆಪಿಯವರ ಸಂಪರ್ಕದಲ್ಲಿ ಇಲ್ಲ, ನಮ್ಮ ಸಂಪರ್ಕದಲ್ಲೇ ಇದ್ದಾರೆ. ದೆಹಲಿ ಸರ್ಕಾರ ಯಾವುದೇ ಅಡೆತಡೆಗಳಿಲ್ಲದೆ ಸಂಪೂರ್ಣವಾಗಿ ಸ್ಥಿರವಾಗಿದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Telangana: ಶೀಘ್ರದಲ್ಲೇ ಮಂಡಿಯೂರಲಿದೆ ಸರ್ಕಾರ: ಕೆಸಿಆರ್​ಗೆ ಬಹಿರಂಗ ಎಚ್ಚರಿಕೆ ಕೊಟ್ಟ ಬಿಜೆಪಿ


ದೆಹಲಿ ವಿಧಾನಸಭೆ ಬಲಾಬಲ


ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಅಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರ ನಡೆಸುತ್ತಿದೆ. ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಪಾರುಪತ್ಯವನ್ನು ಭೇದಿಸಿ 62 ಶಾಸಕರನ್ನು ಗೆಲ್ಲಿಸಿಕೊಳ್ಳುವ ಮೂಲಕ ಎಎಪಿ ಸರ್ಕಾರವನ್ನು ರಚಿಸಿತ್ತು. ನಂತರದ ಚುನಾವಣೆಯಲ್ಲಿ ಪಂಜಾಬ್‍ನಲ್ಲೂ ಆಮ್‍ಆದ್ಮಿ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಸರ್ಕಾರ ರಚಿಸಿದೆ.

top videos
    First published: