• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Arvind Kejirwal: ಪ್ರಧಾನಿ ಮೋದಿ ಪದವಿ ವಿವರ ಕೇಳಿದ್ದ ಕೇಜ್ರಿವಾಲ್‌ಗೆ ಶಾಕ್, 25 ಸಾವಿರ ರೂಪಾಯಿ ದಂಡ ವಿಧಿಸಿದ ಹೈಕೋರ್ಟ್!

Arvind Kejirwal: ಪ್ರಧಾನಿ ಮೋದಿ ಪದವಿ ವಿವರ ಕೇಳಿದ್ದ ಕೇಜ್ರಿವಾಲ್‌ಗೆ ಶಾಕ್, 25 ಸಾವಿರ ರೂಪಾಯಿ ದಂಡ ವಿಧಿಸಿದ ಹೈಕೋರ್ಟ್!

ನರೇಂದ್ರ ಮೋದಿ- ಅರವಿಂದ್ ಕೇಜ್ರಿವಾಲ್

ನರೇಂದ್ರ ಮೋದಿ- ಅರವಿಂದ್ ಕೇಜ್ರಿವಾಲ್

ಪ್ರಧಾನಿ ಪದವಿ ಪ್ರಮಾಣಪತ್ರದ ವಿವರಗಳನ್ನು ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಗುಜರಾತ್ ಹೈಕೋರ್ಟ್ 25,000 ರೂ, ದಂಡ ವಿಧಿಸಿದೆ. ಈ ಮೊತ್ತವನ್ನು ನಾಲ್ಕು ವಾರಗಳಲ್ಲಿ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಠೇವಣಿ ಮಾಡುವಂತೆ ಆದೇಶ ನೀಡಿದೆ.

  • News18 Kannada
  • 5-MIN READ
  • Last Updated :
  • Gujarat, India
  • Share this:

ಅಹ್ಮದಾಬಾದ್: ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಉಳ್ಳವರು ಆರ್​ಟಿಐ (RTI ) ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರವನ್ನು ಪ್ರಧಾನ ಮಂತ್ರಿ ಕಚೇರಿ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (Arvind Kejirwal) ಅವರು ಕೇಂದ್ರ ಮಾಹಿತಿ ಆಯೋಗಕ್ಕೆ (Central Information Commission) ಅರ್ಜಿ ಸಲ್ಲಿಸಿದ್ದರು. ನಂತರ ಆಯೋಗ ಗುಜರಾತ್​ ವಿವಿಗೆ (Gujarat University) ಮೋದಿ ಪದವಿ ಬಗ್ಗೆ ಕೇಜ್ರಿವಾಲ್​ಗೆ ಮಾಹಿತಿ ನೀಡುವಂತೆ ಆದೇಶ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿದ್ದ ವಿವಿ ಹೈಕೋರ್ಟ್​ಗೆ ಮೆಟ್ಟಿಲೇರಿತ್ತು.


 ಇದೀಗ ಈ ಅರ್ಜಿ ಕುರಿತು ಗುಜರಾತ್​ ಹೈಕೋರ್ಟ್ ತೀರ್ಪು ನೀಡಿದ್ದು, ಪ್ರಧಾನಿ ಮೋದಿ ತಮ್ಮ ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಂತ್ರಿ ಕಚೇರಿ ಒದಗಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಆರ್‌ಟಿಐ ಅಡಿಯಲ್ಲಿ ಪ್ರಧಾನಿಯವರ ಶಿಕ್ಷಣದ ಬಗ್ಗೆ ಕೇಳುವುದು ಸೂಕ್ತವಲ್ಲ ಎಂದಿರುವ ಕೋರ್ಟ್, ಪಿಎಂ ಪದವಿ ಬಗ್ಗೆ ಮಾಹಿತಿ ಕೇಳಿ ಬೇಡಿಕೆಯಿಟ್ಟದ್ದ​ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ 25 ಸಾವಿರ ದಂಡ ವಿಧಿಸಿದೆ.


ಆದೇಶ ರದ್ಧು ಮಾಡಿದ ಹೈಕೋರ್ಟ್


ಮಾಹಿತಿ ಹಕ್ಕು ಅಡಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿ ಹಾಗೂ ಸ್ನಾತಕೋತ್ತರ ಪದವಿ ಬಗ್ಗೆ ಅರವಿಂದ್ ಕೇಜ್ರಿವಾಲ್​ ಅವರಿಗೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ ಗುಜರಾತ್​ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿತ್ತು. ಈ ಸೂಚನೆಯನ್ನು ಪ್ರಶ್ನಿಸಿ 2016ರಲ್ಲಿ ಗುಜರಾತ್ ವಿವಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ಏಕಸದಸ್ಯ ಪೀಠ ಪ್ರಧಾನ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ರದ್ದುಗೊಳಿಸಿದೆ.


ಇದನ್ನೂ ಓದಿ: Narendra Modi: ಏಪ್ರಿಲ್‌ 9ರಂದು ಬಂಡೀಪುರ ಉದ್ಯಾನವನದಲ್ಲಿ ಸಫಾರಿ ನಡೆಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ


ಕೇಜ್ರಿವಾಲ್​ಗೆ 25000 ದಂಡ


ಅಲ್ಲದೆ , ಪ್ರಧಾನಿ ಪದವಿ ಪ್ರಮಾಣಪತ್ರದ ವಿವರಗಳನ್ನು ಕೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಗುಜರಾತ್ ಹೈಕೋರ್ಟ್ 25,000 ರೂ, ದಂಡ ವಿಧಿಸಿದೆ. ಈ ಮೊತ್ತವನ್ನು ನಾಲ್ಕು ವಾರಗಳಲ್ಲಿ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಠೇವಣಿ ಮಾಡುವಂತೆ ಆದೇಶ ನೀಡಿದೆ. ಈ ಆದೇಶವನ್ನು ಸ್ವಲ್ಪ ಕಾಲ ತಡೆಹಿಡಿಯುವಂತೆ ಕೇಜ್ರಿವಾಲ್ ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.




2016ರಲ್ಲಿ ಮನವಿ ಸಲ್ಲಿಸಿದ್ದ ಕೇಜ್ರಿವಾಲ್


ಪ್ರಧಾನಿ ಮೋದಿ ಅವರು 1978 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಪದವಿ ಮತ್ತು 1983 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಚುನಾವಣಾ ದಾಖಲೆಗಳಲ್ಲಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೇಜ್ರಿವಾಲ್​ ಪ್ರಧಾನಿ ಮೋದಿ ಶಿಕ್ಷಣದ ಮಾಹಿತಿಯನ್ನು ಕೊಡುವಂತೆ ಕೇಂದ್ರ ಮಾಹಿತಿ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಕೇಂದ್ರ ಮಾಹಿತಿ ಆಯೋಗವು ಪ್ರಧಾನಿ ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಪ್ರಧಾನಿ ಕಚೇರಿ (ಪಿಎಂಒ), ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಗಳಿಗೆ ಆದೇಶ ನೀಡಿತ್ತು. ಆದರೆ, ಗುಜರಾತ್ ವಿಶ್ವವಿದ್ಯಾಲಯ ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.


ಇದನ್ನೂ ಓದಿ: Rahul Gandhi: ಮತ್ತೆ ಸಂಕಷ್ಟಕ್ಕೆ ಸಿಲುಕುತ್ತಾರಾ ರಾಹುಲ್ ಗಾಂಧಿ? ಕಾಂಗ್ರೆಸ್ ನಾಯಕನ ವಿರುದ್ಧ ದೂರು ನೀಡುವುದಾಗಿ ಲಲಿತ್ ಮೋದಿ ಎಚ್ಚರಿಕೆ


ಅನಕ್ಷರಸ್ಥ ಪಿಎಂ ದೇಶಕ್ಕೆ ಅಪಾಯಕಾರಿ


ಗುಜರಾತ್ ಹೈಕೋರ್ಟ್ ಆದೇಶ ಮತ್ತು ದಂಡದ ಕುರಿತು ಕೇಜ್ರಿವಾಲ್ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ' ಪ್ರಧಾನಿ ಏನು ವಿದ್ಯಾಬ್ಯಾಸ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ? ತನ್ನ ಪದವಿಯನ್ನು ನ್ಯಾಯಾಲಯದಲ್ಲಿ ಬಹಿರಂಗಪಡಿಸುವುದನ್ನು ಅವರು(ಮೋದಿ) ಬಲವಾಗಿ ವಿರೋಧಿಸುತ್ತಿರುವುದೇಕೇ? ಪದವಿ ವಿವರಗಳನ್ನು ಕೇಳಿದರೆ ಯಾರಾದರೂ ದಂಡ ಹಾಕುತ್ತಾರೆಯೇ? ಏನಾಗುತ್ತಿದೆ? ಅನಕ್ಷರಸ್ತ ಅಥವಾ ಕಡಿಮೆ ಶಿಕ್ಷಣ ಪಡೆದ ಪ್ರಧಾನಿ ದೇಶಕ್ಕೆ ಅಪಾಯಕಾರಿ" ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

First published: