ಉತ್ತರಾಖಂಡ ವಿಧಾನಸಭಾ ಚುನಾವಣೆ ಮೇಲೂ ಕಣ್ಣಿಟ್ಟ ಎಎಪಿ: ಗೆದ್ದರೆ 300 ಯುನಿಟ್​ ಉಚಿತ ವಿದ್ಯುತ್​

ಇತ್ತೀಚೆಗೆ ಅರವಿಂದ್​ ಕೇಜ್ರಿವಾಲ್​ ಅವರು ಪಂಜಾಬಿನಲ್ಲಿ ಇದೇ ರೀತಿ ಘೋಷಣೆಯನ್ನು ಮಾಡಿದ್ದರು. ಅಲ್ಲಿಯೂ ಸಹ 300 ಯುನಿಟ್​ ಕರೆಂಟ್​ ಫ್ರೀ ಕೊಡುವುದಾಗಿ ಹೇಳಿದ್ದರು. ಪಂಜಾಬಿನಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

ಅರವಿಂದ್ ಕೇಜ್ರಿವಾಲ್.

ಅರವಿಂದ್ ಕೇಜ್ರಿವಾಲ್.

 • Share this:
  ಪಂಜಾಬ್​​ನಿಂದ ಉತ್ತರಾಖಂಡಕ್ಕೆ ಹಾರಿರುವ ಆಮ್​ ಆದ್ಮಿ ಪಕ್ಷದ ಲೆಕ್ಕಾಚಾರ, ಹೌದು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಉತ್ತರಾಖಂಡದಲ್ಲೂ ಪಕ್ಷವನ್ನು ಬೇರೂರಿಸಲು ಯೋಜನೆ ಹಾಕುತ್ತಿದ್ದು, ಚುನಾವಣೋತ್ತರ ಕೆಲಸಗಳಿಂದ ಈ ರಾಜ್ಯದಲ್ಲೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಲು ಹೊರಟಿದೆ ಎನ್ನಬಹುದು.

  ಉತ್ತರಾಖಂಡದ ರಾಜಧಾನಿ ಡೆಹರಾಡೂನಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅರವಿಂದ ಕೇಜ್ರಿವಾಲ್​ 4 ಪ್ರಮುಖ ಘೋಷಣೆಗಳನ್ನು ಮಾಡಿದರು. 2022ರ ಹೊತ್ತಿಗೆ ಈ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಆದ ಕಾರಣ ಈ ಲೆಕ್ಕಚಾರವನ್ನು ಆಮ್​ ಆದ್ಮಿ ಪಕ್ಷ ಹಾಕಿಕೊಂಡಿದೆ. 300 ಯುನಿಟ್​ ವಿದ್ಯುತ್​ ಉಚಿತ, ರೈತರಿಗೆ ಉಚಿತ ವಿದ್ಯುತ್​, ನೇಕಾರರ ಹಳೆ ವಿದ್ಯುತ್​ ಬಾಕಿ ಮನ್ನಾ ಹಾಗೂ 24 ಗಂಟೆಯೂ ವಿದ್ಯುತ್​ ಪೂರೈಕೆ ಎಂದು ನಾಲ್ಕು ಅಂಶಗಳನ್ನು ಘೋಷಿಸಿದರು.

  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಈ ಘೋಷಣೆಗು ಮುನ್ನಾದಿನ ’’ಉತ್ತರಖಂಡದ ಜನತೆ ಏಕೆ ವಿದ್ಯುತ್ತನ್ನು ಉಚಿತವಾಗಿ ಪಡೆಯಬಾರದು, ಉತ್ತರಖಂಡವೇ ಉತ್ಪಾದಿಸುವ ವಿದ್ಯುತ್ತನ್ನು ದೆಹಲಿ ಜನರು ಉಚಿತವಾಗಿ ಪಡೆಯುತ್ತಿರುವಾಗ ಇವರು ಏಕೆ ಪಡೆಯಬಾರದು,’’ ಎಂದು ಪ್ರಶ್ನಿಸಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಸ್ಪರ್ಧಿಸುವುದು ಇದರಿಂದ ಖಚಿತವಾಗಿದೆ.

  ಉತ್ತರಖಂಡ ಹೆಚ್ಚು ವಿದ್ಯುತ್ತನ್ನು ಉತ್ಪಾದಿಸುತ್ತದೆ ಅಲ್ಲದೇ ಅದನ್ನು ಮಾರಾಟ ಮಾಡುತ್ತದೆ. ಮತ್ತೆ ಏಕೆ ಇಲ್ಲಿಯ ಜನರು ಅತ್ಯಂತ ಹೆಚ್ಚಿನ ಬೆಲೆಗೆ ವಿದ್ಯುತ್​ ಸಂಪರ್ಕ ಪಡೆಯಬೇಕು. ದೆಹಲಿ ಕಿಂಚಿತ್ತೂ ವಿದ್ಯುತ್​ ಉತ್ಪಾದಿಸುವುದಿಲ್ಲ, ಎಲ್ಲವನ್ನು ಪಕ್ಕದ ರಾಜ್ಯಗಳಿಂದ ಖರೀದಿಸುತ್ತದೆ. ಆದರೂ ನಮ್ಮಲ್ಲಿ ಉಚಿತವಾಗಿ ಕೊಡುತ್ತಿದ್ದೇವೆ. ಮತ್ತ್ಯಾಕೆ ಉತ್ತರಖಂಡದ ಜನತೆ ಉಚಿತ ವಿದ್ಯುತ್​ ಪಡೆಯುತ್ತಿಲ್ಲ. ಇದರ ಕುರಿತು ನಾಳೆ ನೋಡೋಣ’’ ಎಂದು ಶನಿವಾರ ಟ್ವೀಟ್​ ಮಾಡಿದ್ದ ಅರವಿಂದ್​ ಕೇಜ್ರಿವಾಲ್​ ಇತರೇ ಪಕ್ಷಗಳಿಗೆ ಶಾಕ್​ ನೀಡಿದ್ದಾರೆ.

  ಇತ್ತೀಚೆಗೆ ಅರವಿಂದ್​ ಕೇಜ್ರಿವಾಲ್​ ಅವರು ಪಂಜಾಬಿನಲ್ಲಿ ಇದೇ ರೀತಿ ಘೋಷಣೆಯನ್ನು ಮಾಡಿದ್ದರು. ಅಲ್ಲಿಯೂ ಸಹ 300 ಯುನಿಟ್​ ಕರೆಂಟ್​ ಫ್ರೀ ಕೊಡುವುದಾಗಿ ಹೇಳಿದ್ದರು. ಪಂಜಾಬಿನಲ್ಲೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.

  ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅರವಿಂದ್​ ಕೇಜ್ರಿವಾಲ್​, ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.  ಇನ್ನು ಮುಂದೆ ಈ ರಾಜ್ಯವನ್ನು ಯಾರೂ ಹಾಳು ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

  ಎರಡೂ ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೆಸ್​ ಸೇರಿಕೊಂಡು ಒಪ್ಪಂದ ಮಾಡಿಕೊಂಡಿವೆ. 2000 ನೇ ಇಸವಿಯಿಂದ ಎರಡೂ ಪಕ್ಷಗಳು ಈ ರಾಜ್ಯವನ್ನು ಸಂಪೂರ್ಣವಾಗಿ ದೋಚಿವೆ. ಅಲ್ಲದೆ ಆಡಳಿತಾರೂಡ ಪಕ್ಷವು ಮುಖ್ಯಮಂತ್ರಿಯನ್ನೇ ಹೊಂದಿಲ್ಲ, ಇಡೀ ರಾಜಕೀಯ ಇತಿಹಾಸದಲ್ಲಿ ತನ್ನದೇ ಪಕ್ಷದ ಮುಖ್ಯಮಂತ್ರಿಯನ್ನು ಅಪ್ರಯೋಜಕ ಎಂದು ಪಕ್ಷವೇ ಜರಿಸಿದಿರುವುದನ್ನು ಎಲ್ಲಾದರೂ ನೋಡಿದ್ದೀರಾ’’ ಎಂದು ವ್ಯಂಗ್ಯವಾಡಿದರು.

  ಇದನ್ನೂ ಓದಿ: World Population Day: ಉ.ಪ್ರ. ಜನಸಂಖ್ಯೆ ನೀತಿ ಬಿಡುಗಡೆಗೆ ಕ್ಷಣಗಣನೆ; ಜನಸಂಖ್ಯಾ ಸ್ಫೋಟದ ಸಮಸ್ಯೆ ಬಿಚ್ಚಿಟ್ಟ ಯೋಗಿ

  ವಿರೋಧ ಪಕ್ಷವೂ ಸಹ ಯಾವುದೇ ನಾಯಕನನ್ನು ಹೊಂದಿಲ್ಲ. ಇವರೆಲ್ಲ ಕಳೆದ ತಿಂಗಳು ದೆಹಲಿಗೆ ತನ್ನ ನಾಯಕನನ್ನು ಹುಡುಕಿಕೊಳ್ಳಲು ದೆಹಲಿಗೆ ಬಂದಿದ್ದರು.  ಇವರುಗಳು ಎಂದಿಗೂ ಉತ್ತರಖಂಡದ ಅಭಿವೃದ್ದಿಯ ಬಗ್ಗೆ ಯೋಚಿಸುವುದಿಲ್ಲ. ಇಲ್ಲಿನ ಜನರೇ ಮೊದಲು ಯೋಚಿಸಬೇಕು. ಎಂದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: