Corona Vaccine: ಲಸಿಕೆ ಹಾಕಿಸಿಕೊಂಡರೆ 20 ಕೆ.ಜಿ. ಅಕ್ಕಿ ಫ್ರೀ..!; ವ್ಯಾಕ್ಸಿನ್​ಗಾಗಿ ಮುಗಿಬಿದ್ದ ಜನರು

ಉಚಿತವಾಗಿ 20 ಕೆಜಿ ಅಕ್ಕಿ ಸಿಗುತ್ತದೆ ಎಂದು ಹಳ್ಳಿ ಜನರು ದೂರದ ಊರುಗಳಿಂದ ಕಾಲ್ನಡಿಗೆಯಲ್ಲೇ ಬಂದರು. ಮುಂದಿನ ದಿನಗಳಲ್ಲಿ ಹಳ್ಳಿಗಳಿಗೆ ಹೋಗಿ ವ್ಯಾಕ್ಸಿನ್​ ಹಾಕುವ ಕಾರ್ಯ ಮಾಡಲಾಗುತ್ತದೆ ಎಂದರು.

ಲಸಿಕೆ-ಅಕ್ಕಿ

ಲಸಿಕೆ-ಅಕ್ಕಿ

  • Share this:
    ಜನ ಕೊರೋನಾ ಲಸಿಕೆ ಪಡೆಯಲಿ ಎಂದು ಸರ್ಕಾರಗಳು ಒಂದಲ್ಲ ಒಂದು ಸರ್ಕಸ್ ಮಾಡುತ್ತಿವೆ. ಲಸಿಕೆ ಹಾಕಿಸಿಕೊಂಡವರಿಗೆ ಉಚಿತ ಬಿಯರ್ ನೀಡಲಾಗುತ್ತದೆ ಎಂದು ಅಮೆರಿಕದಲ್ಲಿ ಘೋಷಿಸಲಾಗಿತ್ತು. ಇನ್ನು ಕೆಲವೆಡೆ ಅನೇಕ ಆಫರ್​ಗಳನ್ನು ನೀಡಲಾಗುತ್ತಿದೆ. ಆದರೂ ಸಹ ಜನ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಂದಾಗುತ್ತಿಲ್ಲ. ಅರುಣಾಚಲ ಪ್ರದೇಶದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಒಂದು ಸೂಪರ್ ಐಡಿಯಾ ಮಾಡಲಾಗಿದೆ ಯಾರೆಲ್ಲಾ ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಾರೋ ಅವರಿಗೆ ಉಚಿತವಾಗಿ 20 ಕೆ.ಜಿ ಅಕ್ಕಿ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ. ಈ ಪ್ರಯೋಗ ಸಾಕಷ್ಟು ಯಶಸ್ವಿಯಾಗಿದ್ದು, ಬಹಳ ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ಹಳ್ಳಿ ಜನರಲ್ಲಿ ಲಸಿಕೆ ಬಗ್ಗೆ ಇರುವ ವದಂತಿಗಳನ್ನು ಹೋಗಲಾಡಿಸಿ, ಜಾಗೃತಿ ಮೂಡಿಸಲಾಗುತ್ತಿದೆ. ಲೋವರ್​ ಸುಬನ್ಸಿರಿ ಜಿಲ್ಲೆಯ ಯಜಾಲಿಯ ಸರ್ಕಲ್​​ ಅಧಿಕಾರಿ ತಾಶಿ ವಾಂಗ್​ಚುಕ್​ ಥೊಂಗ್​ಡಾಕ್​ ಅವರು ಈ ಹೊಸ ಪ್ರಯೋಗವನ್ನು ಮಾಡಿದ್ದಾರೆ. 45 ವರ್ಷಕ್ಕಿಂತ ಮೇಲ್ಪಟ್ಟವರು ಕೊರೋನಾ ವ್ಯಾಕ್ಸಿನ್​ ಹಾಕಿಸಿಕೊಂಡವರಿಗೆ 20 ಕೆ.ಜಿ. ಅಕ್ಕಿ ನೀಡುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್​ ಪ್ರಮಾಣವನ್ನು ಹೆಚ್ಚಿಸಲು ಇನ್ನೂ ಅನೇಕ ತಂತ್ರಗಳನ್ನು ರೂಪಿಸುತ್ತಿರುವುದಾಗಿ ಅಧಿಕಾರಿ ಹೇಳಿದ್ದಾರೆ. ಉಚಿತ ಅಕ್ಕಿ ಕೊಡುತ್ತೇವೆ ಎಂದ ಬಳಿಕ 80 ಜನರು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದೊಂದು ಯಶಸ್ವಿ ಪ್ರಯೋಗವಾಗಿದೆ.

    ಇದನ್ನೂ ಓದಿ:Viral Photo: ಮೋರಿ ಕ್ಲೀನ್ ಮಾಡಿಸಿಲ್ಲ ಎಂದು ಕಂಟ್ರಾಕ್ಟರ್ ಮೇಲೆ ಕಸ ಸುರಿದ ಶಾಸಕ

    ಜೂನ್ 20 ರೊಳಗೆ ನಮ್ಮ ಯಜಲಿ ವಲಯದಲ್ಲಿ ಶೇ.100ರಷ್ಟು ವ್ಯಾಕ್ಸಿನೇಷನ್​ ಸಾಧಿಸುವುದು ನಮ್ಮ ಉದ್ದೇಶವಾಗಿದೆ. ಇಂದು ಮಧ್ಯಾಹ್ನದೊಳಗೆ 80 ಜನರು ಲಸಿಕೆ ತೆಗೆದುಕೊಳ್ಳಲು ಬಂದಿದ್ದಾರೆ. ಯಜಲಿ ಸರ್ಕಲ್​​ನಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರು 1399 ಜನರಿದ್ದಾರೆ ಎಂದು ಥೊಂಗ್​ಡಾಕ್​ ಹೇಳಿದ್ದಾರೆ.

    ಉಚಿತವಾಗಿ 20 ಕೆಜಿ ಅಕ್ಕಿ ಸಿಗುತ್ತದೆ ಎಂದು ಹಳ್ಳಿ ಜನರು ದೂರದ ಊರುಗಳಿಂದ ಕಾಲ್ನಡಿಗೆಯಲ್ಲೇ ಬಂದರು. ಮುಂದಿನ ದಿನಗಳಲ್ಲಿ ಹಳ್ಳಿಗಳಿಗೆ ಹೋಗಿ ವ್ಯಾಕ್ಸಿನ್​ ಹಾಕುವ ಕಾರ್ಯ ಮಾಡಲಾಗುತ್ತದೆ ಎಂದರು.

    ಇದನ್ನೂ ಓದಿ:Sanchari Vijay Accident: ಅಪಘಾತದಿಂದ ನಟ ಸಂಚಾರಿ ವಿಜಯ್​ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ

    45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಶುಕ್ರವರಾ-ಶನಿವಾರ ಮನೆ-ಮನೆಗೆ ಭೇಟಿ ನೀಡಲು ಚಿಂತನೆ ನಡೆಸಿದ್ದೇವೆ. ಉಚಿತವಾಗಿ ಅಕ್ಕಿ ನೀಡುವ ಕಾರ್ಯ ಮುಂದುವರೆಯುತ್ತದೆ. ಆದರೆ 20 ಕೆ.ಜಿ.ಯ ಬದಲಾಗಿ 10 ಕೆ.ಜಿ ನೀಡಲಾಗುತ್ತದೆ ಎಂದು ಹೇಳಿದರು.

    ತವಾಂಗ್​ನ ರಿಮೋಟ್​ ಸರ್ಕಲ್​​ನಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರ ವ್ಯಾಕ್ಸಿನೇಷನ್​ ದರ ಶೇ.99ರಷ್ಟಿದ್ದು, ಯಶಸ್ಸಿನ ಪ್ರಮಾಣವನ್ನು ದಾಖಲಿಸಿದೆ. ಮೊಗ್ಟೋ ವಲಯದಲ್ಲಿ ವೈದ್ಯಕೀಯ ಕಾರಣಗಳನ್ನು ಹೊಂದಿರುವ 3 ಜನರನ್ನು ಹೊರತುಪಡಿಸಿ, ನಿರ್ದಿಷ್ಟ ವಯಸ್ಸಿನ 617 ಜನರು ಲಸಿಕೆ ಪಡೆದಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    Published by:Latha CG
    First published: