HOME » NEWS » National-international » ARUN SINGH IS THE NEW BJP IN CHARGE OF KARNATAKA SESR

ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ನೇಮಕ; ಸಿಟಿ ರವಿಗೆ ಮೂರು ರಾಜ್ಯಗಳ ಹೊಣೆ

ಉತ್ತರ ಪ್ರದೇಶ ಸಂಸದರಾಗಿರುವ ಅರುಣ್​ ಸಿಂಗ್​ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ

news18-kannada
Updated:November 13, 2020, 11:10 PM IST
ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ನೇಮಕ; ಸಿಟಿ ರವಿಗೆ ಮೂರು ರಾಜ್ಯಗಳ ಹೊಣೆ
ಅಮಿತ್​ ಶಾರೊಂದಿಗೆ ಅರುಣ್ ಸಿಂಗ್
  • Share this:
ನವದೆಹಲಿ (ನ.13): ಬಿಹಾರ ಚುನಾವಣೆ ಮತ್ತು ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಹೈ ಕಮಾಂಡ್​ ರಾಜ್ಯಗಳ ಉಸ್ತುವಾರಿಯ ಹೊಸ ತಂಡವನ್ನು ಘೋಷಿಸಿದೆ. ಕರ್ನಾಟಕ ರಾಜ್ಯದ ಉಸ್ತುವಾರಿಯಾಗಿ ಅರುಣ್​​ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಉಪ ಉಸ್ತುವಾರಿಯಾಗಿ ಡಿಕೆ ಅರುಣಾ ಅವರನ್ನು ನೇಮಿಸಲಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಿಟಿ ರವಿ ಅವರನ್ನು ಮಹಾರಾಷ್ಟ್ರ, ಗೋವಾ, ತಮಿಳುನಾಡು ಮೂರು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಗಿದೆ. ಇದೇ ವೇಳೆ ಕಾರ್ಕಳದ ಶಾಸಕ ಸುನೀಲ್​ ಕುಮಾರ್ ಅವರನ್ನು ಕೇರಳ ರಾಜ್ಯ ಬಿಜೆಪಿ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಇವರಾಗಿದ್ದು, ಇದೀಗ ಸುನೀಲ್ ಗೆ ಕೇರಳ ಸಹ  ಉಸ್ತುವಾರಿಯಾಗಿ‌ ನೇಮಕಗೊಂಡಿದ್ದರೆ, ಉಸ್ತುವಾರಿಯಾಗಿ ಸಿಪಿ ರಾಧಾಕೃಷ್ಣನ್​ ನೇಮಕಗೊಂಡಿದ್ದಾರೆಇನ್ನು ಉತ್ತರ ಪ್ರದೇಶದ ಉಸ್ತುವಾರಿಯನ್ನು ರಾಧಾ ಮೋಹನ್​ ಸಿಂಗ್​ ಗೆ ನೀಡಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್​ ಚುಗ್​ ಅವರನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್​, ತೆಲಂಗಾಣ ಉಸ್ತುವಾರಿ ನೀಡಲಾಗಿದೆ. ಭುಪೇಂದ್ರ ಯಾದವ್​ಗೆ ಬಿಹಾರ ಮತ್ತು ಗುಜರಾತ್​ ಜವಾಬ್ದಾರಿ ನೀಡಲಾಗಿದೆ.ಪಕ್ಷದ ವಕ್ತಾರರಾಗಿರುವ ಸಂಬಿತ್​ ಪತ್ರಾ ಅವರಿಗೆ ಮಣಿಪುರದ ಹೊಣೆಗಾರಿಕೆ ನೀಡಲಾಗಿದೆ, ಪಶ್ಚಿಮ ಬಂಗಾಳದ ಉಸ್ತುವಾರಿಯಾಗಿ ಕೈಲಾಶ್​ ವಿಜಯ್​ ಮುಂದುವರೆಯಲಿದ್ದಾರೆ. ಅರವಿಂದ್​ ಮೋಹನ್​ ಹಾಗೂ ಅಮಿತ್​ ಮಾಳವಿಯಾ ಅವರನ್ನು ಪಶ್ಚಿಮ ಬಂಗಾಳದ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.
Published by: Seema R
First published: November 13, 2020, 11:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories