ಸೋನಿಯಾ ಅಡ್ಡೆಗೆ ಕೈಹಾಕಿದ್ದ ಮಾಜಿ ಕೇಂದ್ರ ಸಚಿವ; ರಾಯ್ ಬರೇಲಿ ಕ್ಷೇತ್ರದ ಅಭಿವೃದ್ಧಿಯಲ್ಲಿದೆ ಜೇಟ್ಲಿ ಪಾಲು

ಜೇಟ್ಲಿ ಅವರು ತಮ್ಮ ಕೋಟಾದಲ್ಲಿರುವ ಹಣವನ್ನು ರಾಯ್ ಬರೇಲಿಗೆ ಮುಡಿಪಾಗಿಡುವ ನಿರ್ಧಾರ ಕೈಗೊಂಡಿದ್ದರು. ಬಳಿಕ ಕಳೆದ ವರ್ಷ ನವೆಂಬರ್ ತಿಂಗಳ ಮೊದಲಾರ್ಧದಲ್ಲಿ ಹಣಕಾಸು ಸಚಿವರು ರಾಯ್ ಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

Ganesh Nachikethu | news18
Updated:August 24, 2019, 3:09 PM IST
ಸೋನಿಯಾ ಅಡ್ಡೆಗೆ ಕೈಹಾಕಿದ್ದ ಮಾಜಿ ಕೇಂದ್ರ ಸಚಿವ; ರಾಯ್ ಬರೇಲಿ ಕ್ಷೇತ್ರದ ಅಭಿವೃದ್ಧಿಯಲ್ಲಿದೆ ಜೇಟ್ಲಿ ಪಾಲು
ಸೋನಿಯಾ ಗಾಂಧಿ, ಅರುಣ್​​ ಜೇಟ್ಲಿ
Ganesh Nachikethu | news18
Updated: August 24, 2019, 3:09 PM IST
ನವದೆಹಲಿ(ಆಗಸ್ಟ್​​.24): ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಪಾಲಿನ ಸಂಸದರ ನಿಧಿಯನ್ನು ರಾಯ್ ಬರೇಲಿ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ದರು. ಉತ್ತರ ಪ್ರದೇಶದ ಬಿಜೆಪಿ ವಕ್ತಾರ ಹೀರೋ ಬಾಜಪೇಯಿ ಅವರೇ ಖುದ್ದು ಈ ವಿಚಾರವನ್ನು ಹೊರಗೆಡವಿದ್ದರು. ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ನಿರೀಕ್ಷಿಸಿದಷ್ಟು ಅಭಿವೃದ್ಧಿಯಾಗಿಲ್ಲ ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾಗಿ ಜೇಟ್ಲಿ ಅವರ ಪ್ರತಿನಿಧಿಯೂ ಆಗಿರುವ ಬಾಜಪೇಯಿ ತಿಳಿಸಿದ್ದರು. ರಾಯ್ ಬರೇಲಿ ಕ್ಷೇತ್ರದ ಮೇಲೆ ಗಾಂಧಿ ಕುಟುಂಬಕ್ಕಿರುವ ಹಿಡಿತವನ್ನು ತಪ್ಪಿಸಲು ಬಿಜೆಪಿ ಮಾಡಿರುವ ಮಾಸ್ಟರ್ ಪ್ಲಾನ್ ಇದೆಂಬ ಅಭಿಪ್ರಾಯಗಳು ಕೇಳಿಬಂದಿತ್ತು.

ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಸಂಸದರಿಗೂ ವಾರ್ಷಿಕ 5 ಕೋಟಿ ರೂ. ಹಣವನ್ನು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಬಳಕೆ ಮಾಡಬಹುದಾಗಿದೆ. ಅರುಣ್ ಜೇಟ್ಲಿ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ರಾಜ್ಯಸಭಾ ಸದಸ್ಯರು ತಾವು ಆಯ್ಕೆಯಾದ ರಾಜ್ಯದಲ್ಲಿ ತಮ್ಮಿಚ್ಛೆಯ ಜಿಲ್ಲೆಗಳಿಗೆ 5 ಕೋಟಿ ರೂ.ವರೆಗಿನ ಕಾಮಗಾರಿಗಳನ್ನ ಉಪಯೋಗಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುವ ಅಧಿಕಾರ ಹೊಂದಿರುತ್ತಾರೆ.

ಜೇಟ್ಲಿ ಅವರು ತಮ್ಮ ಕೋಟಾದಲ್ಲಿರುವ ಹಣವನ್ನು ರಾಯ್ ಬರೇಲಿಗೆ ಮುಡಿಪಾಗಿಡುವ ನಿರ್ಧಾರ ಕೈಗೊಂಡಿದ್ದರು. ಬಳಿಕ ಕಳೆದ ವರ್ಷ ನವೆಂಬರ್ ತಿಂಗಳ ಮೊದಲಾರ್ಧದಲ್ಲಿ ಹಣಕಾಸು ಸಚಿವರು ರಾಯ್ ಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮಂಡಿಸಿದ್ದ ಅರುಣ್​​ ಜೇಟ್ಲಿ; ಮೋದಿಗೆ ಬರೆದ ಕೊನೇ ಪತ್ರದಲ್ಲಿ ಏನಿತ್ತು?

ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳನ್ನು ಗಾಂಧಿ ಕುಟುಂಬದವರೇ ಬಹುತೇಕ ಪ್ರತಿನಿಧಿಸುತ್ತಾ ಬಂದಿರುವುದು. ಹಾಗೆಯೇ ರಾಯ್ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಿಂದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸಂಸದರಾಗಿ ಚುನಾಯಿತರಾಗಿದ್ದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಅವರೂ ಈ ಹಿಂದೆ ಈ ಕ್ಷೇತ್ರಗಳನ್ನ ಪ್ರತಿನಿಧಿಸಿದ್ದರು.

ಪ್ರತಿಷ್ಠಿತ ರಾಜಕೀಯ ಕುಟುಂಬದ ಸದಸ್ಯರು ನಿರಂತರವಾಗಿ ಪ್ರತಿನಿಧಿಸುತ್ತಾ ಬಂದಿದ್ದರೂ ರಾಯ್ ಬರೇಲಿ ಕ್ಷೇತ್ರ ಈಗಲೂ ಕತ್ತಲಲ್ಲಿದೆ ಎಂಬುದು ಬಿಜೆಪಿಯ ಆರೋಪವಾಗಿತ್ತು. ಹೀಗಾಗಿ, ಈ ಕ್ಷೇತ್ರಕ್ಕೆ ಹೊಸ ಬೆಳಕು ನೀಡಲು ಜೇಟ್ಲಿ ಆಗಮಿಸಿದ್ದರು ಜೇಟ್ಲಿ ತಮ್ಮ ಸಂಸದರ ನಿಧಿಯಿಂದ 2.5 ಕೋಟಿ ಹಣವನ್ನು ರಾಯ್ ಬರೇಲಿಯ ಮುಖ್ಯ ಅಭಿವೃದ್ಧಿ ಅಧಿಕಾರಿಗೆ ನೀಡಿದ್ದರು. ಜೇಟ್ಲಿ ಅವರು ಕ್ಷೇತ್ರದ ಜನರಿಗೆ ಆಶಾಕಿರಣದಂತೆ ಕಾಣಿಸಿದ್ದರು ಎಂದು ಉ.ಪ್ರ. ಬಿಜೆಪಿ ವಕ್ತಾರರು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Arun Jaitley Death: ಬಿಜೆಪಿ ಟ್ರಬಲ್​ ಶೂಟರ್ ಅರುಣ್ ಜೇಟ್ಲಿ ನಡೆದು ಬಂದ ಹಾದಿ
Loading...

ಕಳೆದ ಬಾರಿಯ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅಷ್ಟರ ಮಟ್ಟಿಗೆ ಇದು ಕಾಂಗ್ರೆಸ್ ಭದ್ರಕೋಟೆ ಎನಿಸಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
----------------
First published:August 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...