• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Arun Jaitley Death Anniversary: ಬಿಜೆಪಿ ಟ್ರಬಲ್​​ ಶೂಟರ್​​​​​ ಅರುಣ್​​ ಜೇಟ್ಲಿ ಪುಣ್ಯ ತಿಥಿ: ಪ್ರಧಾನಿ ಮೋದಿ, ಅಮಿತ್​​ ಶಾ ಗೌರವ ನಮನ

Arun Jaitley Death Anniversary: ಬಿಜೆಪಿ ಟ್ರಬಲ್​​ ಶೂಟರ್​​​​​ ಅರುಣ್​​ ಜೇಟ್ಲಿ ಪುಣ್ಯ ತಿಥಿ: ಪ್ರಧಾನಿ ಮೋದಿ, ಅಮಿತ್​​ ಶಾ ಗೌರವ ನಮನ

ಕೇಂದ್ರದ ಮಾಜಿ ಸಚಿವ ಅರುಣ್​​ ಜೇಟ್ಲಿ

ಕೇಂದ್ರದ ಮಾಜಿ ಸಚಿವ ಅರುಣ್​​ ಜೇಟ್ಲಿ

ಜೇಟ್ಲಿಯವರ ಪುಣ್ಯಸ್ಮರಣೆ ಅಂಗವಾಗಿ ದೇಶದ ಹಲವೆಡೆ ಇಂದು ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಸ್ವಯಂ ಸೇವಕರು ಮತ್ತು ಅಭಿಮಾನಿಗಳು ರಕ್ತದಾನ ಮಾಡಲಿದ್ದಾರೆ.

ಮುಂದೆ ಓದಿ ...
 • Share this:

  ನವದೆಹಲಿ(ಆ.24): ಭಾರತೀಯ ಜನತಾ ಪಕ್ಷದ ಟ್ರಬಲ್​ ಶೂಟರ್​​ ಮತ್ತು ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್​​ ಜೇಟ್ಲಿ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಅರುಣ್​​ ಜೇಟ್ಲಿಯವರ ಮೊದಲನೇ ವರ್ಷದ ಪುಣ್ಯಸ್ಮರಣೆ ಭಾಗವಾಗಿ ಇಂದು ಇಡೀ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ನೆನಪಿನ ಕಾರ್ಯಕ್ರಮಗಳು ಆಯೋಜಿಸಿದ್ದಾರೆ. ಇನ್ನೊಂದೆಡೆ ಜೇಟ್ಲಿ ಕುಟುಂಬದವರು ಕೂಡ ಕೇಂದ್ರ ಮಾಜಿ ಸಚಿವರ ಮೊದಲ ವರ್ಷದ ಪುಣ್ಯ ತಿಥಿ ಆಚರಿಸುತ್ತಿದ್ದಾರೆ. ಇವರ ಪುಣ್ಯ ತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಸೇರಿದಂತೆ ಹಲವರು ಇಂದು ಗೌರವ ನಮನ ಸಲ್ಲಿಸಿದ್ದಾರೆ. ದೇಶಕ್ಕೆ ಜೇಟ್ಲಿಯವರು ಸಲ್ಲಿಸಿದ ಸೇವೆಯನ್ನು ನೆನೆದಿದ್ದಾರೆ.


  "ಕಳೆದ ವರ್ಷ ಇದೇ ದಿನ ನಾವು ಅರುಣ್​​ ಜೇಟ್ಲಿಯವರನ್ನು ಕಳೆದುಕೊಂಡೆವು. ನಾನು ಇಂದು ನನ್ನ ಸ್ನೇಹಿತರಾದ ಜೇಟ್ಲಿಯವರನ್ನು ತುಂಬಾ ಮಿಸ್​​ ಮಾಡಿಕೊಳ್ಳುತ್ತಿದ್ದೇನೆ. ಇವರ ಸಾಮಾಜಿಕ ಸೇವೆ, ಬುದ್ಧಿಶಕ್ತಿ, ಕಾನೂನು ಜ್ಞಾನ, ವ್ಯಕ್ತಿತ್ವವೂ ನೆನಪಿನಲ್ಲೇ ಉಳಿಯುವಂತದ್ದು" ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದಾರೆ.  "ಅರುಣ್​ ಜೇಟ್ಲಿ ಓರ್ವ ಅತ್ಯುತ್ತಮ ರಾಜಕಾರಣಿ. ಭಾರತದ ರಾಜಕೀಯ ಇತಿಹಾಸದಲ್ಲೇ ನೆನಪು ಮಾಡಿಕೊಳ್ಳಬೇಕಾದ ಉತ್ತಮ ವಾಗ್ಮಿ. ಇವರಿಗೆ ದೇಶದ ಮೇಲೆ ಇದ್ದ ಪ್ರೀತಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ" ಎಂದು ಅಮಿತ್​ ಶಾ ಟ್ವೀಟ್​​ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.


  ಜೇಟ್ಲಿಯವರ ಪುಣ್ಯಸ್ಮರಣೆ ಅಂಗವಾಗಿ ದೇಶದ ಹಲವೆಡೆ ಇಂದು ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಸ್ವಯಂ ಸೇವಕರು ಮತ್ತು ಅಭಿಮಾನಿಗಳು ರಕ್ತದಾನ ಮಾಡಲಿದ್ದಾರೆ.

  ಇದನ್ನೂ ಓದಿ: Arun Jaitley Death: ಬಿಜೆಪಿ ಟ್ರಬಲ್​ ಶೂಟರ್ ಅರುಣ್ ಜೇಟ್ಲಿ ನಡೆದು ಬಂದ ಹಾದಿ

  Published by:Ganesh Nachikethu
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು