ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮಂಡಿಸಿದ್ದ ಅರುಣ್​​ ಜೇಟ್ಲಿ; ಮೋದಿಗೆ ಬರೆದ ಕೊನೇ ಪತ್ರದಲ್ಲಿ ಏನಿತ್ತು?

ಪ್ರತಿ ಬಾರಿ ಎನ್​​​ಡಿಎ ಸರಕಾರದಲ್ಲಿ ನಾನು ಸಚಿವನಾಗಿದ್ದೆ. ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ನಾಯಕರಿಗೆ ಧನ್ಯವಾದಗಳು. ಅನಾರೋಗ್ಯದಿಂದಾಗಿ ಈ ಬಾರಿ ವಿರಮಿಸಬಯಸುತ್ತೇನೆ- ಜೇಟ್ಲಿ

Ganesh Nachikethu | news18
Updated:August 24, 2019, 1:35 PM IST
ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮಂಡಿಸಿದ್ದ ಅರುಣ್​​ ಜೇಟ್ಲಿ; ಮೋದಿಗೆ ಬರೆದ ಕೊನೇ ಪತ್ರದಲ್ಲಿ ಏನಿತ್ತು?
ಅರುಣ್​ ಜೇಟ್ಲಿ
Ganesh Nachikethu | news18
Updated: August 24, 2019, 1:35 PM IST
ನವದೆಹಲಿ(ಆಗಸ್ಟ್​​.24): ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಸತ್​​ನಲ್ಲಿ ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು ಜೇಟ್ಲಿ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಬಜೆಟ್ ಭಾಷಣ ಮಾಡಿದ್ದರು. ಸ್ವಾತಂತ್ರ್ಯಾನಂತರದ ಭಾರತದ ಇತಿಹಾಸದಲ್ಲಿ ಇದು ಇದೇ ಮೊದಲಾಗಿದೆ ಎಂಬುದು ವಿಶೇಷ.

ಪ್ರತಿ ವರ್ಷವೂ ಹಣಕಾಸು ಮಂತ್ರಿಗಳು ಇಂಗ್ಲೀಷ್ ಭಾಷೆಯಲ್ಲೇ ಬಜೆಟ್ ಮಂಡನೆ ಮಾಡುತ್ತಿದ್ದರು. ಆದರೆ ಅರುಣ್ ಜೇಟ್ಲಿ ಹಣಕಾಸು ಸಚಿವರಾಗಿದ್ದಾಗ ಈ ಸಂಪ್ರದಾಯಕ್ಕೆ ಗುಡ್​ಬೈ ಹೇಳಿದ್ದರು. 2018-19 ನೇ ಸಾಲಿನ ಈ ಕೇಂದ್ರೀಯ ಬಜೆಟ್ ಕೇವಲ ನರೇಂದ್ರ ಮೋದಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಾತ್ರವಾಗಿರದೇ, ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಪೂರೈಸುವ ಕೊನೆಯ ಅವಕಾಶವೂ ಸಹ ಆಗಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಹಲವಾರು ಮಹತ್ವದ ಘೋಷಣೆಗಳನ್ನು ಹೊರಡಿಸಿತ್ತು.

ಅರುಣ್ ಜೇಟ್ಲಿ ಎಲ್ಲರನ್ನೂ ಸಂತೈಸಿಸುವ, ಖುಷಿಪಡಿಸುವ ಪ್ರಯತ್ನದಲ್ಲಿ ತಮ್ಮ ಬಜೆಟ್ ಮಂಡಿಸಿದ್ದರು. ಇವರ ಬಜೆಟ್​ನಲ್ಲಿ ಎಲ್ಲರಿಗೂ ಏನಾದರೂ ಇರುವಂತೆ ನೋಡಿಕೊಳ್ಳಲು ಯತ್ನಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಇದು ಮತದಾರರನ್ನು ಸೆಳೆಯುವ ಪಕ್ಕಾ ಚುನಾವಣಾ ಬಜೆಟ್ ಆಗಿದೆ ಎಂಬುದು ಬಹುತೇಕ ವಿಶ್ಲೇಷಕರ ಅಭಿಪ್ರಾಯವಾಗಿರುತ್ತಿತ್ತು.

ಇದನ್ನೂ ಓದಿ: Arun Jaitley Death: ಬಿಜೆಪಿ ಟ್ರಬಲ್​ ಶೂಟರ್ ಅರುಣ್ ಜೇಟ್ಲಿ ನಡೆದು ಬಂದ ಹಾದಿ

ಹಿಂದಿಯಲ್ಲೇ ಬಜೆಟ್ ಭಾಷಣ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದ ಅರುಣ್ ಜೇಟ್ಲಿ, ಸಾಮಾಜಿಕ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಿಗೆ ಹೆಚ್ಚು ಫೋಕಸ್ ಕೊಟ್ಟಿದ್ದರು. ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳ ಸಂಬಳ ಹೆಚ್ಚಳ ಮಾಡಲಾಗಿತ್ತು. ಎಸ್ಸಿ, ಎಸ್ಟಿ ಪಂಗಡಗಳ ಅಭಿವೃದ್ದಿಗಾಗಿ 56 ಸಾವಿರ ಮತ್ತು 39 ಸಾವಿರ ಕೋಟಿ ರೂ ನೀಡಲಾಗಿತ್ತು. ಮೋದಿ ಕೇರ್ ಎನ್ನುವ ವಿನೂತನ ಆರೋಗ್ಯ ಯೋಜನೆ ರೂಪಿಸಲಾಗಿದೆ. ಇದರಲ್ಲಿ 10 ಕೋಟಿ ಬಡ ಕುಟುಂಬಗಳಿಗೆ ಮತ್ತು 50 ಕೋಟಿ ಬಡಜನರಿಗೆ ತಲಾ 5 ಲಕ್ಷ ಆರೋಗ್ಯ ವಿಮೆಯ ಯೋಜನೆ ಇದಾಗಿತ್ತು. ಮೋದಿ ಕೇರ್ ಎಂಬುದು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಎನಿಸಿತ್ತು. ಈ ಎಲ್ಲ ಯೋಜನೆಗಳಲ್ಲಿ ಜೇಟ್ಲಿ ಅವರದ್ದೇ ಪ್ರಮುಖ ಪಾತ್ರವಾಗಿತ್ತು.

ಹಣಕಾಸು ಸಚಿವರಾಗಿದ್ದಾಗ ಅರುಣ್​ ಜೇಟ್ಲಿ ಅವರು ತಮ್ಮ ಅನಾರೋಗ್ಯದ ಕಾರಣ ಮುಂದಿಟ್ಟು ಈ ಬಾರಿ ಎನ್​ಡಿಎ ಸರ್ಕಾರದಲ್ಲಿ ತನಗೆ ಯಾವುದೇ ಜವಾಬ್ದಾರಿ ಬೇಡ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ತಮ್ಮನ್ನು ಸಚಿವ ಸಂಪುಟದಿಂದ ಹೊರಗಿಡಬೇಕೆಂದು ಹೇಳಿದ್ದ ಜೇಟ್ಲಿ, ಅನಾರೋಗ್ಯದ ಕಾರಣ ಸಮಯ ಹಾಗೂ ವಿಶ್ರಾಂತಿ ಪಡೆಯಬೇಕೆಂದಿದ್ದರು. ಜೊತೆಗೆ ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಿದ್ದರು.

ಇದನ್ನೂ ಓದಿ: RIP Arun Jaitley - ಮಾಜಿ ಕೇಂದ್ರ ಸಚಿವ 66 ವರ್ಷದ ಅರುಣ್ ಜೇಟ್ಲಿ ವಿಧಿವಶ
Loading...

"ಪ್ರತಿ ಬಾರಿ ಎನ್​​​ಡಿಎ ಸರಕಾರದಲ್ಲಿ ನಾನು ಸಚಿವನಾಗಿದ್ದೆ. ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ನಾಯಕರಿಗೆ ಧನ್ಯವಾದಗಳು. ಅನಾರೋಗ್ಯದಿಂದಾಗಿ ಈ ಬಾರಿ ವಿರಮಿಸಬಯಸುತ್ತೇನೆ. ಈ ಬಾರಿ ಸಂಪುಟ ಸೇರಲು ಅಸಹಾಯಕನಾಗಿದ್ದೇನೆ. ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಸದಾ ಸರಕಾರ ಮತ್ತು ಪಕ್ಷದೊಂದಿಗೆ ಇರುತ್ತೇನೆ ಎಂದು," ತಮ್ಮ ಪತ್ರದಲ್ಲಿ ತಿಳಿಸಿದ್ದರು.

"ಪಕ್ಷ ನನಗೆ ಪ್ರತಿಬಾರಿ ಜವಾಬ್ದಾರಿಯನ್ನು ನೀಡಿ ಆಶೀರ್ವದಿಸಿದೆ. ಮೊದಲ ಬಾರಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ನನಗೆ ಜವಾಬ್ದಾರಿ ನೀಡಲಾಗಿತ್ತು. ವಿರೋಧ ಪಕ್ಷದಲ್ಲಿದ್ದಾಗಲೂ ನನಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಆದರೆ ಅನಾರೋಗ್ಯದ ಕಾರಣ ಈ ಬಾರಿ ವಿಶ್ರಾಂತಿ ಬಯಸುತ್ತೇನೆ. ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಡಿ" ಎಂದು ಹೇಳಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
-------------
First published:August 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...