ಅರುಣ್​ ಜೇಟ್ಲಿ ಆರೋಗ್ಯದಲ್ಲಿ ಸುಧಾರಣೆ: ಹಣಕಾಸು ಸಚಿವರಾಗಿ ಮರು ನೇಮಕ


Updated:August 23, 2018, 11:49 AM IST
ಅರುಣ್​ ಜೇಟ್ಲಿ ಆರೋಗ್ಯದಲ್ಲಿ ಸುಧಾರಣೆ: ಹಣಕಾಸು ಸಚಿವರಾಗಿ ಮರು ನೇಮಕ

Updated: August 23, 2018, 11:49 AM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.23): ಕಿಡ್ನಿ ವೈಫಲ್ಯ ಸಂಬಂಧಿತ ಖಾಯಿಲೆಯಿಂದ ಚೇತರಿಸಿಕೊಂಡಿರುವ ಅರುಣ್​ ಜೇಟ್ಲಿ ಅವರನ್ನು ಕೇಂದ್ರ ಹಣಕಾಸು ಸಚಿವರಾಗಿ ಮರು ನೇಮಕ ಮಾಡಲಾಗಿದೆ. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ನೇಮಕ ಮಾಡಿದ್ಧಾರೆ.

ಕೇಂದ್ರ ಹಣಕಾಸು ಸಚಿವ ಜೇಟ್ಲಿ ಅವರ ಆರೋಗ್ಯದಲ್ಲಿ ಗಂಭೀರ ಏರುಪೇರು ಕಂಡಿತ್ತು. ಕಿಡ್ನಿ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಸಚಿವರನ್ನು ಚಿಕಿತ್ಸೆಗಾಗಿ ಏಮ್ಸ್​ ಆಸ್ಪತ್ರಗೆ ರವಾನಿಸಲಾಯ್ತು. ಬಳಿಕ ಅವರ ಖಾತೆಗಳ ಜವಾಬ್ದಾರಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರ ಹೆಗಲಿಗೆ ಹೊರಿಸಲಾಯಿತು.

ಸದ್ಯ ಸಂಪೂರ್ಣವಾಗಿ ಅರುಣ್ ಜೇಟ್ಲಿ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಹೀಗಾಗಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಜೇಟ್ಲಿ ಅವರನ್ನು ಇಂದು ಹಣಕಾಸು ಸಚಿವರಾಗಿ ಮರು ನೇಮಕ ಮಾಡಿದ್ದಾರೆ. ಜೇಟ್ಲಿ ಅಧಿಕೃತವಾಗಿ ಹಣಕಾಸು ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ಧಾರೆ.

ಪ್ರಧಾನಿಗಳ ಸಲಹೆ ಮೇರೆಗೆ ಜೇಟ್ಲಿ ಅವರಿಗೆ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಗಳನ್ನು ನೀಡಲಾಗಿದೆ. ಅಲ್ಲದೇ ಸಂಸತ್ ಭವನ ಸಮೀಪದ ನಾರ್ತ್ ಬ್ಲಾಕ್ ಕಚೇರಿಯಲ್ಲಿ ಜೇಟ್ಲಿ  ಎರಡೂ ಖಾತೆಗಳ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ.

ಕಿಡ್ನಿ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತೆ ಫೀಲ್ಡಿಗೆ ಇಳಿಯಲಿದ್ದಾರೆ ಎನ್ನಲಾಗಿತ್ತು. ಅರುಣ್ ಜೇಟ್ಲಿ ಅಧಿಕೃತವಾಗಿ ತಮ್ಮ ಇಲಾಖೆಯ ಜವಾಬ್ಧಾರಿ ಮರಳಿ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿತ್ತು.

ಅದರಂತೆಯೇ ಇದುವರೆಗೆ ಜೇಟ್ಲಿ ಅನುಪಸ್ಥಿತಿಯಲ್ಲಿ ಪಿಯೂಷ್ ಗೋಯಲ್ ಹಣಕಾಸು ಸಚಿವಾಲಯದ ಜವಾಬ್ಧಾರಿ ವಹಿಸಿಕೊಂಡಿದ್ದರು. ಇದೀಗ ಚೇತರಿಸಿಕೊಂಡಿರುವ ಅರುಣ್ ಜೇಟ್ಲಿ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ಧಾರೆ. ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದ ಜೇಟ್ಲಿ ಈ ಬಾರಿ ಮುಂಗಾರು ಅಧಿವೇಶನದಲ್ಲೂ ಪಾಲ್ಗೊಂಡಿರಲಿಲ್ಲ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ