Jayalalithaa Death: ಜಯಲಲಿತಾ ಸಾವನ್ನಪ್ಪಿದ್ದು ಹೇಗೆ? ಸಿಎಂ ಸ್ಟಾಲಿನ್​ಗೆ ವರದಿ ಸಲ್ಲಿಸಿದ ಆಯೋಗ!

Jayalalithaa Death Probe: ಜಯಲಲಿತಾ ಸಾವಿನ ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಆರುಮುಘಸ್ವಾಮಿ ಆಯೋಗವು 590 ಪುಟಗಳ ವರದಿಯನ್ನು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಸಲ್ಲಿಸಿದೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ

ತಮಿಳುನಾಡು ಮಾಜಿ ಸಿಎಂ ಜಯಲಲಿತಾ

  • Share this:
ಚೆನ್ನೈ(ಆ.27): ಜಯಲಲಿತಾ ಸಾವಿನ ಪ್ರಕರಣದ (Jayalalithaa Death) ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಆರುಮುಘಸ್ವಾಮಿ ಆಯೋಗ (Arumugasamy Commission) ತನ್ನ ವರದಿಯನ್ನು ಸಿಎಂ ಎಂಕೆ ಸ್ಟಾಲಿನ್ (Tamil Nadu CM MK Stalin) ಅವರಿಗೆ ಸಲ್ಲಿಸಿದೆ. ಈ ವಿಚಾರದಲ್ಲಿ ಆಯೋಗ 590 ಪುಟಗಳ ವರದಿ ಸಿದ್ಧಪಡಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ (AIADMK) ಅಧ್ಯಕ್ಷೆ ಜಯಲಲಿತಾ ಅವರ ಸಾವಿಗೆ ನಿಜವಾದ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಜಯಲಲಿತಾ ಅವರು 5 ಡಿಸೆಂಬರ್ 2016 ರಂದು ರಾತ್ರಿ 11.30 ಕ್ಕೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು ಎಂಬುವುದು ಉಲ್ಲೇಖನೀಯ.

ಜಯಲಲಿತಾ ಅವರ ನಿಗೂಢ ಚಿಕಿತ್ಸೆ ಮತ್ತು ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಗಾಗಿ ತಮಿಳುನಾಡಿನ ಹಿಂದಿನ ಇಕೆ ಪಳನಿಸಾಮಿ ಸರ್ಕಾರವು ನ್ಯಾಯಮೂರ್ತಿ ಅರುಮುಸ್ವಾಮಿ ನೇತೃತ್ವದ ಆಯೋಗವನ್ನು ರಚಿಸಿತ್ತು. ಪನ್ನೀರಸೆಲ್ವಂ ಅವರು ಆಯೋಗದ ಮುಂದೆ ಹಾಜರಾಗಿದ್ದರು. ಅವರು, 'ಜಯಲಲಿತಾ ಅವರು ಯಾಕೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಯಾವ ಚಿಕಿತ್ಸೆ ನೀಡಲಾಯಿತು? ಅಪೋಲೋ ಆಸ್ಪತ್ರೆಯ ಯಾವ ವೈದ್ಯರ ತಂಡ ಅವರನ್ನು ನೋಡಿಕೊಳ್ಳುತ್ತಿತ್ತು ಎಂಬುದು ಕೂಡ ತಿಳಿದಿರಲಿಲ್ಲ ಎಂದಿದ್ದರು. ಜಯಲಲಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ನನಗೆ ರಾಜ್ಯ ಆರೋಗ್ಯ ಕಾರ್ಯದರ್ಶಿಯಿಂದ ಮಾಹಿತಿ ಸಿಕ್ಕಿತ್ತು ಎಂದಿದ್ದಾರೆ.

ಇದನ್ನೂ ಓದಿ: ಜಯಲಲಿತಾ ವಾಸವಾಗಿದ್ದ ಪೋಯಸ್​ ಗಾರ್ಡನ್​ ನಿವಾಸ ಪಡೆದ ಸೊಸೆ ದೀಪಾ ಜಯಕುಮಾರ್​

ಪನ್ನೀರಸೆಲ್ವಂ ನೇತೃತ್ವದ ಜಯಲಲಿತಾ ಅವರ ಪಕ್ಷವಾದ ಎಐಎಡಿಎಂಕೆಯ ಹಲವಾರು ನಾಯಕರು ಜಯಲಲಿತಾ ಅವರೊಂದಿಗೆ ನೆರಳಿನಂತಿದ್ದ ಅವರ ಸಹಾಯಕಿ ಶಶಿಕಲಾ ಮತ್ತು ಅವರ ಕುಟುಂಬ ಸದಸ್ಯರು ಈ ವಿಷಯದಲ್ಲಿ ಬಹಳಷ್ಟು ವಿಚಾರ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪಗಳ ಬಗ್ಗೆ ಇನ್ನೂ ಸತ್ಯ ಹೊರಬಿದ್ದಿಲ್ಲ.

ಏಕಾಏಕಿ ಹದಗೆಟ್ಟಿತ್ತು ಜಯಲಲಿತಾ ಆರೋಗ್ಯ

ಜಯಲಲಿತಾ ಅವರ ಸಾವಿಗೂ ಕೆಲವು ದಿನಗಳ ಮೊದಲು ಅಪೋಲೋ ಆಸ್ಪತ್ರೆಯಿಂದ ಜಯಲಲಿತಾ ಅವರು ಚೇತರಿಸಿಕೊಂಡಿದ್ದಾರೆ ಮತ್ತು ಅವರಿಗೆ ಬೇಕೆಂದಾಗ ಡಿಸ್ಚಾರ್ಜ್​ ಆಗಬಹುದು ಎಂದು ಹೇಳಿಕೆ ನೀಡಿದ್ದರು, ಆದರೆ ಇದಾದ ಬಳಿಕ ಇದ್ದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿತು ಮತ್ತು ಅವರು 5 ಡಿಸೆಂಬರ್ 2016 ರಂದು ರಾತ್ರಿ 11.30 ಕ್ಕೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಸುಮಾರು 75 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಜಯಲಲಿತಾ ಸಾವನ್ನಪ್ಪಿದ್ದರು.

ಜಯಾಲಲಿತಾ ಸಾವು ಇಂದಿಗೂ ನಿಗೂಢ

ಸುದೀರ್ಘ ಕಾಲದವರೆಗೆ ಆಸ್ಪತ್ರೆಯಲ್ಲಿದ್ದಾಗ ಹೊರಪ್ರಪಂಚಕ್ಕೆ ನಿಗೂಢವಾಗಿದ್ದ ಜಯಲಲಿತಾ ಸತ್ತ ನಂತರ ಅವರ ಸಾವು ಇಂದಿಗೂ ನಿಗೂಢವಾಗೇ ಉಳಿದಿದೆ. ಜಯಲಲಿತಾ ಸಾವಿನ ತನಿಖಾ ತಂಡ ರಹಸ್ಯ ಸಂಗತಿಯನ್ನು ಪತ್ತೆಹಚ್ಚಿದ್ದು, 2016ರ ಸೆಪ್ಟೆಂಬರ್​ 22ರಂದು ಜಯಲಲಿತಾ ಕೋಮಾಗೆ ಹೋಗುವ ಮೊದಲು ಅವರಿಗಾಗಿ ನಿಯೋಜನೆಗೊಂಡಿದ್ದ ವೈದ್ಯರು ಪೋಸ್​ ಗಾರ್ಡನ್​ನ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Jayalalitha-Shashikala Relationship: ತನ್ನ ಜೀವನ ಜಯಲಲಿತಾರೊಂದಿಗೆ ಹೇಗಿತ್ತು ಅಂತ ಕೊನೆಗೂ ಬಿಚ್ಚಿಟ್ಟ ಶಶಿಕಲಾ

1991ರಿಂದಲೂ ಜಯಲಲಿತಾ ಅವರ ಕಾರಿನ ಚಾಲಕರಾಗಿದ್ದ ಕಣ್ಣನ್​ ಈ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಜಯಲಲಿತಾ ಮನೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರಾದ ಶಿವಕುಮಾರ್​ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಮ್ಮನವರ ರೂಮಿನಿಂದ ಹೊರಹೋಗಿದ್ದರು. ಯಾವಾಗ ಅವರು ವಾಪಸ್​ ಬಂದರು ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ನಾವೇ ಆಸ್ಪತ್ರೆಗೆ ಸೇರಿಸಿದೆವು:

ಸಿಎನ್​ಎನ್​- ನ್ಯೂಸ್​ 18 ಜೊತೆಗೆ ಮಾತನಾಡಿರುವ ಕಣ್ಣನ್​, 'ಜಯಲಲಿತಾ ಆಸ್ಪತ್ರೆಗೆ ಸೇರುವ ಮೊದಲು ತಾನು ಅವರ ರೂಮಿಗೆ ಹೋಗಿದ್ದಾಗ ಆಕೆ ಆರಾಮ್​ ಚೇರ್​ನಲ್ಲಿ ಕುಳಿತುಕೊಂಡಿದ್ದರು. ಆಗ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ಅವರ ಪಕ್ಕದಲ್ಲಿ ತೆರೆದಿಟ್ಟಿದ್ದ ಕೆಲ ಫೈಲುಗಳಿದ್ದವು. ಅದರ ಮೇಲೆ ಓಪನ್​ ಮಾಡಿದ ಪೆನ್​ ಇಡಲಾಗಿತ್ತು. ಆಗ ಅಲ್ಲಿಗೆ ಬಂದ ಚಿನ್ನಮ್ಮ (ಶಶಿಕಲಾ) ಕುರ್ಚಿಯಲ್ಲಿ ಕುಳಿತಿದ್ದ ಅಮ್ಮನವರನ್ನು ಎತ್ತಿಕೊಂಡು ಬರಲು ಹೇಳಿದರು. ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಬೇಕೆಂಬುದು ನಮ್ಮ ಉದ್ದೇಶವಾಗಿತ್ತು. ಆಮೇಲೆ ಪಿಎಸ್​ಓ ವೀರಪೆರುಮಾಳ್​ ಬಂದರು. ನಾವಿಬ್ಬರೂ ಸೇರಿ ಅಮ್ಮ ಕುಳಿತಿದ್ದ ಕುರ್ಚಿಯನ್ನು ಎತ್ತಿಕೊಂಡು ರೂಮಿನಿಂದ ಹೊರಟೆವು. ಆಗ ಅವರು ಕುರ್ಚಿಯಿಂದ ಕೆಳಗೆ ಮುಗ್ಗರಿಸಿದರು. ಹಾಗಾಗಿ, ಸ್ಟ್ರೆಚರ್​ ತೆಗೆದುಕೊಂಡು ಬಂದೆವು' ಎಂದು ಎರಡು ವರ್ಷದ ಹಿಂದಿನ ಘಟನೆಯನ್ನು ವಿವರಿಸಿದ್ದರು.

ಇದನ್ನೂ ಓದಿ: Jayalalitha: ಜಯಲಲಿತಾ ತಂದೆಯೇ ನನ್ನ ತಂದೆ, ಅವ್ರ ಆಸ್ತಿಯಲ್ಲಿ ನನಗೂ ಪಾಲು ಬೇಕು! ಕೋರ್ಟ್ ಮೆಟ್ಟಿಲೇರಿದ ವೃದ್ಧ

ಆದರೆ, ಇದ್ಯಾವ ಮಾಹಿತಿಯನ್ನೂ ಶಶಿಕಲಾ ಮತ್ತು ಶಿವಕುಮಾರ್​ ಅವರು ತನಿಖಾ ತಂಡದ ಬಳಿ ಹೇಳಿಲ್ಲವಾದ್ದರಿಂದ ಕುತೂಹಲ ಮತ್ತು ಸಂಶಯ ಹೆಚ್ಚಾಗಿತ್ತು. ಫೋಸ್​ ಗಾರ್ಡನ್​ನಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದರಿಂದ ಬೇಕಾದರೆ ಪರೀಕ್ಷಿಸಿ ಎಂದು ತನಿಖಾ ತಂಡದ ಅಧಿಕಾರಿಗಳ ಮುಂದೆ ಹೇಳಿರುವ ಕಣ್ಣನ್​, ಇದುವರೆಗೆ ಆ ಫೂಟೇಜ್​ ಉಳಿದಿರುತ್ತದೋ ಇಲ್ಲವೋ ಗೊತ್ತಿಲ್ಲ ಎಂದೂ ಹೇಳಿದ್ದರು.
Published by:Precilla Olivia Dias
First published: