370ನೇ ವಿಧಿ ಭಾರತದ ಆಂತರಿಕ ವಿಚಾರ; ಅಮೆರಿಕ ರಕ್ಷಣಾ ಕಾರ್ಯದರ್ಶಿಗೆ ಫೋನ್​ನಲ್ಲಿ ವಿವರಿಸಿದ ರಾಜನಾಥ ಸಿಂಗ್​

ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯ ಬಗ್ಗೆಯೂ ರಾಜನಾಥ ಸಿಂಗ್ ಅವರು ಎಸ್ಪರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಈ ವಿಚಾರ ಸಂಪೂರ್ಣವಾಗಿ ಭಾರತೀಯ ಸಂವಿಧಾನದ ಆಂತರಿಕ ವಿಚಾರ ಎಂದು ತಿಳಿಸಿದ್ದಾರೆ.

HR Ramesh | news18-kannada
Updated:August 21, 2019, 9:45 AM IST
370ನೇ ವಿಧಿ ಭಾರತದ ಆಂತರಿಕ ವಿಚಾರ; ಅಮೆರಿಕ ರಕ್ಷಣಾ ಕಾರ್ಯದರ್ಶಿಗೆ ಫೋನ್​ನಲ್ಲಿ ವಿವರಿಸಿದ ರಾಜನಾಥ ಸಿಂಗ್​
ರಾಜನಾಥ್ ಸಿಂಗ್
HR Ramesh | news18-kannada
Updated: August 21, 2019, 9:45 AM IST
ನವದೆಹಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್​ ಅವರು ಅಮೆರಿಕ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಮಾರ್ಕ್​ ಟಿ ಎಸ್ಪರ್ ಅವರೊಂದಿಗೆ ಮಂಗಳವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಸಂಭಾಷಣೆ ವೇಳೆ ರಾಜನಾಥ್ ಸಿಂಗ್​ ಅವರು, ಭಾರತದ ವಿರುದ್ಧ ಭಯೋತ್ಪಾದಕರು ಗಡಿ ದಾಟಿ ಬರುತ್ತಿರುವ ವಿಷಯವನ್ನು ಎತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯ ಬಗ್ಗೆಯೂ ರಾಜನಾಥ ಸಿಂಗ್ ಅವರು ಎಸ್ಪರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಈ ವಿಚಾರ ಸಂಪೂರ್ಣವಾಗಿ ಭಾರತೀಯ ಸಂವಿಧಾನದ ಆಂತರಿಕ ವಿಚಾರ ಎಂದು ತಿಳಿಸಿದ್ದಾರೆ.

ಇದನ್ನು ಓದಿ: 370ನೇ ವಿಧಿ ರದ್ದು; ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ ಎಂದ ಪಾಕ್ ಸಚಿವ

ಭಾರತದ ಆಂತರಿಕ ವಿಚಾರವಾದ ಜಮ್ಮು-ಕಾಶ್ಮೀರ ವಿಷಯದಲ್ಲಿ ಭಾರತ ತೆಗೆದುಕೊಂಡ ನಿಲುವಿನ ಬಗ್ಗೆ ಹಾಗೂ ಪ್ರಸ್ತುತ ಬೆಳವಣಿಗೆ ಬಗ್ಗೆ ಅಮೆರಿಕ ರಕ್ಷಣಾ ಕಾರ್ಯದರ್ಶಿ ಭಾರತವನ್ನು ಶ್ಲಾಘಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಯಾವುದೇ ವಿಷಯವನ್ನು ದ್ವಿಪಕ್ಷೀಯವಾಗಿ ಪರಿಹರಿಸುವ ಭರವಸೆಯನ್ನೂ ಅವರು ನೀಡಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

Loading...

First published:August 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...