News18 India World Cup 2019

ಹೋರಾಟಗಾರರ ಬಂಧನ ಪ್ರಶ್ನಿಸಿ ಸುಪ್ರೀಂ​ನಲ್ಲಿ ಅರ್ಜಿ ಸಲ್ಲಿಸಿದ ಪ್ರಶಾಂತ್​ ಭೂಷಣ್​

news18
Updated:August 29, 2018, 11:51 AM IST
ಹೋರಾಟಗಾರರ ಬಂಧನ ಪ್ರಶ್ನಿಸಿ ಸುಪ್ರೀಂ​ನಲ್ಲಿ ಅರ್ಜಿ ಸಲ್ಲಿಸಿದ ಪ್ರಶಾಂತ್​ ಭೂಷಣ್​
news18
Updated: August 29, 2018, 11:51 AM IST
ನ್ಯೂಸ್​ 18 ಕನ್ನಡ

ನವದೆಹಲಿ (ಆ.29): ಭೀಮಾ ಕೋರೆಗಾಂವ್​ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ದೇಶದ ಪ್ರಸಿದ್ಧ ಐವರು ಹೋರಾಟಗಾರರನ್ನು ಬಂಧಿಸಲಾಗಿದೆ. ಹೋರಾಟಗಾರರನ್ನು ಬಂಧಿಸಿರುವ ಕ್ರಮದ ಕುರಿತು ಹಿರಿಯ ವಕೀಲ ಪ್ರಶಾಂತ್​ ಭೂಷಣ್​ ಸುಪ್ರೀಂಕೋರ್ಟ್​ನಲ್ಲಿಂದು ಅರ್ಜಿ ಸಲ್ಲಿಸಲಿದ್ದಾರೆ.

ಪಂಜಾಬ್​, ಹರಿಯಾಣ ಹೈ ಕೋರ್ಟ್​ ಅರ್ಜಿ ನಿರಾಕರಣೆ ಹಿನ್ನಲೆಯಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶಾಂತ್​ ಭೂಷಣ್​ ಅರ್ಜಿ ಸಲ್ಲಿಸಿದ್ದಾರೆ.

ಬಂಧನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ನ್ಯಾಯಾಲಯಲಕ್ಕೆ ತನಿಖಾ ಪುರಾವೆಗಳನ್ನು ಸಲ್ಲಿಸಿದ್ದು, ಈ ದಾಖಲೆಗಳು ಮರಾಠಿಯಲ್ಲಿದೆ. ಈ ಕಾರಣದಿಂದ ಇವುಗಳನ್ನು ಇಂಗ್ಲಿಷ್​ಗೆ ತರ್ಜುಮೆ ಮಾಡಿ ಮಧ್ಯಾಹ್ನದ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ತಿಳಿಸಿದೆ.ಗೌತಮ್​ ನವಲಖಾ ಬಂಧನಕೂಡ ಅಕ್ರಮವಾಗಿ ನಡೆಸಲಾಗಿದ್ದು, ಈ ಕುರಿತು ಅರ್ಜಿಯನ್ನು 2.15ಕ್ಕೆ ವಿಚಾರಣೆ ನಡೆಸಲಾಗುವುದು.

ನಕ್ಸಲ್​ ಸಂಪರ್ಕವನ್ನು ಹೊಂದಿರುವ ಆರೋಪದ ಮೇಲೆ ಮಂಗಳವಾರ ಕವಿ ವರವರ ರಾವ್​, ವಕೀಲೆ ಸುಧಾ ಭಾರಧ್ವಾಜ್​, ಹೋರಾಟಗಾರ ಅರುಣ್​ ಫೆರೆರೀಯಾ, ಗೌತಮ್​ ನವಲಖಾ, ವರ್ನರ್​ ಗೊನ್ಜಾಲ್ವಿಸ್​ ಅವರನ್ನು ಬಂಧಿಸಲಾಗಿತ್ತು. ಇವರ ಬಂಧನ ಕ್ರಮಲ್ಲೆ ಎಡಪಂಥೀಯ ನಾಯಕರು ಟೀಕಿಸಿದ್ದು, ಇದು ಅಘೋಷಿತ ತುರ್ತು ಪರಿಸ್ಥಿತಿಯ ಹೇರಿಗೆ, ಅಭಿಪ್ರಾಯ ಸ್ವಾತಂತ್ರದ ದಮನ ಎಂಬ ಕೂಗು ಕೇಳಿಬಂದಿದೆ,

ವಕೀಲೆ ಸುಧಾ ಭಾರಧ್ವಾಜ್​ ಬಂಧನಕ್ರಮ ಪ್ರಶ್ನಿಸಿ ಸುಧಾ ಅವರ ವಕೀಲರು ಜಾಮೀನು ಪಡೆಯಲು ಮುಂದಾಗಿದ್ದು, ಅವರ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ನಿರಾಕರಿಸಿದೆ. ಮಧ್ಯರಾತ್ರಿ ಪಂಜಾಬ್​ ಮತ್ತು ಹರಿಯಾಣ ಹೈ ಕೋರ್ಟ್​ನಲ್ಲಿಯೂ ಅವರ ಅರ್ಜಿ ವಿಚಾರಣೆ ನಡೆಸಿದ್ದು, ,ಮುಂದಿನ ಆದೇಶದವರೆಗೂ ಅವರನ್ನು ಗೃಹ ಬಂಧನದಲ್ಲಿ ಇರಿಸುವಂತೆ ಎಂದು ಹೈಕೋರ್ಟ್​ ನೀಡಿದೆ,

ಮೊದಲಿಗೆ ಸುಧಾ ಅವರ ಬಂಧನಕ್ಕೆ ಹೈಕೋರ್ಟ್​ ತಡೆಯಾಜ್ಞೆ ನೀಡಿದ್ದರೂ ಬಳಿಕ ಅವರನ್ನು ಬಂಧಿಸಲು ಫರೀದಾಬಾದ್​ ಸಿಜೆಎಂ ಅವರ ಬಂಧನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸುಧಾ ಪರ ವಕೀಲರು ಆರೋಪಿಸಿದ್ದಾರೆ. ಸುಧಾ ಅವರನ್ನು ಗೃಹ ಬಂಧನದಲ್ಲಿಟ್ಟಿದ್ದು ಎಲ್ಲಿ ಅವರನ್ನು ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಬಂಧಿತ ಈ ಐವರು ಜನವರಿಯಲ್ಲಿ ಪುಣೆಯಲ್ಲಿ ನಡೆದ ಭೀಮಾ ಕೋರೆಗಾಂವ್​ ಘಟನೆಯ ನಂಟನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸರು ತಿಳಿಸಿದ್ದರು.

ಮೋದಿ ಹತ್ಯೆ ಸಂಚು ಆರೋಪದಲ್ಲಿ ತೆಲುಗು ಕವಿ ವರವರರಾವ್​ ಬಂಧಿಸಲಾಗಿದೆ. ಕಳೆದ ವರ್ಷ ಡಿಸೆಂಬರ್​ 31ರಂದು ಇಲ್ಘರ್​ ಪರಿಷದ್​ ಕಾರ್ಯಕ್ರಮದಲ್ಲಿ ಐವರನ್ನು ಬಂಧಿಸಲಾಗಿತ್ತು. ಈ ಬಂಧಿತರಲ್ಲಿ ಒಬ್ಬರ ಮನೆಯಲ್ಲಿ ಕವಿ ವರವರ ರಾವ್​ ಹೆಸರು ಹರಿದ ಕಾಗದದಲ್ಲಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಧೀರ್​ ಧ್ವಾಲೆ, ಸುರೇಂದ್ರ ಗಡ್ಲಿಂಗ್​, ಮಹೇಶ್​ ರೌತ್​, ರೋನಾ ವಿಲ್ಸನ್​, ಶೋಮ ಸೇನ್​ ಈ ಐವರು​ ಭೀಮಾ ಕೋರೆಗಾಂವ್​ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಇದರಿಂದಾಗಿ ಕೋರೆಗಾಂವ್​ ಗ್ರಾಮದಲ್ಲಿ ಹಿಂಸಾ ಘಟನೆ ನಡೆಯಿತು. ಈ ಐವರನ್ನು ವಿಚಾರಣೆ ನಡೆಸಿದ ಬಳಿಕ ದೇಶಾದ್ಯಾಂತ ಪ್ರಸಿದ್ದ ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಲಾಗಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...