Viral News: ನನ್ನ ಸೌಂದರ್ಯ ನೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ! ಮಹಿಳೆಯಿಂದ ವಿಚಿತ್ರ ಆರೋಪ

ಈ ಬಂಧನಕ್ಕೆ ವಿಮಾನ ನಿಲ್ದಾಣದ ನಡವಳಿಕೆಯನ್ನು ಉಲ್ಲಂಘನೆ ಮಾಡಿರುವುದೇ ಕಾರಣ ಎಂದು ಪೊಲೀಸರು ಆರೋಪಿಸಿದರೆ, ತಾನು ಸುಂದರವಾಗಿ ಇರುವುದಕ್ಕೇ ತನ್ನನ್ನು ಬಂಧಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪೊಲೀಸರು ಆರೋಪಿಗಳನ್ನು ಬಂಧಿಸುವುದು ಸಹಜ. ಆದರೆ ಕೇವಲ ಬಂಧನವಷ್ಟೇ ಆದರೆ ತೀರಾ ಏನೂ ಸುದ್ದಿಯಾಗುವುದಿಲ್ಲ, ಆಗುತ್ತಿರಲಿಲ್ಲ. ಆದರೆ ಬಂಧಿತ ಮಹಿಳೆಯೋರ್ವಳು ಪೊಲೀಸರ (Police)  ಮೇಲೆ ಮಾಡಿರುವ ಆರೋಪದಿಂದ ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ತಾನು ಚೆನ್ನಾಗಿ, ಸುಂದರವಾಗಿ (Looking Good) ಇರುವುದಕ್ಕೇ ತನ್ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಹಿಳೆಯೋರ್ವಳು ಆರೋಪಿಸಿದ ವಿಚಿತ್ರ ಘಟನೆಯೊಂದು (Viral News) ಬೆಳಕಿಗೆ ಬಂದಿದೆ. ಆದರೆ ಪೊಲೀಸರು ಹೇಳೋದೇ ಬೇರೆ, ತನ್ನ ರೆಸ್ಟೋರೆಂಟ್ ಬಿಲ್ ಪಾವತಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆಯನ್ನು ಇತ್ತೀಚೆಗೆ ಯುಎಸ್‌ನ ಲಾಸ್ ವೇಗಾಸ್‌ನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಈ ಬಂಧನಕ್ಕೆ ವಿಮಾನ ನಿಲ್ದಾಣದ ನಡವಳಿಕೆಯನ್ನು ಉಲ್ಲಂಘನೆ ಮಾಡಿರುವುದೇ ಕಾರಣ ಎಂದು ಪೊಲೀಸರು ಆರೋಪಿಸಿದರೆ, ತಾನು ಸುಂದರವಾಗಿ ಇರುವುದಕ್ಕೇ ತನ್ನನ್ನು ಬಂಧಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಪೊಲೀಸರ ಮೇಲೆ ಉಗುಳಿದ್ದಳಂತೆ
    ಇದಲ್ಲದೆ ಸಿಕ್ಕಿಬಿದ್ದ ನಂತರ ಬುಸ್ಟಾಮಿ ಎಂಬ ಮಹಿಳೆ ತನಗೆ ಕಿರುಕುಳ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಉಗುಳುವುದಾಗಿ ಬೆದರಿಕೆ ಹಾಕಿದ್ದಾಗಿಯೂ ವರದಿಯಾಗಿದೆ. ಬಂಧಿತ ಮಹಿಳೆ ಎಲ್ಲಾ ಅಧಿಕಾರಿಗಳ ಮೇಲೆ ಉಗುಳಲು ಹೋಗುತ್ತಿದ್ದಳು ಎಂದು ಪೊಲೀಸ್ ವರದಿ ಹೇಳಿದೆ.

    ಸದ್ಯ ಸಿಕ್ಕಿದೆ ಜಾಮೀನು
    ವಿಮಾನ ನಿಲ್ದಾಣದ ನಡವಳಿಕೆಯನ್ನು ಉಲ್ಲಂಘಿಸಿದ್ದಕ್ಕಾಗಿ ಬುಸ್ಟಾಮಿ ಎಂಬ ಈ ಆರೋಪಿತ ಮಹಿಳೆಯನ್ನು ಬಂಧಿಸಲಾಗಿದೆ. ನಂತರ ಈ ಮಹಿಳೆಯನ್ನು $ 1,000 ಜಾಮೀನಿನ ಮೇಲೆ ಕ್ಲಾರ್ಕ್ ಕೌಂಟಿ ಡಿಟೆನ್ಶನ್ ಸೆಂಟರ್‌ಗೆ ಕಳುಹಿಸಲಾಗಿದೆ.

    ಕೋರ್ಟ್​ ಮುಂದೇ ಏನಂತ ವಾದಿಸಬಹುದು?
    ಬುಸ್ತಾಮಿ ಈಗ ಅಕ್ಟೋಬರ್ 27 ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದು ಈಕೆ ಕಾನೂನು ಪ್ರತಿನಿಧಿಯನ್ನು ನೇಮಿಸಿಕೊಂಡಿದ್ದಾರೆ ಎಂದು ಸ್ಥಳೀಐ ಮಾಧ್ಯಮಗಳು ವರದಿ ಮಾಡಿವೆ.ಸದ್ಯ ಹೀಗೆ ವಿಚಿತ್ರ ಆರೋಪ ಮಾಡಿರುವ ಬುಸ್ಟಾಮಿ ಎಂಬ ಮಹಿಳೆ ನೆವಾಡಾ-ಲಾಸ್ ವೇಗಾಸ್ ವಿಶ್ವವಿದ್ಯಾನಿಲಯದ 2017 ರ ಪದವೀಧರೆ ಎಂದು ಸಹ ತಿಳಿದುಬಂದಿದೆ. 

    ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾಟ!
    ಬೆಕ್ಕನ್ನು ಹುಲಿಮರಿ ಎಂದು ನಂಬಿಸಿ ಮೋಸ ಮಾಡಲು ಯತ್ನಿಸಿದ್ದ ಅಪರೂಪದ ಆರೋಪದ ಕೃತ್ಯವೊಂದು ನಡೆದಿದೆ. ಬೆಕ್ಕಿಗೆ ಹುಲಿಮರಿಯ (Tiger Cub) ಬಣ್ಣ ಬಳಿದು ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ಯುವಕನೊಬ್ಬನನ್ನು ಕೇರಳದ ಇಡುಕ್ಕಿಯಲ್ಲಿ ಬಂಧಿಸಲಾಗಿದೆ. ತಮಿಳುನಾಡಿನ (Tamil Nadu) ಗಡಿ ಗ್ರಾಮವಾದ ತಿರುವಣ್ಣಾಮಲ ಅರಣಿ ನಿವಾಸಿ ಪಾರ್ಥಿಬನ್ (24) ಎಂಬ ವ್ಯಕ್ತಿಯೇ ಬೆಕ್ಕಿಗೆ (Cat) ಹುಲಿ ಮರಿಯ ಬಣ್ಣ ಬಳಿದು ಮಾರಾಟ ಮಾಡಲು ಯತ್ನಿಸಿದ ಪೊಲೀಸರು ಬಂಧಿಸಿದ ಆರೋಪಿ.

    ಇದನ್ನೂ ಓದಿ: Lumpy Virus: ಲಂಪಿ ವೈರಸ್​ಗೆ ಸಾವಿರಾರು ಜಾನುವಾರುಗಳು ಬಲಿ? ಫೋಟೋ ವೈರಲ್, ಅಧಿಕಾರಿಗಳು ಹೇಳಿದ್ದೇನು?

    ಈ ಮೂಲಕ ಬೆಕ್ಕಿಗೆ ಬಣ್ಣ ಬಳಿದು ಹುಲಿಮರಿ ಎಂದು ಜನರನ್ನು ನಂಬಿಸಿಯೂ ಹಣ ಮಾಡಬಹುದು ಎಂದು ಖತರ್ನಾಕ್ ಯೋಜನೆ ರೂಪಿಸಿದ ವ್ಯಕ್ತಿ ಬಂಧನವಾಗಿದೆ. ಮೂರು ತಿಂಗಳ ವಯಸ್ಸಿನ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದ.

    ಇದನ್ನೂ ಓದಿ: Street Dog: ಬೀದಿ ನಾಯಿಗೆ ಅನ್ನ ಹಾಕ್ತೀರಾ? ಹಾಗಿದ್ರೆ ಅದು ಜನರಿಗೆ ಕಚ್ಚಿದರೆ ನೀವೇ ಹೊಣೆ!

    ಪ್ರತಿ ಮರಿಗೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದು, ಖರೀದಿದಾರರ ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಸ್ಟೀಲ್ ಬೌಲ್ ನಲ್ಲಿ ಹುಲಿ ಮರಿಗಳಿಗೆ ಆಹಾರ ನೀಡುತ್ತಿರುವ ಚಿತ್ರವನ್ನೂ ಹಾಕಿದ್ದ.
    Published by:ಗುರುಗಣೇಶ ಡಬ್ಗುಳಿ
    First published: