ಪಾಟ್ನಾ (ಡಿಸೆಂಬರ್ 06); ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಇಡೀ ದೇಶದ ರೈತರು ಕಳೆದ 10 ದಿನಗಳಿಂದ ದೆಹಲಿಯಲ್ಲಿ ಉಗ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ರೈತರ ಹೋರಾಟಕ್ಕೆ ದಿನದಿಂದ ದಿನಕ್ಕೆ ದೇಶದಾದ್ಯಂತ ವ್ಯಾಪಕ ಬೆಂಬಲವೂ ಹೆಚ್ಚುತ್ತಿದೆ. ಈ ನಡುವೆ ಬಿಹಾರದಲ್ಲಿ ವಿರೋಧ ಪಕ್ಷವಾದ ಮಹಾಘಟಬಂಧನ್ ಮೈತ್ರಿಕೂಟದ ನಾಯಕರೂ ಸಹ ರೈತರ ಪರವಾಗಿ ಹೋರಾಟಕ್ಕೆಮುಂದಾಗಿದ್ದಾರೆ. ಆದರೆ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಅನುಮತಿಯಿಲ್ಲದೆ ಪ್ರತಿಭಟಿಸಿದ್ದಕ್ಕಾಗಿ ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಮತ್ತು ಮಹಾಘಟಬಂಧನ್‌ನ ಇತರ 18 ನಾಯಕರ ವಿರುದ್ಧ ಬಿಹಾರ ಸರ್ಕಾರ ಪ್ರಕರಣ ದಾಖಲಿಸಿದೆ. ಆದರೆ, ಇದಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಯಾದವ್, "ರೈತರಿಗಾಗಿ ನಾವು ಗಲ್ಲಿಗೇರಲೂ ಸಿದ್ಧ, ಸಾಧ್ಯವಾದರೆ ನಮ್ಮನ್ನು ಬಂಧಿಸಿ" ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.
धनदाता और अन्नदाता की इस लड़ाई में हम अन्नदाता के साथ खड़े है।
क्या किसानों के समर्थन में आवाज़ उठाना, उनकी आय दुगुनी करने के लिए नए क़ानूनों में अनिवार्य रूप से MSP की माँग करना, खेत-खलिहान को बचाने की लड़ाई करना अपराध है? अगर है तो हम यह अपराध बार-बार करेंगे? pic.twitter.com/yA6YaUtvOI
— Tejashwi Yadav (@yadavtejashwi) December 5, 2020
ದೇಶದ ರೈತರು ಕಳೆದ 10 ದಿನಗಳಿಂದ ಕಠಿಣ ಚಳಿ ಬಿಸಿಲೆನ್ನಡೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ. ಆದರೆ, ರೈತರ ಈ ಹೋರಾಟಕ್ಕೆ ಬೆಂಬಲಿಸಿದ ಏಕೈಕ ಕಾರಣಕ್ಕಾಗಿ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ವಿರುದ್ಧ ರಾಜ್ಯ ಸರ್ಕಾರ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಎಂದು ಆರ್‌ಜೆಡಿ ಪಕ್ಷ ಎನ್ಡಿಎ ಮೈತ್ರಿಕೂಟದ ವಿರುದ್ಧ ಕಿಡಿಕಾರಿದೆ.
नेता प्रतिपक्ष @yadavtejashwi जी किसानों के हक़ के लिए लड़ते है तो BJP-JDU की निक्कमी सरकार कोरोना का बहाना बनाकर धरना-प्रदर्शन की अनुमति नहीं देती। इसमें देखिए BJP प्रदेश अध्यक्ष और स्वास्थ्य मंत्री मंगल पांडे बेशर्मी से खुद सोशल शारीरिक दूरी के नियमों की धज्जियाँ उड़ा रहे है। https://t.co/62XnfecDlO
— Rashtriya Janata Dal (@RJDforIndia) December 5, 2020
ಇದನ್ನೂ ಓದಿ : Delhi Air Pollution: ಚಳಿ ಜೊತೆಗೆ ಹದಗೆಡುತ್ತಲೇ ಇದೆ ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿ
ಶನಿವಾರ ಬಿಹಾರ ಸರ್ಕಾರ ಪ್ರತಿಭಟನೆ ನಡೆಸಲು ಅನುಮತಿ ನೀಡದಿದ್ದರೂ, ಪ್ರತಿಪಕ್ಷಗಳು ಪಾಟ್ನಾದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಿದವು. ಅಲ್ಲಿ ಅವರು "ದೇಶಾದ್ಯಂತದ ರೈತರ ಹಿತಾಸಕ್ತಿಯನ್ನು ಕಾಪಾಡಲು ಯಾವುದೇ ಬೆಲೆ ತೆರಲು ಸಿದ್ದ" ಎಂದು ಪ್ರಮಾಣವಚನ ಸ್ವೀಕರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ