ಕೊಲ್ಕತ್ತಾ(ಜು.31): ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ (Partha Chatterjee) ಅವರ ಆಪ್ತೆ ನಟಿ ಅರ್ಪಿತಾ ಮುಖರ್ಜಿ (Arpita Mukharjee) ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳು ಹೊರ ಬರುತ್ತಲೇ ಇವೆ. ಅರ್ಪಿತಾ ಮನೆಯಲ್ಲಿ ಲೈಂಗಿಕ ಆಟಿಕೆಗಳು (Adult Toys) ಸಿಕ್ಕಿರುವುದರಿಂದ ತೊಡಗಿ ನಟಿಯ ತಾಯಿಯ ಹಳೆಯ ಮನೆಯ ತನಕ ಸುದ್ದಿಯಾಗುತ್ತಿದೆ. ತನ್ನ ಮನೆಯಲ್ಲಿ 50 ಕೋಟಿಗೂ ಹೆಚ್ಚು ನಗದು, 5 ಕೆಜಿಗೂ ಅಧಿಕ ಚಿನ್ನ ಇನ್ನೂ ಬೆಲೆ ಬಾಳುವ ವಸ್ತುಗಳನ್ನು ಇಟ್ಟುಕೊಂಡಿದ್ದ ಅರ್ಪಿತಾ ತನ್ನ ಮನೆ ಬಾಡಿಗೆ, ಫ್ಲ್ಯಾಟ್ ಮೈಂಟೆನೆನ್ಸ್ ಚಾರ್ಜ್, ಡ್ರೈವರ್ ಸಂಬಳ ಯಾವುದನ್ನೂ ಕೊಟ್ಟಿಲ್ಲ. ಸ್ವತಃ ಅರ್ಪಿತಾ ಅವರ ಸ್ವಂತ ಖರ್ಚು ವೆಚ್ಚಗಳನ್ನು ಯಾವುದನ್ನೂ ಪಾವತಿಸಿಲ್ಲ. ಈ ವಿಚಾರ ಐಪಿಎಸ್ (IPS) ಅಧಿಕಾರಿಯೊಬ್ಬರ ಗಮನ ಸೆಳೆದಿದ್ದು ಈ ವಿಚಾರವಾಗಿ ಅವರು ಟ್ವೀಟ್ ಮಾಡಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣವನ್ನು ಜಾರಿ ನಿರ್ದೇಶನಾಲಯ (ಇಡಿ) ಆಳವಾಗಿ ಕೆದಕುತ್ತಿರುವಾಗ, ಉಚ್ಛಾಟಿತ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಕುರಿತು ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಈ ಜೋಡಿಯನ್ನು ಬಂಧಿಸಿದ ಕೆಲವು ದಿನಗಳ ನಂತರ, ಜುಲೈ 28 ರಂದು, ಬೋತ್ರಾ ಅವರು ಮುಖರ್ಜಿ ಅವರ ಟ್ವೀಟ್ ಅನ್ನು ಹಂಚಿಕೊಂಡರು.
ಪ್ರಾಮಾಣಿಕತೆ ಬಗ್ಗೆ ವ್ಯಂಗ್ಯ
"ನೀವು ಏನೇ ಹೇಳಿ, ಅರ್ಪಿತಾ-ಜಿ ನಿಷ್ಠೆಗೆ ಉದಾಹರಣೆಯಾಗಿದ್ದಾರೆ, ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ ಬೋತ್ರಾ ಅವರು, "ಅವರು (ವಸತಿ) ಸೊಸೈಟಿಗೆ ₹ 11,809 ಪಾವತಿಸಬೇಕಾಗಿತ್ತು, ಬಾಗಿಲಿನ ಮೇಲೆ ನೋಟಿಸ್ ಹಾಕಲಾಯಿತು. ಆದರೆ ಅವರು ಇನ್ನೊಬ್ಬ ವ್ಯಕ್ತಿಯ ಹಣವನ್ನು ಸಂಪೂರ್ಣವಾಗಿ ಇಟ್ಟುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
कुछ भी कहो पर अर्पिता जी ने वफादारी की मिसाल कायम की है।
खुद के ऊपर सोसाइटी के 11,809 रुपये बाकी थे, दरवाजे पर नोटिस लग गया पर दूसरे के पैसे को पूरा संभाल कर रखा। pic.twitter.com/BzJWCR0bjL
— Arun Bothra 🇮🇳 (@arunbothra) July 28, 2022
ಬೆಂಗಾಲಿ ಮಾಡೆಲ್ ಮತ್ತು ನಟಿಯ 'ನಿಷ್ಠೆ' ಕುರಿತು ಐಪಿಎಸ್ ಅಧಿಕಾರಿಯ ವ್ಯಂಗ್ಯ ಪೋಸ್ಟ್ ಇದೀಗ ವೈರಲ್ ಆಗಿದೆ. ಅನೇಕ ಜನರು ಈ ವಿಷಯದ ಬಗ್ಗೆ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ. ಇಂದಿನ ಕಲಿಯುಗದಲ್ಲಿ ಇಂತಹ ಪ್ರಾಮಾಣಿಕ ವ್ಯಕ್ತಿಯನ್ನು ಭೇಟಿಯಾಗುವುದು ಅಪರೂಪ. ಅಂತಹ ಅಪರೂಪದ ಮನುಷ್ಯರನ್ನು ಭಾರತದ ಪುಣ್ಯಭೂಮಿಯಲ್ಲಿ ಮಾತ್ರ ಕಾಣಬಹುದು ಎಂದು ಬಳಕೆದಾರರು ಬರೆದಿದ್ದಾರೆ.
ಇದನ್ನೂ ಓದಿ: SSC Scam: ಮಗಳ ಫ್ಲ್ಯಾಟ್ನಲ್ಲಿ ಸಿಕ್ತು 50 ಕೋಟಿ! ಆದರೆ ಅರ್ಪಿತಾ ಅಮ್ಮನ ಮನೆಯ ಅವಸ್ಥೆ ಒಮ್ಮೆ ನೋಡಿ!
ಬಳಕೆದಾರರಲ್ಲಿ ಒಬ್ಬರು ನೋಟು ಅಮಾನ್ಯೀಕರಣದ ಬಗ್ಗೆ ವ್ಯಂಗ್ಯವಾಡಿದರು. "ಆದರೆ ನೋಟು ಅಮಾನ್ಯೀಕರಣದ ನಂತರ ಕಪ್ಪು ಹಣ ಕಣ್ಮರೆಯಾಯಿತು ಎಂದು ನಾವು ಕೇಳಿದ್ದೇವೆ?" ಎಂದು ವ್ಯಂಗ ಮಾಡಿದ್ದಾರೆ.
ಟಿಎಂಸಿಗೆ ಮುಖಭಂಗ
ಬಹುಕೋಟಿ ಹಗರಣದಲ್ಲಿ ಈಗ ಅಮಾನತುಗೊಂಡಿರುವ ಪಕ್ಷದ ಹಿರಿಯ ನಾಯಕ ಪಾರ್ಥ ಚಟರ್ಜಿಯ ಬಂಧನದ ನಂತರ TMC ರಾಜ್ಯ ಸಚಿವ ಸಂಪುಟದ ಪುನಾರಚನೆಗೆ ಹೋಗುವ ಸಾಧ್ಯತೆಯಿದೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆಯಿಂದ ಹಾನಿಗೊಳಗಾದ ಪಕ್ಷಕ್ಕೆ ಇಮೇಜ್ ಮೇಕ್ ಓವರ್ ಮಾಡುವ ಗುರಿಯನ್ನು ಪುನರ್ರಚನೆಯು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: SSC Scam: ಸಚಿವರ ಆಪ್ತೆ ಅರ್ಪಿತಾ ಮನೆಯಲ್ಲಿ ಸಿಕ್ತು ಲೈಂಗಿಕ ಆಟಿಕೆಗಳು!
ಟಿಎಂಸಿ ಮತ್ತು ಸರ್ಕಾರದಲ್ಲಿ ಮಾಜಿ ವರ್ಚುವಲ್ ನಂಬರ್ 2 ಆಗಿದ್ದ ಚಟರ್ಜಿ ಅವರನ್ನು ಕಳೆದ ವಾರ ಬಂಧಿಸಿದ ನಂತರ ಮತ್ತು ಅವರ ಸಹವರ್ತಿ ಅರ್ಪಿತಾ ಮುಖರ್ಜಿಯವರ ಫ್ಲ್ಯಾಟ್ಗಳಿಂದ ಸುಮಾರು ₹ 50 ಕೋಟಿ ವಸೂಲಿ ಮಾಡಿದ ನಂತರ ಎಲ್ಲಾ ಸಚಿವ ಜವಾಬ್ದಾರಿಗಳಿಂದ ತೆಗೆದುಹಾಕಲಾಯಿತು ಮತ್ತು ಪಕ್ಷದಿಂದ ಅಮಾನತುಗೊಳಿಸಲಾಯಿತು.
ಗುರುವಾರ, ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಶೀಘ್ರದಲ್ಲೇ ಸಂಪುಟ ಪುನಾರಚನೆ ನಡೆಯಲಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ