ಉಗ್ರರೆಂದು ತಪ್ಪಾಗಿ ಭಾವಿಸಿ 13 ನಾಗರಿಕರನ್ನ ಕೊಂದ ಭದ್ರತಾ ಪಡೆ; ಉನ್ನತಮಟ್ಟದ ತನಿಖೆ

Nagaland Incident- ನಾಗಾಲೆಂಡ್ ರಾಜ್ಯದ ಮೋನ್ ಜಿಲ್ಲೆಯ ಟಿರು ಗ್ರಾಮದಲ್ಲಿ 13 ನಾಗರಿಕರು ಸೇನಾ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ಧಾರೆ. ತಪ್ಪಾಗಿ ನಡೆದ ಈ ಘಟನೆಗೆ ಸೇನೆ ವಿಷಾದಿಸಿದೆ. ಉನ್ನತ ಹಂತದ ತನಿಖೆ ನಡೆಸಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ, ಡಿ. 5: ಉಗ್ರಗಾಮಿಗಳ ಚಲನವಲದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಭದ್ರತಾ ಪಡೆಗಳು ಗ್ರಾಮವೊಂದರ ನಾಗರಿಕರನ್ನ ಉಗ್ರರೆಂದು ತಪ್ಪಾಗಿ ಭಾವಿಸಿ ಕೊಂದು ಹಾಕಿದ ಘಟನೆ ನಾಗಾಲೆಂಡ್ ರಾಜ್ದದ ಮೋನ್ ಜಿಲ್ಲೆ ಟಿರು ಗ್ರಾಮದಲ್ಲಿ ಸಂಭವಿಸಿದೆ. ಭದ್ರತಾ ಪಡೆಗಳ ಈ ಕಾರ್ಯಾಚರಣೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಿಂಸಾಚಾರಕ್ಕಿಳಿದು ಒಬ್ಬ ಸೈನಿಕನ್ನು ಹತ್ಯೆಗೈದಿದ್ದಾರೆ. ಭದ್ರತಾ ಪಡೆಗಳ ಹಲವು ವಾಹನಗಳನ್ನ ಸುಟ್ಟುಹಾಕಿದ್ದಾರೆ. ಇದೇ ವೇಳೆ, ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಮಾಯಕ ನಾಗರಿಕರನ್ನ ಬಲಿತೆಗೆದುಕೊಂಡ ಘಟನೆಗೆ ಭಾರತೀಯ ಸೇನೆ ಉನ್ನತ ಹಂತದ ತನಿಖೆ ನಡೆಸುತ್ತಿದೆ.

  ಈ ತಪ್ಪು ಕಾರ್ಯಾಚರಣೆ ಬಗ್ಗೆ ಸೇನೆ ಹೇಳಿದ್ದು ಇದು: “ಉಗ್ರರ ಚಲನವಲನ ಆಗುತ್ತಿರಬಹುದು ಎಂದು ನಂಬಲರ್ಹ ಗುಪ್ತಚರ ಮಾಹಿತಿ ಆಧರಿಸಿ ಟಿರು ಪ್ರದೇಶದಲ್ಲಿ ಕಾರ್ಯಾಚರಣೆ ಯೋಜಿಸಿದೆವು. ಈ ಘಟನೆ ಮತ್ತು ಆನಂತರ ನಡೆದ ಘಟನೆಗೆ ನಮ್ಮ ವಿಷಾದ ಇದೆ. ಹಲವು ಸಾವುಗಳಿಗೆ ಕಾರಣವಾಗಿದ್ದು ಹೇಗೆ ಎಂದು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ. ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು. ಘಟನೆಯಲ್ಲಿ ಭದ್ರತಾ ಪಡೆಯ ಹಲವು ಸೈನಿಕರಿಗೂ ಗಾಯಗಳಾಗಿವೆ. ಒಬ್ಬ ಸೈನಿಕ ಮೃತಪಟ್ಟಿದ್ದಾರೆ” ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

  ಇದನ್ನೂ ಓದಿ: Amit Shah: ಕೋವಿಡ್‌ಗೂ ಮುನ್ನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ನಮ್ಮ ಅದೃಷ್ಟ, ಅಮಿತ್‌ ಶಾ ಹೀಗಂದಿದ್ದಕ್ಕೆ ಕಾರಣವಿದೆ

  ಸೇನಾ ಕಾರ್ಯಾಚರಣೆಯಿಂದ ಗ್ರಾಮಸ್ಥರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಬಲಿಯಾದ ಯುವಕರು ಅಮಾಯಕರು. ಸಮೀಪದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸ ಮಾಡಿ ಊರಿಗೆ ವಾಪಸ್ಸಾಗುತ್ತಿದ್ದರು ಎಂಬುದು ಗ್ರಾಮಸ್ಥರ ವಾದ. ರೊಚ್ಚಿಗೆದ್ದ ಜನರು ಹಲವು ಭದ್ರತಾ ಪಡೆ ವಾಹನಗಳಿಗೆ ಬೆಂಕಿ ಹಚ್ಚಿದರು. ಉದ್ರಿಕ್ತ ಜನರನ್ನ ನಿಯಂತ್ರಿಸಲು ಭದ್ರತಾ ಪಡೆಗಳು ಬಲಪ್ರಯೋಗ ಮಾಡಬೇಕಾಯಿತು ಎನ್ನಲಾಗಿದೆ.

  ನಾಗಾಲೆಂಡ್ ಮುಖ್ಯಮಂತ್ರಿ ನೇಫಿಯು ರಯೋ (Nagaland CM Neiphiu Rio) ಈ ದುರದೃಷ್ಟಕರ ಘಟನೆಯನ್ನ ಬಲವಾಗಿ ಖಂಡಿಸಿದ್ದಾರೆ. ವಿಶೇಷ ತನಿಖಾ ತಂಡವನ್ನ ರಚಿಸಿ ತನಿಖೆಗೆ ಆದೇಶಿಸಲಿದ್ದಾರೆ. “ಮೋನ್ ಜಮಿಲ್ಲೆಯ ಓಟಿಂಗ್​ನಲ್ಲಿ ನಾಗರಿಕರ ಹತ್ಯೆಗೆ ಕಾರಣವಾದ ಘಟನೆ ಖಂಡನೀಯವಾದುದು. ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪ ಇದೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ. ಉನ್ನತ ಮಟ್ಟದ ವಿಶೇಷ ತನಿಖಾ ತಂಡ ಈ ಘಟನೆಯ ತನಿಖೆ ನಡೆಸಲಿದೆ. ಕಾನೂನು ಪ್ರಕಾರ ನ್ಯಾಯ ಒದಗಿಸಲಾಗುತ್ತದೆ. ಸಮಾಜದ ಎಲ್ಲಾ ವರ್ಗಗಳಿಂದ ಶಾಂತಿಗೆ ಮನವಿ ಮಾಡುತ್ತೇವೆ” ಎಂದು ನಾಗಾಲೆಂಡ್ ಸಿಎಂ ಹೇಳಿಕೆ ನೀಡಿದ್ಧಾರೆ.

  ಇದನ್ನೂ ಓದಿ: London: ತಾನು ಹುಟ್ಟಿದ್ದಕ್ಕೆ ಕಾರಣವಾದ ವೈದ್ಯನ ವಿರುದ್ಧ ಕೇಸ್ ಹಾಕಿ ಮಿಲಿಯನ್​ಗಟ್ಟಲೆ ಪರಿಹಾರ ಗೆದ್ದ ಯುವತಿ

  ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಮೃತಪಟ್ಟವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ರಚಿಸುವ ಉನ್ನತ ಹಂತದ ಎಸ್​ಐಟಿ ಈ ಘಟನೆಯನ್ನ ಕೂಲಂಕಷವಾಗಿ ತನಿಖೆ ನಡೆಸಿ ಮೃತಪಟ್ಟ ಕುಟುಂಬಗಳಿಗೆ ನ್ಯಾಯ ಒದಗಿಸುತ್ತದೆ ಎಂದು ಹೇಳಿದ್ಧಾರೆ.

  ರಾಹುಲ್ ಗಾಂಧಿ ಆಕ್ರೋಶ:

  ನಾಗಾಲೆಂಡ್​ನ ಮೋನ್ ಜಿಲ್ಲೆಯಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಮಾಯಕ ನಾಗರಿಕ ಹತ್ಯೆಯಾಗಿರುವ ಘಟನೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ನಮ್ಮ ನಾಡಿನಲ್ಲಿ ನಾಗಕರಿಗರೂ ಸುರಕ್ಷಿತವಾಗಿಲ್ಲ, ಭದ್ರತಾ ಪಡೆಗಳಿಗೂ ಭದ್ರತೆ ಇಲ್ಲ ಎಂಬಂಥ ವಾತಾವರಣ ಇರುವಾಗ ಗೃಹ ಸಚಿವಾಲಯ ಏನು ಮಾಡುತ್ತಿತ್ತು ಎಂದು ಸರ್ಕಾರ ಹೇಳಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
  Published by:Vijayasarthy SN
  First published: