ಭಾರತದ ಐಎಂಎ ವಿದ್ಯಾರ್ಥಿಯಾಗಿದ್ದ ತಾಲಿಬಾನ್ ನಾಯಕ!

ಡೆಹರಾಡೂನ್‍ನ ಭಾರತೀಯ ಸೇನಾ ಅಕಾಡೆಮಿಯ 1982ನೇ ಬ್ಯಾಚ್ ಸೇರುವಾಗ ‘ಶೇರು’ ಅಥವಾ ಶೇರ್ ಮೊಹಮದ್ ಸ್ಟಾನಿಕ್ಸಾಯಿಗೆ 20 ವರ್ಷ ವಯಸ್ಸು

ಡೆಹರಾಡೂನ್‍ನ ಭಾರತೀಯ ಸೇನಾ ಅಕಾಡೆಮಿಯ 1982ನೇ ಬ್ಯಾಚ್ ಸೇರುವಾಗ ‘ಶೇರು’ ಅಥವಾ ಶೇರ್ ಮೊಹಮದ್ ಸ್ಟಾನಿಕ್ಸಾಯಿಗೆ 20 ವರ್ಷ ವಯಸ್ಸು

ಡೆಹರಾಡೂನ್‍ನ ಭಾರತೀಯ ಸೇನಾ ಅಕಾಡೆಮಿಯ 1982ನೇ ಬ್ಯಾಚ್ ಸೇರುವಾಗ ‘ಶೇರು’ ಅಥವಾ ಶೇರ್ ಮೊಹಮದ್ ಸ್ಟಾನಿಕ್ಸಾಯಿಗೆ 20 ವರ್ಷ ವಯಸ್ಸು

  • Share this:

ಅಫ್ಘಾನಿಸ್ತಾವನ್ನು ತಾಲಿಬಾನ್‌ ವಶಪಡಿಸಿಕೊಂಡಿರುವುದು ನಿಮಗೆ ಗೊತ್ತಿರುವ ವಿಚಾರ. ಆದರೆ, ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮದ್ ಅಬ್ಬಾಸ್ ಸ್ಟಾನಿಕ್ಝಾಯಿ, ಒಂದೊಮ್ಮೆ ಡೆಹ್ರಾಡೂನ್‍ನಲ್ಲಿ ಇರುವ ಭಾರತೀಯ ಸೇನಾ ಅಕಾಡಮಿಯ ಒಬ್ಬ ಸಂಭಾವಿತ ಕೆಡೆಟ್ ಆಗಿದ್ದರು. ಅಲ್ಲಿ ಆತನ ಸಹಪಾಠಿಗಳು ಆತನನ್ನು ‘ಶೇರು’ ಎಂದು ಕರೆಯುತ್ತಿದ್ದರು. ಆಗ ಆತನ ಧೋರಣೆಗಳು ಈಗಿನಂತೆ ಇರಲಿಲ್ಲ ಎನ್ನುತ್ತಾರೆ..!


ಭಾರತೀಯ ಮಿಲಿಟರಿ ಸಂಸ್ಥೆ ತನ್ನ ದ್ವಾರವನ್ನು ಅಫ್ಘಾನಿಗಳ ಪಾಲಿಗೆ ತೆರೆದಾಗ, ಭಾರತೀಯ ಸೇನಾ ಅಕಾಡೆಮಿ ಸೇರಿದ ಶೇರ್ ಮೊಹಮದ್ ಸ್ಟಾನಿಕ್ಝಾಯಿ ಒಂದೂವರೆ ವರ್ಷಗಳ ಕಾಲ ತರಬೇತಿ ಪಡೆದಿದ್ದರು. ಅಕಾಡೆಮಿ ಸೇರುವ ಮೊದಲು ರಾಜ್ಯಶಾಸ್ತ್ರದಲ್ಲಿ ಶಿಕ್ಷಣ ಪಡೆದಿದ್ದರು ಇವರು. ಆದರೆ, ಈಗ ಶೇರ್ ಮೊಹಮದ್ ಸ್ಟಾನಿಕ್ಝಾಯಿ, ತಾಲಿಬಾನ್ ಆಡಳಿತದ ಪ್ರಮುಖ ಭಾಗವಾಗಲಿದ್ದಾರೆಂದು ಭಾವಿಸಲಾಗಿರುವ ಉನ್ನತ ಮಟ್ಟದ ತಾಲಿಬಾನ್ ನಾಯಕರಲ್ಲಿ ಒಬ್ಬರಾಗಿದ್ದಾರೆ.


ಡೆಹರಾಡೂನ್‍ನ ಭಾರತೀಯ ಸೇನಾ ಅಕಾಡೆಮಿಯ 1982ನೇ ಬ್ಯಾಚ್ ಸೇರುವಾಗ ‘ಶೇರು’ ಅಥವಾ ಶೇರ್ ಮೊಹಮದ್ ಸ್ಟಾನಿಕ್ಸಾಯಿಗೆ 20 ವರ್ಷ ವಯಸ್ಸು. ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಒಬ್ಬರು, ಶೇರ್ ಮೊಹಮದ್ ಅವರೊಂದಿಗೆ ಅಕಾಡೆಮಿಯಲ್ಲಿ ಇದ್ದ ದಿನಗಳನ್ನು ನೆನಪಿಸಿಕೊಂಡಿದ್ದು, ಆತ ವಯಸ್ಸಿನಲ್ಲಿ ಸೇನಾ ಅಕಾಡೆಮಿಯ ಇತರ ಕೆಡೆಟ್‍ಗಳಿಗಿಂತ ಕೊಂಚ ಹಿರಿಯನಾಗಿದ್ದ, ಸದಾ ಮೀಸೆ ತೀಡಿಕೊಳ್ಳುತ್ತಿದ್ದ ಎಲ್ಲರ ಪ್ರೀತಿ ಪಾತ್ರ ವ್ಯಕ್ತಿಯಾಗಿದ್ದ ಎಂದು ಹೇಳಿದ್ದಾರೆ.


“ಆ ದಿನಗಳಲ್ಲಿ ಆತ ಖಂಡಿತವಾಗಿಯೂ ಮೂಲಭೂತವಾದಿ ದೃಷ್ಟಿಕೋನ ಹೊಂದಿರಲಿಲ್ಲ” ಎಂದು ನಿವೃತ್ತ ಮೇಜರ್ ಜನರಲ್ ಡಿ ಎ ಚತುರ್ವೇದಿ , ಶೇರ್ ಮೊಹಮದ್ ಸ್ಟಾನಿಕ್ಝಾಯಿ ಕುರಿತು ತಮಗೆ ನೆನಪಿದ್ದ ಸಂಗತಿಯನ್ನು ತಿಳಿಸಿದ್ದಾರೆ.


ಇದನ್ನು ಓದಿ: ಸಿಟಿ ರವಿ ಮನೆಗೆ ಮುತ್ತಿಗೆ ಯತ್ನ; ಕಾಂಗ್ರೆಸ್​ ಕಾರ್ಯಕರ್ತರ ವಶಕ್ಕೆ ಪಡೆದ ಪೊಲೀಸರು

ನಿವೃತ್ತ ಕರ್ನಲ್ ಕೇಸರ್ ಸಿಂಗ್ ಶೇಖಾವತ್ ಕೂಡ, ಶೇರ್ ಮೊಹಮದ್ ಸ್ಟಾನಿಕ್ಝಾಯಿಯ ಸಹಪಾಠಿ ಆಗಿದ್ದರು. ಅವರೆಲ್ಲಾ ವಾರಾಂತ್ಯದಲ್ಲಿ ಹೈಕಿಂಗ್ ಮತ್ತು ನದಿ ತೀರದ ಕಡೆಗೆ ಚಿಕ್ಕಪುಟ್ಟ ಪ್ರವಾಸ ಹೋಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಕರ್ನಲ್ ಕೇಸರ್ ಸಿಂಗ್ ಶೇಖಾವತ್.


“ನಾವು ರಿಷಿಕೇಶಕ್ಕೆ ಹೋಗಿ, ಗಂಗಾ ನದಿಯಲ್ಲಿ ಸ್ನಾನ ಮಾಡಿದ ದಿನ ತೆಗೆದ, ಆತ ಈಜುಡುಗೆಯಲ್ಲಿ ಇರುವ ಫೋಟೋ ಒಂದಿದೆ” ಎಂದು ನೆನಪಿಸಿಕೊಂಡಿದ್ದಾರೆ ಅವರು.


ಈ ಹಿಂದೆ ತಾಲಿಬಾನ್ ಆಡಳಿತದಲ್ಲಿ ಇದ್ದಾಗ, ಶೇರ್ ಮೊಹಮದ್ ಸ್ಟಾನಿಕ್ಸಾಯ್ ಅವರು ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿಯಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ, ಬಿಲ್‍ ಕ್ಲಿಂಟನ್ ಆಡಳಿತಾವಧಿಯಲ್ಲಿ , ತಾಲಿಬಾನ್ ಪರವಾಗಿ ರಾಜತಾಂತ್ರಿಕ ಮಾತುಕತೆಗೆ ಯುಎಸ್‍ಗೆ ಕೂಡ ಅವರು ಪ್ರವಾಸ ಮಾಡಿದ್ದರು. 2015 ರಲ್ಲಿ ಶೇರ್ ಮೊಹಮದ್ ಸ್ಟಾನ್‍ಕ್ಸಾಯಿ ಅವರನ್ನು ಕತಾರ್‍ನಲ್ಲಿ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
First published: