ಉಗ್ರರ ಗುಂಡಿಗೆ ಸೇನೆಯ ಅಧಿಕಾರಿ ಹುತಾತ್ಮ; ಎಲ್​ಒಸಿ ಬಳಿ ಮುಂದುವರೆದ ಗುಂಡಿನ ಚಕಮಕಿ

news18-kannada
Updated:October 22, 2019, 8:18 PM IST
ಉಗ್ರರ ಗುಂಡಿಗೆ ಸೇನೆಯ ಅಧಿಕಾರಿ ಹುತಾತ್ಮ; ಎಲ್​ಒಸಿ ಬಳಿ ಮುಂದುವರೆದ ಗುಂಡಿನ ಚಕಮಕಿ
ಸಾಂದರ್ಭಿಕ ಚಿತ್ರ
  • Share this:
ಲೈನ್​ ಆಫ್ ಕಂಟ್ರೋಲ್ ಬಳಿಯ ನೌಶೇರಾ ವಲಯದಿಂದ ಅರ್ಧ ಕಿ.ಮೀ. ದೂರದಲ್ಲಿ ಉಗ್ರರು ಹಾರಿಸಿದ ಗುಂಡಿಗೆ ಸೇನೆಯ ಜೂನಿಯರ್ ಕಮಿಷನ್ಡ್​ ಆಫೀಸರ್ (ಜೆಸಿಒ)  ಒಬ್ಬರು ಹುತಾತ್ಮರಾಗಿದ್ದಾರೆ. ಭದ್ರತಾ ಪಡೆದ ಸಿಬ್ಬಂದಿ ಆ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರೊಂದಿಗೆ ಪ್ರತಿ ದಾಳಿ ನಡೆಸುತ್ತಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ದಿನದ ಹಿಂದೆಯಷ್ಟೇ, ಕಾಶ್ಮೀರದ ಅವಂತಿಪೊರ್ ವಲಯದಲ್ಲಿ ಸೈನಿಕರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವಲಯದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಮಾಹಿತಿ ತಿಳಿದಾಕ್ಷಣ ಆ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಉಗ್ರರ ಪತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು.

ಭಾರತೀಯ ಸೇನೆ ಭಾನುವಾರ ಉಗ್ರರ ನಾಲ್ಕು ಕ್ಯಾಂಪ್​ಗಳನ್ನು ನಾಶ ಮಾಡಿದ ಬಳಿಕ ಕಾಶ್ಮೀರದಲ್ಲಿ ಉಗ್ರರು ನಡೆಸಿದ ಮೊದಲ ದಾಳಿ ಇದಾಗಿದೆ.

ಇದನ್ನು ಓದಿ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ನೂತನ ಲೆ.ಗೌವರ್ನರ್​ ಹುದ್ದೆಗೆ ಮುಂಚೂಣಿಯಲ್ಲಿದೆ ರಾಜ್ಯಪಾಲ ಮಲ್ಲಿಕ್​ ಹೆಸರು

First published:October 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading