Manipur Attack: ಮಣಿಪುರದಲ್ಲಿ ಉಗ್ರರ ದಾಳಿ: ಕಮಾಂಡಿಂಗ್​ ಆಫೀಸರ್​ ಸೇರಿದಂತೆ 7 ಮಂದಿ ಹತ್ಯೆ

ಈ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಮತ್ತು ಅವರ ಮಗ ಮತ್ತು ಹೆಂಡತಿ ಹತ್ಯೆಯಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಣಿಪುರದ ಮಯನ್ಮಾರ್​ ಗಡಿಯ ಸಿಂಘಾತ್‌ನಲ್ಲಿ (Singhat) ಉಗ್ರರು (Militant Attack) ನಡೆಸಿದ ದಾಳಿಯಲ್ಲಿ ನಾಲ್ವರು ಸೈನಿಕರು ಮತ್ತು 46 ಅಸ್ಸಾಂ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಮತ್ತು ಅವರ ಮಗ ಮತ್ತು ಹೆಂಡತಿ ಹತ್ಯೆಯಾಗಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಈ ದಾಳಿ ನಡೆಸಲಾಗಿದೆ. ಈ ದಾಳಿಯ ಘಟನೆಯಲ್ಲಿ ಗಾಯಗೊಂಡ ಮೂವರನ್ನು ಬೆಹಿಯಾಂಗ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮಣಿಪುರ ಮೂಲದ ಪೀಪಲ್ಸ್ ಲಿಬರೇಶನ್ ಆರ್ಮಿ ದಾಳಿಯ ಹಿಂದೆ ಇರಬಹುದೆಂದು ಅಂದಾಜಿಸಲಾಗಿದೆ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.



    ಮೂಲಗಳ ಪ್ರಕಾರ, ಅಸ್ಸಾಂ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿಯ ಬೆಂಗಾವಲು ಸಿಂಘಾತ್ ಉಪವಿಭಾಗದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ದಾಳಿ ನಡೆದಾಗ ಅಧಿಕಾರಿ ತನ್ನ ಕುಟುಂಬ ಸದಸ್ಯರು ತಂಡದೊಂದಿಗೆ ಪ್ರಯಾಣಿಸುತ್ತಿದ್ದರು.

    ಹೇಡಿಗಳ ಕೃತ್ಯ

    ಮಣಿಪುರ ಮುಖ್ಯಮಂತ್ರಿ ನೊಂಗ್ತೋಂಬಮ್ ಬಿರೇನ್ ಸಿಂಗ್ ಅವರು ಭಯೋತ್ಪಾದಕರ ಈ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ. ಅಲ್ಲದೇ ಇಂತಹ ಹೇಡಿತನದ ಕೃತ್ಯವನ್ನು ಸುಲಭವಾಗಿ ಬಿಡುವುದಿಲ್ಲ ಎಂದು ಹೇಳಿದ್ದಾರೆ. ತಪ್ಪಿತಸ್ಥರನ್ನು ಕಾನೂನಾತ್ಮಕವಾಗಿ ಬಂಧಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

    ಇದನ್ನು ಓದಿ: Delhi Pollution: ಅಗತ್ಯ ಬಿದ್ದರೆ 2 ದಿನ ಲಾಕ್​ಡೌನ್​ ಮಾಡುವಂತೆ ತಿಳಿಸಿದ ಸುಪ್ರೀಂ ಕೋರ್ಟ್

    ಅಧಿಕಾರಿಯ 8 ವರ್ಷದ ಕಂದನೂ ಉಗ್ರರ ಗುಂಡಿಗೆ ಬಲಿ

    ಸಾವನ್ನಪ್ಪಿದ ಕಮಾಂಡಿಂಗ್ ಅಧಿಕಾರಿಯನ್ನು ಕರ್ನಲ್ ವಿಪ್ಲವ್ ತ್ರಿಪಾಠಿ ಎಂದು ಗುರುತಿಸಲಾಗಿದೆ, ಅವರು ಮ್ಯಾನ್ಮಾರ್ ಗಡಿಯಲ್ಲಿನ ತಮ್ಮ ಕೋಯ್ ಪೋಸ್ಟ್‌ಗಳಲ್ಲಿ ಒಂದರಿಂದ ಹಿಂತಿರುಗುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸತ್ತವರಲ್ಲಿ ಒಬ್ಬ ಅಧಿಕಾರಿ, ಮೂವರು ಕ್ವಿಕ್ ರೆಸ್ಪಾನ್ಸ್ ಟೀಮ್‌ಗೆ ಸೇರಿದವರಾಗಿದ್ದಾರೆ. ಭಯೋತ್ಪಾದಕರು ಭಾರೀ ಶಸ್ತ್ರಸಜ್ಜಿತವಾಗಿ ಸೆಹ್ಕೆನ್ ಗ್ರಾಮದ ಬಳಿ ಕ್ಯೂಆರ್‌ಟಿಯನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದಾರೆ. ಕರ್ನಲ್ ತ್ರಿಪಾಠಿ ಅವರ ಚಾಲಕ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ

    ರಕ್ಷಣಾ ಸಚಿವರಿಂದ ಸಂತಾಪ

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಅಲ್ಲದೇ ಈ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಮಣಿಪುರದ ಚುರಾಚಂದ್‌ಪುರದಲ್ಲಿ ಅಸ್ಸಾಂ ರೈಫಲ್ಸ್ ಬೆಂಗಾವಲು ಪಡೆಯ ಮೇಲೆ ನಡೆದ ಹೇಡಿತನದ ದಾಳಿ. ಇದು ಅತ್ಯಂತ ನೋವಿನ ಮತ್ತು ಖಂಡನೀಯವಾಗಿದೆ ದೇಶವು CO 46 AR ಮತ್ತು ಇಬ್ಬರು ಕುಟುಂಬ ಸದಸ್ಯರನ್ನು ಒಳಗೊಂಡಂತೆ 5 ವೀರ ಸೈನಿಕರನ್ನು ಕಳೆದುಕೊಂಡಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ
    Published by:Seema R
    First published: