ಬುಲಂದ್​ಶಹರ್​ ಹಿಂಸಾಚಾರ ಪ್ರಕರಣಕ್ಕೆ ಹೊಸ ತಿರುವು; ಪೊಲೀಸ್​ ಹತ್ಯೆ ಹಿಂದಿದೆಯಾ ಸೈನಿಕನ ಕೈವಾಡ?

ಪೊಲೀಸ್​ ಅಧಿಕಾರಿ ಸುಬೋಧ್​ ಸಿಂಗ್​ ಹತ್ಯೆ ನಡೆದ ದಿನ ಜಿತು ಫೌಜಿ ಊರಿನಲ್ಲೇ ಇದ್ದ ಎಂದು ಆತನ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ಆದರೆ, ಈ ಘಟನೆಯಾದ ನಂತರ ಅದೇ ದಿನ ಆತ ಕಾರ್ಗಿಲ್​ಗೆ ಹೊರಟುಹೋಗಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

sushma chakre | news18
Updated:December 7, 2018, 3:44 PM IST
ಬುಲಂದ್​ಶಹರ್​ ಹಿಂಸಾಚಾರ ಪ್ರಕರಣಕ್ಕೆ ಹೊಸ ತಿರುವು; ಪೊಲೀಸ್​ ಹತ್ಯೆ ಹಿಂದಿದೆಯಾ ಸೈನಿಕನ ಕೈವಾಡ?
ಸೈನಿಕ ಜೀತು ಫೌಜಿ
sushma chakre | news18
Updated: December 7, 2018, 3:44 PM IST
ಬುಲಂದ್​ಶಹರ್​ (ಡಿ. 7): ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಡಿ. 3ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಹೊಸ ತಿರುವುಗಳು ಸಿಗುತ್ತಿದ್ದು, ಹತ್ಯೆಗೀಡಾದ ಇನ್​ಸ್ಪೆಕ್ಟರ್​ ಸುಬೋಧ್‌ ಕುಮಾರ್ ಸಿಂಗ್‌ ಅವರಿಗೆ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕನೇ ಗುಂಡು ಹಾರಿಸಿರಬಹುದಾ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಬುಲಂದರ್​ಶಹರ್​ನಲ್ಲಿ ಪೊಲೀಸ್​ ಅಧಿಕಾರಿಯನ್ನು ಹತ್ಯೆ ಮಾಡಿದ್ದ ಗುಂಪಿನ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಹೇಳಲಾಗಿತ್ತು. ಹೀಗಾಗಿ, ಈ ಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದು ದೇಶದೆಲ್ಲೆಡೆ ಸಾಕಷ್ಟು ಚರ್ಚೆಯೂ ಆಗಿತ್ತು. ಆದರೆ, ಇದೀಗ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದ್ದು, ಇದರ ಹಿಂದೆ ಸೈನಿಕರ ಕೈವಾಡವಿದೆ ಎನ್ನಲಾಗಿದೆ.

ಗುಂಡು ಹಾರಿಸಿದ್ದು ಸೈನಿಕನಾ?:

ಹೌದು, ಘಟನೆ ನಡೆದ ಸ್ಥಳದಲ್ಲಿದ್ದ ಆ ಊರಿನ ಸೈನಿಕ ಜಿತು ಫೌಜಿ ಮೇಲೆ ಇದೀಗ ಪೊಲೀಸರಿಗೆ ಅನುಮಾನ ಶುರುವಾಗಿದೆ. ಅದಕ್ಕೆ ಪೂರಕವಾಗಿ ಕೆಲ ಸಾಕ್ಷಿಗಳು ಕೂಡ ದೊರೆತಿವೆ.  ಮೀರತ್ ವಲಯದ ಐಜಿ ರಾಮ್​ ಕುಮಾರ್​ ಹೇಳುವ ಪ್ರಕಾರ, ಡಿ. 3ರಂದು ಪೊಲೀಸ್​ ಅಧಿಕಾರಿಯ ಹತ್ಯೆಯಾದ ನಂತರ ಆ ಹಳ್ಳಿಯ ಕೆಲವರು ಹೇಳಿಕೆಗಳನ್ನು ನೀಡಿದ್ದಾರೆ. ಆ ಹೇಳಿಕೆಗಳೇ ನಮಗೆ ಇರುವ ದೊಡ್ಡ ಸಾಕ್ಷಿ.

ಆ ಊರಿನ ಸ್ಥಳೀಯ ಹಾಗೂ ಶ್ರೀನಗರದಲ್ಲಿ ಸೈನಿಕನಾಗಿ ಇತ್ತೀಚೆಗೆ ನೇಮಕಗೊಂಡಿದ್ದ ಜಿತು ಫೌಜಿ ಪೊಲೀಸ್​ ಅಧಿಕಾರಿಯ ಮೇಲೆ ಗುಂಡು ಹಾರಿಸಿರಬಹುದು ಎಂಬ ಅನುಮಾನ ದಟ್ಟವಾಗುತ್ತಿದೆ. ಆದರೆ, ತನಿಖೆಯ ಬಳಿಕವಷ್ಟೇ ಸಿಂಗ್​ ದೇಹವನ್ನು ಹೊಕ್ಕಿರುವ ಗುಂಡು ಜಿತು ಹಾರಿಸಿದ್ದಾ ಅಥವಾ ಬೇರೆಯವರದ್ದಾ ಎಂಬುದು ತಿಳಿಯಬೇಕಿದೆ. ಹೀಗಾಗಿ, ತನಿಖಾ ತಂಡ ಜಮ್ಮು ಕಾಶ್ಮೀರದತ್ತ ಹೊರಟಿದೆ.

ಇದನ್ನೂ ಓದಿ: ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಆಸ್ಪತ್ರೆಗೆ ರವಾನೆ
Loading...

ಸುಬೋಧ್​ ಸಿಂಗ್​ ಹತ್ಯೆ ನಡೆದ ದಿನ ಜಿತು ಫೌಜಿ ಊರಿನಲ್ಲೇ ಇದ್ದ ಎಂದು ಆತನ ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ಆದರೆ, ಈ ಘಟನೆಯಾದ ನಂತರ ಅದೇ ದಿನ ಆತ ಕಾರ್ಗಿಲ್​ಗೆ ಹೊರಟುಹೋಗಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ ಒಂದು ವಿಡಿಯೋ ಕೂಡ ಸಿಕ್ಕಿದ್ದು, ಅದರಲ್ಲಿ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಮತ್ತು ಜೀತು ಫೌಜಿ ರೀತಿಯಲ್ಲೇ ಕಾಣುವ ವ್ಯಕ್ತಿಯೋರ್ವ ಇರುವುದು ಕಾಣುತ್ತಿದೆ. ಹೀಗಾಗಿ, ಅನುಮಾನದ ಆಧಾರದಲ್ಲಿ ತನಿಖೆ ನಡೆಸಲು ಎಸ್​ಐಟಿ ತಂಡ ಜಮ್ಮು ಕಾಶ್ಮೀರಕ್ಕೆ ತೆರಳಿದೆ.

ಇದನ್ನೂ ಓದಿ: ಹಿಂದುತ್ವದ ಕಡೆ ಮತ್ತೆ ವಾಲಿರುವ ಬಿಜೆಪಿಗೆ ಐದು ರಾಜ್ಯಗಳ ಚುನಾವಣೆಯಲ್ಲಿ ಸ್ಟಾರ್​ ಪ್ರಚಾರಕರಾಗಿದ್ದು ಆದಿತ್ಯನಾಥ್​

ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ;

ಸದ್ಯಕ್ಕೆ ಉತ್ತರ ಪ್ರದೇಶದಲ್ಲಿ ಕೂಡ ಬುಲಂದ್​ಶಹರ್​ ಹತ್ಯೆಯ ವಿಚಾರಣೆಯನ್ನು ಎಸ್​ಐಟಿಗೆ ವಹಿಸಲಾಗಿದೆ. ತನಿಖೆಯನ್ನು ಈಗಾಗಲೇ ಕೈಗೆತ್ತಿಕೊಂಡಿರುವ ಎಡಿಜಿಪಿ ಈ ಪ್ರಕರಣದ ವರದಿಯನ್ನು ಉನ್ನತಾಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.

ಅಪರಾಧ ವಿಭಾಗದ ಐಜಿ ಎಸ್​. ಭಗತ್ ಈ  ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದು, ಮೀರತ್​ನ ಐಜಿ ನೇತೃತ್ವದ 4 ಜನರ ಎಸ್​ಐಟಿ ತಂಡ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ವಿಚಾರಣೆಯ ವೇಳೆ ತಮಗೆ ಸಿಕ್ಕಿರುವ ಎಲ್ಲ ವಿಡಿಯೋ ದೃಶ್ಯಾವಳಿಗಳನ್ನು ಗಮನವಿಟ್ಟು ಪರಿಶೀಲಿಸಲಾಗುತ್ತಿದೆ. ಆ ದಿನ ಅಲ್ಲಿಯ ಸುತ್ತಮುತ್ತಲಿನ ವಿಡಿಯೋ ದೃಶ್ಯಾವಳಿಗಳನ್ನು ಪರೀಕ್ಷಿಸಿದರೆ ಏನಾದರೂ ಸುಳಿವು ಸಿಗುವ ಸಾಧ್ಯತೆಯಿದೆ. ಆ ಮೂಲಕ ಈ ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಈಗಲೇ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ:

ಸುಬೋಧ್​ ಸಿಂಗ್​ ಹತ್ಯೆ ಪ್ರಕರಣದಲ್ಲಿ ಆರೋಪಿಯೆಂದು ಹೇಳಲಾಗುತ್ತಿರುವ ಬಜರಂಗದಳದ ಕಾರ್ಯಕರ್ತ ಯೋಗೇಶ್​ ರಾಜ್​ಗೂ ಈ ಪ್ರಕರಣಕ್ಕೂ ಸಂಬಂಧವಿರುವುದು ನಿಜವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಎಸ್​. ಭಗತ್, ಆತನ ಹೆಸರನ್ನು ಎಫ್​ಐಆರ್​ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಆದರೆ, ಆತನೇ ಪ್ರಮುಖ ಆರೋಪಿಯಾ ಅಥವಾ ಅದರ ಹಿಂದೆ ಬೇರೆಯವರಿದ್ದಾರಾ ಎಂದು ಈಗಲೇ ಹೇಳುವುದು ಸಾಧ್ಯವಿಲ್ಲ. ಎಸ್​ಐಟಿ ತನಿಖೆ ನಡೆಸಿದ ನಂತರವಷ್ಟೇ ಈ ಬಗ್ಗೆ ತೀರ್ಮಾನಕ್ಕೆ ಬರಲು ಸಾಧ್ಯ ಎಂದಿದ್ದಾರೆ.

ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸುಬೋಧ್​ ಕುಮಾರ್ ಸಿಂಗ್​ ಮತ್ತು ಇನ್ನೋರ್ವ ಯುವಕ ಸುಮಿತ್​ ಅವರನ್ನು 32 ಬೋರ್​ ಬುಲೆಟ್​ನಿಂದ ಹತ್ಯೆ ಮಾಡಲಾಗಿದೆ. ಆ ರಿವಾಲ್ವರ್​ ಬಳಕೆ ಮಾಡಿದ್ದು ಯಾರು ಎಂಬುದು ವರದಿ ಕೈಸೇರಿದ ನಂತರ ತಿಳಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾಲ್ವರ ಬಂಧನ:

ಅಕ್ರಮ ಕಸಾಯಿಖಾನೆಗಳನ್ನು ವಿರೋಧಿಸಿ ಮಹಾವ್​ನ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿತ್ತು. ಜನರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಪೊಲೀಸ್​ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಈ ಗಲಾಟೆಯಲ್ಲಿ ಠಾಣೆಯ ಪೊಲೀಸ್ ಅಧಿಕಾರಿ ಸುಬೋಧ್​ ಸಿಂಗ್​ ಅವರಿಗೆ ಗುಂಡೇಟು ಬಿದ್ದು ಸಾವನ್ನಪ್ಪಿದ್ದರು. ಆದರೆ, ಆ ಗುಂಪಿನಲ್ಲಿ ಗುಂಡು ಹಾರಿಸಿ ಕೊಂದವರು ಯಾರೆಂಬುದು ಕಗ್ಗಂಟಾಗಿತ್ತು. ಈ ಸಂಬಂಧ ಬುಲಂದ್​ಶಹರ್​ ಪೊಲೀಸ್​ ಠಾಣೆಯಲ್ಲಿ ಗ್ರಾಮದ 28 ಜನರ ಮತ್ತು 60 ಅಪರಿಚಿತರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿತ್ತು. ಆ ಪಟ್ಟಿಯಲ್ಲಿದ್ದ 8 ಮಂದಿ ವಿಎಚ್​ಪಿ, ಬಜರಂಗದಳ, ಬಿಜೆಪಿ ಯುವ ಘಟಕದಂತಹ ಬಲಪಂಥೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಪ್ರಕರಣ ರಾಜಕೀಯ ತಿರುವು ಕೂಡ ಪಡೆದಿತ್ತು.  ಉತ್ತರ ಪ್ರದೇಶ ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626