Dowry Harassment: ವರದಕ್ಷಿಣೆಗಾಗಿ ಹೆಂಡತಿಯ ಕೈಬೆರಳು ಕತ್ತರಿಸಿದ ಆರ್ಮಿ ಮೇಜರ್!

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಕ್ಷಿಣೆ ಬೇಡಿಕೆಗೆ ಆರ್ಮಿ ಮೇಜರ್ ತನ್ನ ಪತ್ನಿಯ ಬೆರಳನ್ನು ಕತ್ತರಿಸಿದ ಆರೋಪ ಕೇಳಿಬಂದಿದೆ. ಆರೋಪಿ ಮೇಜರ್ ಮೀರತ್‌ನ 510 ಆರ್ಮಿ ಬೇಸ್‌ನಲ್ಲಿ ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್‌ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೀರತ್(ಜೂ.10): ಬಹಳಷ್ಟು ವರದಕ್ಷಿಣೆ (Dowry) ಕಿರುಕುಳದ (Harassment) ಸಮಸ್ಯೆಗಳ (Problems) ಬಗ್ಗೆ ನಾವು ಕೇಳುತ್ತಲೇ ಇದ್ದೇವೆ. ದೇಶವನ್ನೇ ಬೆಚ್ಚಿಬೀಳಿಸಿದ ವಿಸ್ಮಯಾ ಘಟನೆ (Vismaya Case) ಸೇರಿದಂತೆ ದಿನ ನಿತ್ಯ ವರದಕ್ಷಿಣೆ ಕಿರುಕುಳದಿಂದ ಹೆಣ್ಮಕ್ಕಳು ಜೀವ ಕೊನೆಗಾಣಿಸುವ ಘಟನೆಗಳು ವರದಿಯಾಗುತ್ತಲೇ ಇವೆ. ಇದರ ಮಧ್ಯೆಯೇ ಈಗ ಆರ್ಮಿ ಮೇಜರ್ ವರದಕ್ಷಿಣೆಗಾಗಿ ಹೆಂಡತಿಯ ಬೆರಳನ್ನೇ (Finger) ಕತ್ತರಿಸಿರುವ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಆರ್ಮಿ ಅಧಿಕಾರಿಯಾಗಿ ಈ ರೀತಿ ಹೆಂಡತಿಗೆ ಕಿರುಕುಳ ನೀಡಿರುವ  ಘಟನೆ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಮೇಜರ್ ಪತ್ನಿಯ ತಂದೆ ಅಳಿಯನ (Son-In-Law) ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಕ್ಷಿಣೆ ಬೇಡಿಕೆಗೆ ಆರ್ಮಿ ಮೇಜರ್ ತನ್ನ ಪತ್ನಿಯ ಬೆರಳನ್ನು ಕತ್ತರಿಸಿದ ಆರೋಪ ಕೇಳಿಬಂದಿದೆ. ಆರೋಪಿ ಮೇಜರ್ ಮೀರತ್‌ನ 510 ಆರ್ಮಿ ಬೇಸ್‌ನಲ್ಲಿ ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್‌ ವಿಭಾಗದಲ್ಲಿ ನಿಯೋಜಿಸಲ್ಪಟ್ಟಿದ್ದಾರೆ.

30 ರ ಹರೆಯದ ಸೇನಾ ಮೇಜರ್ ಅವರ ಪತ್ನಿ ಬೆರಳಿನ ಗಾಯದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪತಿ 2014 ರಲ್ಲಿ ಮದುವೆಯಾದಾಗಿನಿಂದ ವರದಕ್ಷಿಣೆಗಾಗಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ದಂಪತಿಗೆ ಐದು ವರ್ಷದ ಮಗನಿದ್ದಾನೆ ಎಂದು ವರದಿಯಾಗಿದೆ.

ಮೀಜರ್ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್

ಆರೋಪಿಗಳ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳದ ಆರೋಪಗಳನ್ನು ದಾಖಲಿಸಲು ಆದೇಶ ಹೊರಡಿಸಲಾಗಿದೆ ಎಂದು ಮೀರತ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಚಂದ್ರಕಾಂತ್ ಮೀನಾ ತಿಳಿಸಿದ್ದಾರೆ.
ಮೀರತ್‌ನ ಸದರ್ ಬಜಾರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ, ಡಿಎಸ್ ರಾವತ್ ಅವರು ಸೇನಾ ಅಧಿಕಾರಿಯ ಪತ್ನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆದರೆ, ಆರೋಪಿಯ ವಿರುದ್ಧ ದಾಖಲಾಗಿರುವ ಐಪಿಸಿ ಸೆಕ್ಷನ್‌ಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

ಎಂಟು ವರ್ಷಗಳಿಂದ ಸತತ ಕಿರುಕುಳ

ಕಳೆದ ಎಂಟು ವರ್ಷಗಳಿಂದ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದೇನೆ ಎಂದು ಸೇನಾ ಮುಖ್ಯಸ್ಥ ಪತ್ನಿ ಆರೋಪಿಸಿದ್ದಾರೆ. “ನನ್ನ ಪೋಷಕರು ಅವನ ಎಲ್ಲಾ ವರದಕ್ಷಿಣೆ ಬೇಡಿಕೆಗಳನ್ನು ಪೂರೈಸಿದರೂ, ಅವನು ನನ್ನನ್ನು ನಿಂದಿಸುತ್ತಿದ್ದನು. ಈ ವೇಳೆ ಅವರು ಕೋಪೋದ್ರಿಕ್ತರಾಗಿ ನನ್ನ ಬೆರಳನ್ನು ಕತ್ತರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನೂ ಓದಿ: Liv-In Partner: ಗರ್ಭಿಣಿ ಪ್ರೇಯಸಿಯ ಆರೈಕೆಗೆ ಖೈದಿಗೆ 3 ವಾರಗಳ ಬೇಲ್ ನೀಡಿದ ಕೋರ್ಟ್

ವಿಡಿಯೋ ವೈರಲ್

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಂತ್ರಸ್ತ ಮಹಿಳೆ ಆಸ್ಪತ್ರೆಯಲ್ಲಿ ಜನರೊಂದಿಗೆ ತನಗಾದ ಕಷ್ಟವನ್ನು ಹಂಚಿಕೊಳ್ಳುವ ವೀಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು ಅದೀಗ ವೈರಲ್ ಆಗಿದೆ.

ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆಯ ತಂದೆ

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಮಹಿಳೆಯ ತಂದೆ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಭಾರತದ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: Meghalaya Rains: ಮೇಘಾಲಯದಲ್ಲಿ ವಿಪರೀತ ಮಳೆ, ಕೊಚ್ಚಿ ಹೋದ ಸೇತುವೆ

ಈ ವಿಚಾರದಲ್ಲಿ ಪ್ರಕರಣ ದಾಖಲಿಸದಂತೆ ಪೊಲೀಸರು ಆರಂಭದಲ್ಲಿ ಸಲಹೆ ನೀಡಿದ್ದರು ಎಂದು ಭಾರತೀಯ ನೌಕಾಪಡೆಯ ನಿವೃತ್ತ ಸಿಬ್ಬಂದಿ ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಿಸುವ ಬದಲು, ಆರೋಪಿಗಳೊಂದಿಗೆ ರಾಜಿ ಮಾಡಿಕೊಳ್ಳಲು ಪೊಲೀಸರು ನಮ್ಮ ಮನವೊಲಿಸಿದರು ಎಂದು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಹೇಳಿದ್ದಾರೆ.

ಆದರೂ= ಹಲವಾರು ಪ್ರಯತ್ನಗಳ ಹೊರತಾಗಿಯೂ ಆರೋಪಿ ಸೇನಾ ಮೇಜರ್ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಐಎಎನ್ಎಸ್ ವರದಿ ಮಾಡಿದೆ.
Published by:Divya D
First published: