Army:15 ವರ್ಷಗಳ ಬಳಿಕ ಹಳೆ ರೂಟ್‍ಗಳನ್ನ ಆ್ಯಕ್ಟಿವ್ ಮಾಡ್ತಿರೋ ಉಗ್ರರು; ಭಾರತೀಯ ಸೇನೆಯಿಂದ ತಿರುಗೇಟು

ಗುಪ್ತಚರ ಮಾಹಿತಿಗಳ ಪ್ರಕಾರ, ಪಾಕಿಸ್ತಾನ (Pakistan) ಒಳನಸಳುವಿಕೆಯ ಹಳೆ ಮಾರ್ಗಗಳನ್ನು ಆ್ಯಕ್ಟಿವ್ ಮಾಡಲು ತಯಾರಿ ನಡೆಸಿದೆ ಎನ್ನಲಾಗಿದೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ನವದೆಹಲಿ (ಸೆ. 24): ಪಾಕಿಸ್ತಾನದಿಂದ ಕಾಶ್ಮೀರದೊಳಗೆ ನುಸಳಲು ಪ್ರಯತ್ನಿಸಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರಳಿಸಿದೆ. ಈ ಘಟನೆ ರಾಮಪುರ ಸೆಕ್ಟರ್ ಬಳಿಯ ರಸ್ಟಮ್ ಬಟಾಲಿಯನ್ ವ್ಯಾಪ್ತಿಯ ಹಥ್ಲಂಗ್ ಅರಣ್ಯ ಪ್ರದೇಶದ ಸಮೀಪ ನಡೆದಿದೆ. ಉಗ್ರರನ್ನು ಹೊಡೆದುರಳಿಸಿರುವ ಭಾರತೀಯ ಸೈನಿಕರು (Indian Army) ಅವರ ಬಳಿಯಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು (5 ಎಕೆ-47, 8 ಪಿಸ್ತೂಲ್, 70 ಹ್ಯಾಂಡ್ ಗ್ರೈನೆಡ್) ವಶಕ್ಕೆ ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಎಲ್‍ಓಸಿ (LOC) ವ್ಯಾಪ್ತಿಯಲ್ಲಿ ಉಗ್ರರ ನುಸುಳುವಿಕೆ ನಡೆಯುತ್ತಿತ್ತು. ಆದ್ರೆ 15 ವರ್ಷಗಳ ಬಳಿಕ ಉಗ್ರರ ಹಳೆ ಮಾರ್ಗದ ಮೂಲಕ ಕಾಶ್ಮೀರ (Kashmir) ಪ್ರವೇಶಿಸಲು ಮುಂದಾಗಿದ್ದಾರೆ.

    ಮೂಲಗಳ ಪ್ರಕಾರ 2005ರ ಎಲ್‍ಓಸಿ ಯಲ್ಲಿ ನಡೆದ ಫೆನ್ಸಿಂಗ್ (LOC Fencing) ಬಳಿಕ ರಸ್ಟಮ್ ಬಟಾಲಿಯನ್ ವ್ಯಾಪ್ತಿಯಲ್ಲಿ ಯಾವುದೇ ಒಳನುಸುಳವಿಕೆ ಪ್ರಕರಣಗಳು ವರದಿಯಾಗಿರಲಿಲ್ಲ. ಈ ಇಲಾಖೆಯಲ್ಲಿ ನಿಯೋಜಿತ ಸೈನಿಕರು ತುಂಬಾ ಸರಳವಾಗಿ ಉಗ್ರರ ಚಲನವಲನಗಳನ್ನು ಮಾನಿಟರ್ ಮಾಡುತ್ತಾರೆ.

    ಒಂದೂವರೆ ದಶಕಗಳ ಬಳಿಕ ಆಯ್ಕೆ ಮಾಡಿದ್ದೇಕೆ ಈ ಮಾರ್ಗ?:
    ಸುಮಾರು ಒಂದೂವರೆ ದಶಕಗಳ ಬಳಿಕ ಭಯೋತ್ಪಾದಕರು ಈ ಮಾರ್ಗ ಬಳಕೆ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ. ಉಗ್ರ ಚಟುವಟಿಕೆಗಳ ನಡೆಯದ ಸ್ಥಳದಲ್ಲಿ ಭಾರತೀಯ ಸೇನೆ ಹೆಚ್ಚು ಸಕ್ರಿಯವಾಗಿರಲ್ಲ ಎಂದು ಪ್ಲಾನ್ ಮಾಡಿಕೊಂಡ ಭಯೋತ್ಪಾದಕರು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಗಳ ಬಗ್ಗೆ ವರದಿಯಾಗಿದೆ. ಆದ್ರೆ ಉಗ್ರರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿರುವ ಭಾರತೀಯ ಸೈನಿಕರು ಅವರನ್ನ ನೇರವಾಗಿಯೇ ನರಕಕ್ಕೆ ರವಾನೆ ಮಾಡಿದ್ದಾರೆ.

    ಇದನ್ನು ಓದಿ: Lok Sabha Recruitment 2021: ತಿಂಗಳಿಗೆ 65 ಸಾವಿರ ಸಂಬಳ; ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ

    ಗುಪ್ತಚರ ಮಾಹಿತಿಗಳ ಪ್ರಕಾರ, ಪಾಕಿಸ್ತಾನ (Pakistan) ಒಳನಸಳುವಿಕೆಯ ಹಳೆ ಮಾರ್ಗಗಳನ್ನು ಆ್ಯಕ್ಟಿವ್ ಮಾಡಲು ತಯಾರಿ ನಡೆಸಿದೆ ಎನ್ನಲಾಗಿದೆ. ಈಗಾಗಲೇ ಹಳೆ ಮಾರ್ಗಗಳ ಕುರಿತು ಕಾಶ್ಮೀರಿ ಗೈಡ್ ಗಳು ಮತ್ತು ಸ್ಥಳೀಯ ಜನರ ಜೊತೆ ಬೈಠಕ್ ಸಹ ನಡೆಸುತ್ತಿದೆ ಎನ್ನಲಾಗಿದೆ. ಈ ಬೈಠಕ್ ನಲ್ಲಿ ಹಳೆ ಮತ್ತು ಹೊಸ ಮಾರ್ಗಗಳ ಕುರಿತು ಚರ್ಚೆ ನಡೆದಿದೆ ಎಂಬುದರ ಕುರಿತು ವರದಿಯಾಗಿದೆ. ಭಾರತೀಯ ಸೇನೆಯ ಕಣ್ತಪ್ಪಿಸಿ ಕಾಶ್ಮೀರದ ಜನ ವಸತಿ ಪ್ರದೇಶ ತಲುಪವುದು ಉಗ್ರರ ಪ್ಲಾನ್ ಎನ್ನಲಾಗುತ್ತಿದೆ.

    ಇದನ್ನು ಓದಿ: ಸಿವಿಲ್​ ಸರ್ವಿಸ್​ ಫಲಿತಾಂಶ ಪ್ರಕಟ; ಐಐಟಿ ಬಾಂಬೆ ವಿದ್ಯಾರ್ಥಿ ಶುಭಂ ಟಾಪರ್​​; ರಾಜ್ಯದ ಅಕ್ಷಯ್​ ಗೆ 72ನೇ ಸ್ಥಾನ

    ಮೊದಲಿನಿಂದಲೂ ಉಗ್ರರ ಪ್ರಯತ್ನ:
    ಕೆಲ ವರ್ಷಗಳ ಒಳನುಸಳುವಿಕೆ ಅಂಕಿ-ಅಂಶಗಳನ್ನು ಗಮನಿಸಿದ್ರೆ 2018ರಲ್ಲಿ ಎಲ್‍ಓಸಿ ವ್ಯಾಪ್ತಿಯಲ್ಲಿಯೇ 66 ಬಾರಿ ಪ್ರಯತ್ನ ನಡೆಸಿದ್ದರು. ಒಟ್ಟು 328 ಉಗ್ರರು ಒಳನುಸಳಲು ಪ್ರಯತ್ನಿಸಿದ್ದರು. ಇದರಲ್ಲಿ 32 ಜನರನ್ನು ಹೊಡೆದರುಳಿಸಿದ್ರೆ, ಸುಮಾರು 150 ಉಗ್ರರು ಓಡಿ ಹೋಗಿದ್ದಾರೆ. ಸುಮಾರು 140 ಉಗ್ರರು ದೇಶದೊಳಗೆ ಪ್ರವೇಶಿಸಿದ್ದರು. ಇನ್ನೂ 2019ರಲ್ಲಿ ಸೇನೆ 40 ಬಾರಿ ಉಗ್ರರು ನುಸಳಲು ಪ್ರಯತ್ನಿಸಿರುವ ಬಗ್ಗೆ ದಾಖಲೆಯಾಗಿದೆ. 219 ಭಯೋತ್ಪಾದಕರು ಭಾರತ ಪ್ರವೇಶಿಸಲು ಮುಂದಾಗಿದ್ದರೆ, ಸೇನೆ ನಾಲ್ವರನ್ನು ಎಲ್‍ಓಸಿ ಬಳಿ ಹೊಡೆದರುಳಿಸಿತ್ತು.

    ಪಾಕಿಸ್ತಾನದ ಬುದ್ಧಿ ಇನ್ನೂ ಬದಲಾಗಿಲ್ಲ:
    ರಾಮಪುರ ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೋರ್ ಕಮಾಂಡರ್, ಜಗತ್ತಿನ ಮುಂದೆ ಪಾಕ್ ಒಳ್ಳೆತನ ಪ್ರದರ್ಶಿಸುವ ನಾಟಕ ಮಾಡುತ್ತಿದೆ. ಆದ್ರೆ ಅಸಲಿ ಮುಖವೇ ಬೇರೆ. ತನ್ನ ಕೆಟ್ಟ ಬುದ್ಧಿಯನ್ನು ಪಾಕಿಸ್ತಾನ ಬಿಟ್ಟಿಲ್ಲ. ಗಡಿ ಪ್ರವೇಶಿಸಿದ್ದ ಉಗ್ರರನ್ನ ಪ್ರತ್ಯೇಕ ಸ್ಥಳಗಳಲ್ಲಿ ಸೇನೆ ಹೊಡೆದುರಿಳಿಸಿದೆ ಎಂದು ಹೇಳಿದ್ದಾರೆ.

    (ಮಹ್ಮದ್ ರಫೀಕ್ ಕೆ)
    Published by:Seema R
    First published: