ಭಾರತೀಯ ಯೋಧ ಔರಂಗಜೇಬರಿಗೆ ಮಾನಸಿಕ ಕಿರುಕುಳ: ಬಹಿರಂಗವಾಯ್ತು ಸೈನಿಕನ ಕೊನೆಯ ಕ್ಷಣದ ವಿಡಿಯೋ


Updated:June 16, 2018, 3:47 PM IST
ಭಾರತೀಯ ಯೋಧ ಔರಂಗಜೇಬರಿಗೆ ಮಾನಸಿಕ ಕಿರುಕುಳ: ಬಹಿರಂಗವಾಯ್ತು ಸೈನಿಕನ ಕೊನೆಯ ಕ್ಷಣದ ವಿಡಿಯೋ

Updated: June 16, 2018, 3:47 PM IST
ನ್ಯೂಸ್ 18 ಕನ್ನಡ

ಜಮ್ಮು ಕಾಶ್ಮೀರ(ಜೂ.16): ರಂಜಾನ್​ನ ಪವಿತ್ರ ತಿಂಗಳಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಔರಂಗಜೇಬ ಎಂಬವರನ್ನು ಉಗ್ರರು ಅಪಹರಣ ಮಾಡಿ ಹತ್ಯೆ ಮಾಡಿದ್ದಾರೆ. ಇದೀಗ ಔರಂಗಬೇಬ ಕೊನೆಯ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಅವರನ್ನು ಹತ್ಯೆಗೈಯ್ಯುವುದಕ್ಕೂ ಮುನ್ನ ಈ ವಿಡಿಯೋ ರೆಕಾರ್ಡ್​ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಶುಕ್ರವಾರದಿಂದ ಈ ವಿಡಿಯೋ ಸಾಮಾಜಿಕ ಜಾಲಾತಾಣಗಲಲ್ಲಿ ಹರಿದಾಡುತ್ತಿದೆ.

ಹತ್ಯೆ ಮಾಡುವುದಕ್ಕೂ ಮೊದಲು ಯೋಧನಿಗೆ ಮಾನಸಿಕ ಕಿರುಕುಳ ನೀಡಿರುವುದು ಸಾಮಾನ್ಯವಾಗಿದೆ. ಔರಂಗಜೇಬ ಅವರು ಧರಿಸಿದ್ದ ಬಟ್ಟೆಗಳಿಗೆ ಮಣ್ಣು ತಾಗಿದ್ದು, ಇದರಿಂದ ಅವರನ್ನು ಹತ್ಯೆಗೈಯ್ಯುವುದಕ್ಕೂ ಮೊದಲು ಥಳಿಸಿರುವುದು ಸ್ಪಷ್ಟವಾಗುತ್ತದೆ.


ಇನ್ನು ಯೋಧ ಔರಂಗಜೇಬ ಗುರುವಾರ ಮಧ್ಯಾಹ್ನ ಈದ್​ ಹಬ್ಬದ ಆಚರಣೆಗಾಗಿ ರಜೆ ಪಡೆದು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉಗ್ರರು ಅವರನ್ನು ಅಪಹರಿಸಿದ್ದರು. ಇದಾದ ಬಳಿಕ ರಾತ್ರಿ ಅವರನ್ನು ಗುಂಡಿಟ್ಟು ಹತ್ಯೆಗೈದಿದ್ದು, ಪುಲ್ವಾನಾ ಜಿಲ್ಲೆಯ ಗುಸ್ಸೂ ಇಲಾಖೆಯಲ್ಲಿ ರಕ್ತ ಸಿಕ್ತವಾದ ದೇಹ ಪತ್ತೆಯಾಗಿತ್ತು.
First published:June 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...