Bipin Rawat Helicopter Crash: ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಜನರಿದ್ದ ಹೆಲಿಕಾಪ್ಟರ್ ಪತನ, ಅಷ್ಟೂ ಜನರ ದಾರುಣ ಸಾವು

ಸೇನಾಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ (CDS Bipin rawat) ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ (Army Helicopter) ತಮಿಳುನಾಡಿನ ಕೂನೂರಿನಲ್ಲಿ ಇಂದು ಪತನಗೊಂಡಿದೆ, ಸೇನಾ ಹೆಲಿಕಾಪ್ಟರ್ ಪತನದ ಬಳಿಕ ಬೆಂಕಿಗಾಹುತಿಯಾಗಿದ್ದು, ನಾಲ್ಕು ಶವಗಳನ್ನು ಹೊರ ತೆಗೆಯಲಾಗಿದೆ.

ಜ ಬಿಪಿನ್ ರಾವತ್

ಜ ಬಿಪಿನ್ ರಾವತ್

  • Share this:
ಸೇನಾಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್ (CDS Bipin rawat) ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ (Army Helicopter) ತಮಿಳುನಾಡಿನ ಕೂನೂರಿನಲ್ಲಿ ಇಂದು ಪತನಗೊಂಡಿತ್ತು. ಸೇನಾ ಹೆಲಿಕಾಪ್ಟರ್ ಪತನದ ಬಳಿಕ ಬೆಂಕಿಗಾಹುತಿಯಾಗಿದ್ದು, ನಾಲ್ಕು ಶವಗಳನ್ನು ಆರಂಭದಲ್ಲಿ ಹೊರ ತೆಗೆಯಲಾಗಿತ್ತು. ಸೇನಾಧಿಕಾರಿಗಳ ಜೊತೆಯಲ್ಲಿ ಅವರ ಕುಟುಂಬಸ್ಥರು ಮತ್ತು ಕೆಲ ಅಧಿಕಾರಿಗಳು ಇದ್ದರು.  ಜನರಲ್ ರಾವತ್ ಹೊರತುಪಡಿಸಿ ಉಳಿದೆಲ್ಲರೂ ಅಸುನೀಗಿದ್ದ ವಿಚಾರವನ್ನು ಇಂಡಿಯನ್ ಏರ್ ಫೋರ್ಸ್ ಅಧಿಕೃತವಾಗಿ ಪ್ರಕಟಿಸಿತ್ತು. ಕೆಲ ಸಮಯದವರಗೆ ಜೀವನ್ಮರಣದ ಹೋರಾಟ ನಡೆಸಿ ಜನರಲ್ ರಾವತ್ ಕೂಡಾ ಕೊನೆಯುಸಿರೆಳೆದಿದ್ದಾರೆ.

ಪ್ರತಿಕೂಲ ಹವಾಮಾನದಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಹೆಲಿಕಾಪ್ಟರ್‌ನಲ್ಲಿ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಬಿಪಿನ್ ರಾವತ್ ಮತ್ತು ಅವರ ಪತ್ನಿ, ಅವರ ರಕ್ಷಣಾ ಸಿಬ್ಬಂದಿ, ಇದರಲ್ಲಿ ಬ್ರಿಗೇಡಿಯರ್, ಲೆಫ್ಟಿನೆಂಟ್ ಜನರಲ್ ಇದ್ದರು. ರಕ್ಷಿಸಲ್ಪಟ್ಟ ಜನರನ್ನು ಚಿಕಿತ್ಸೆಗಾಗಿ ವೆಲ್ಲಿಂಗ್ಟನ್ ಬೇಸ್‌ಗೆ ಕರೆತರಲಾಗಿತ್ತು. ದುರದೃಷ್ಟವಶಾತ್ 14 ಮಂದಿಯಲ್ಲಿ 1 3 ಜನ ಪ್ರಾಣ ಬಿಟ್ಟಿದ್ದಾರೆ.

Army helicopter crash in Coonoor Tamil Nadu (1)
ಸೇನಾ ವಿಮಾನ ಪತನ


ಪ್ರಾಥಮಿಕ ಮಾಹಿತಿಯ ಪ್ರಕಾರ, ಸಿಡಿಎಸ್ ಬಿಪಿನ್ ರಾವತ್ ಅವರು ತಮ್ಮ ಪತ್ನಿಯೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ವೆಲ್ಲಿಂಗ್ಟನ್‌ಗೆ ತೆರಳಿದ್ದರು. ವೆಲ್ಲಿಂಗ್ಟನ್‌ನಲ್ಲಿ ಸಶಸ್ತ್ರ ಪಡೆಗಳ ಕಾಲೇಜ್ ಇದೆ. ಸಿಡಿಎಸ್ ರಾವತ್ ಇಲ್ಲಿ ಉಪನ್ಯಾಸ ನೀಡಿದರು. ಅವರು ಇಲ್ಲಿಂದ ಕುನ್ನೂರಿಗೆ ಹಿಂತಿರುಗುತ್ತಿದ್ದರು. ಇಲ್ಲಿಂದ ದೆಹಲಿಗೆ ಹೊರಡಬೇಕಿತ್ತು. ಆದರೆ ದಟ್ಟ ಅರಣ್ಯದಲ್ಲಿ ಈ ಅವಘಡ ಸಂಭವಿಸಿದೆ.

ಹೆಲಿಕಾಪ್ಟರ್‌ನಲ್ಲಿದ್ದವರು

ಬಿಪಿನ್ ರಾವತ್, ಶ್ರೀಮತಿ ಮಧುಲಿಕಾ ರಾವತ್ , ಎಲ್ ಎಸ್ ಲಿಡರ್  ಹರ್ಜಿಂದರ್ ಸಿಂಗ್ , ಗುರ್ ಸೇವಕ್ ಸಿಂಗ್ , ಜೀತೇಂದ್ರ ಕುಮಾರ್ , ವಿವೇಕ್ ಕುಮಾರ್, ಬಿ.ಸಾಯಿ ತೇಜ, ಸತ್ಪಾಲ್ ಇವರೆಲ್ಲಾ ಆ ನತದೃಷ್ಟ ಹೆಲಿಕಾಪ್ಟರ್ ನಲ್ಲಿ  ಪ್ರಯಾಣಿಸುತ್ತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Army helicopter crash in Coonoor Tamil Nadu (4)
ಸೇನಾ ವಿಮಾನ ಪತನ


ಹೆಲಿಕಾಪ್ಟರನ ಪತನಗೊಂಡ ಪ್ರದೇಶವು ತುಂಬಾ ದಟ್ಟವಾಗಿದ್ದು, ಸುತ್ತಲೂ ಮರಗಳಿವೆ. ಫೋಟೋಗಳಲ್ಲಿ ಹೆಲಿಕಾಪ್ಟರ್ ಅವಶೇಷಗಳು ಬೆಂಕಿಯಲ್ಲಿ ಉರಿಯುತ್ತಿರೋದನ್ನು ಕಾಣಬಹುದಾಗಿದೆ. ಮರದ ಮೇಲೆ ಹೆಲಿಕಾಪ್ಟರ್ ಬಿದ್ದ ಪರಿಣಾಮ, ರಂಬೆ ಕೊಂಬೆಗಳಿಗೂ ಬೆಂಕಿ ತಗುಲಿದೆ. ಸೇನೆ ಮತ್ತು ವಾಯುಪಡೆಯ ಪಡೆಗಳು ಪೊಲೀಸರೊಂದಿಗೆ ರಕ್ಷಣೆಗಾಗಿ ಧಾವಿಸಿವೆ. ಸುತ್ತಮುತ್ತಲ ಪ್ರದೇಶದಲ್ಲಿಯೂ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ: Bipin Rawat Helicopter Crashes: ತಮಿಳುನಾಡು ಬಳಿ ಸೇನಾ ಹೆಲಿಕಾಪ್ಟರ್ ಪತನ; ನಾಲ್ವರ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಪತನಗೊಂಡ ಹೆಲಿಕಾಪ್ಟರ್ ಎಂಐ-ಸಿರೀಸ್‌ಗೆ ಸೇರಿದ್ದು, ಸಿಡಿಎಸ್ ಬಿಪಿನ್ ರಾವತ್, ಅವರ ಸಿಬ್ಬಂದಿ ಮತ್ತು ಕೆಲವು ಕುಟುಂಬ ಸದಸ್ಯರು ಇದ್ದರು. ಸ್ಥಳೀಯ ಜನರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದ್ದಾರೆ.

Army helicopter crash in Coonoor Tamil Nadu (3)
ಸೇನಾ ವಿಮಾನ ಪತನ


ತುರ್ತು ಸಂಪುಟ ಸಭೆ

ಸೇನಾಧಿಕಾರಿಗಳ ಕಾಪರ್ ಪತನಗೊಂಡ ವಿಷಯವನ್ನು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತಂದಿದ್ದರು. ತುರ್ತು ಸಂಪುಟ ಸಭೆ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.  ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಸಂಸತ್ತಿಗೆ ರಾಜನಾಥ್ ಸಿಂಗ್ ಅವರು ಮಾಹಿತಿ ನೀಡಲಿದ್ದಾರೆ.

ತಮಿಳುನಾಡಿಗೆ ರಾಜನಾಥ್ ಸಿಂಗ್ 

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಈ ಬಗ್ಗೆ ಪ್ರಧಾನಿಗಳೊಂದಿಗೆ ಮತ್ತು ಗೃಹಸಚಿವರ ಜೊತೆ ಚರ್ಚೆ ಮಾಡಿದ್ದಾರೆ. ಇದು ಇಡೀ ದೇಶಕ್ಕೆ ಬಹು ದೊಡ್ಡ ನಷ್ಠ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಆಧುನಿಕ ಹೆಲಿಕಾಪ್ಟರ್ Mi-17 

ಬಿಪಿನ್ ರಾವತ್ ಅವರು ವಾಯುಪಡೆಯ IAF Mi-17V5 ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು . ಈ ಹೆಲಿಕಾಪ್ಟರ್ ಅತ್ಯಂತ ಆಧುನಿಕವಾಗಿದೆ. ಇದು ಡಬಲ್ ಎಂಜಿನ್ ಹೊಂದಿದೆ. ಭಾರತದಲ್ಲಿ ಇದನ್ನು ವಿವಿಐಪಿ ಕಾರ್ಯಾಚರಣೆಗಳಿಗೆ ಬಳಸುತ್ತಾರೆ. ಭಾರತವು ಈ ಹೆಲಿಕಾಪ್ಟರ್ ಅನ್ನು ರಷ್ಯಾದಿಂದ ಖರೀದಿಸಿದೆ.  ಅವಘಡದಲ್ಲಿ ಯಾವ ಅಧಿಕಾರಿಗಳಿಗೆ ಏನಾಗಿದೆ ಎಂಬುದನ್ನುಸೇನಾಪಡೆ ಬಹಿರಂಗಗೊಳಿಸಿಲ್ಲ. ಸ್ಥಳೀಯ ಜನರಿಗೆ ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ನಿಷೇಧ ಹೇರಲಾಗಿದೆ.
Published by:Mahmadrafik K
First published: