• Home
  • »
  • News
  • »
  • national-international
  • »
  • Arunachal Pradesh Helicopter Crash: ಅರುಣಾಚಲ ಪ್ರದೇಶದ ಸಿಯಾಂಗ್‌ನಲ್ಲಿ ಸೇನೆಯ 'ರುದ್ರ' ಹೆಲಿಕಾಪ್ಟರ್ ಪತನ, ಶೋಧ ಕಾರ್ಯ ಆರಂಭ!

Arunachal Pradesh Helicopter Crash: ಅರುಣಾಚಲ ಪ್ರದೇಶದ ಸಿಯಾಂಗ್‌ನಲ್ಲಿ ಸೇನೆಯ 'ರುದ್ರ' ಹೆಲಿಕಾಪ್ಟರ್ ಪತನ, ಶೋಧ ಕಾರ್ಯ ಆರಂಭ!

 ಸಿಯಾಂಗ್‌ನಲ್ಲಿ ಸೇನೆಯ 'ರುದ್ರ' ಹೆಲಿಕಾಪ್ಟರ್ ಪತನ

ಸಿಯಾಂಗ್‌ನಲ್ಲಿ ಸೇನೆಯ 'ರುದ್ರ' ಹೆಲಿಕಾಪ್ಟರ್ ಪತನ

Military Chopper Crashes in Arunachal Pradesh: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಭಾರೀ ಅಪಘಾತ ಸಂಭವಿಸಿದೆ. ಇಲ್ಲಿನ ಸಿಂಗಿಂಗ್ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಸ್ಥಳವು ಟ್ಯೂಟಿಂಗ್ ಪ್ರಧಾನ ಕಛೇರಿಯಿಂದ 25 ಕಿಮೀ ದೂರದಲ್ಲಿದೆ.

  • News18 Kannada
  • Last Updated :
  • Arunachal Pradesh, India
  • Share this:

ಸಿಯಾಂಗ್‌(ಅ.21): ಅರುಣಾಚಲ ಪ್ರದೇಶದ ಸಿಯಾಂಗ್ (Siang district in Arunachal Pradesh) ಜಿಲ್ಲೆಯಲ್ಲಿ ಶುಕ್ರವಾರ ಭಾರೀ ಅಪಘಾತ ಸಂಭವಿಸಿದೆ. ಇಲ್ಲಿನ ಸಿಂಗಿಂಗ್ ಗ್ರಾಮದ ಬಳಿ ಸೇನಾ ಹೆಲಿಕಾಪ್ಟರ್ (Army Chopper Crash) ರುದ್ರ ಪತನಗೊಂಡಿದೆ. ಈ ಸ್ಥಳವು ಟ್ಯೂಟಿಂಗ್ ಪ್ರಧಾನ ಕಛೇರಿಯಿಂದ 25 ಕಿಮೀ ದೂರದಲ್ಲಿದೆ. ಗುವಾಹಟಿ ರಕ್ಷಣಾ PRO ಪ್ರಕಾರ, ಸೇನಾ ಹೆಲಿಕಾಪ್ಟರ್ ಟ್ಯೂಟಿಂಗ್‌ನಿಂದ 25 ಕಿಮೀ ದೂರದಲ್ಲಿರುವ ಸಿಂಗಿಂಗ್ ಗ್ರಾಮದ ಬಳಿ ಪತನಗೊಂಡಿದೆ. ಈ ಅವಘಡ ಸಂಭವಿಸಿದ ಸ್ಥಳದಲ್ಲಿ ರಸ್ತೆ ಸಂಪರ್ಕವಿಲ್ಲ. ಆದರೆ, ರಕ್ಷಣಾ ತಂಡ ಸ್ಥಳಕ್ಕೆ ತಲುಪಿದೆ.


ಸೇನಾ ಹೆಲಿಕಾಪ್ಟರ್ ರುದ್ರ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ. ಹುಡುಕಾಟ ಕಾರ್ಯಾಚರಣೆ ಆರಂಭಗೊಂಡಿದೆ. ರುದ್ರ ಭಾರತೀಯ ಸೇನಾ ಫೈಟರ್​ ಜೆಟ್​ ಆಗಿದೆ. ಇದನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭಾರತೀಯ ಸೇನೆಗಾಗಿ ತಯಾರಿಸಿದೆ. ಇದು ಹಗುರವಾದ ಧ್ರುವ್ ಹೆಲಿಕಾಪ್ಟರ್‌ನ ವೆಪನ್ ಸಿಸ್ಟಮ್ ಇಂಟಿಗ್ರೇಟೆಡ್ (WSI) Mk-IV ಆವೃತ್ತಿಯಾಗಿದೆ.


ಮೊನ್ನೆಯಷ್ಟೇ,  ಅಕ್ಟೋಬರ್ 5 ರಂದು ಅರುಣಾಚಲ ಪ್ರದೇಶದ ತವಾಂಗ್ ಬಳಿ ಸೇನಾ ಹೆಲಿಕಾಪ್ಟರ್ 'ಚೀತಾ ' ಪತನಗೊಂಡಿತ್ತು. ಹೆಲಿಕಾಪ್ಟರ್‌ನಲ್ಲಿ ಇಬ್ಬರು ಪೈಲಟ್‌ಗಳಿದ್ದು, ಒಬ್ಬ ಪೈಲಟ್ ಲೆಫ್ಟಿನೆಂಟ್ ಕರ್ನಲ್ ಸೌರಭ್ ಯಾದವ್ ಹುತಾತ್ಮರಾಗಿದ್ದರು. ಅದೇ ಸಮಯದಲ್ಲಿ, ಎರಡನೇ ಪೈಲಟ್​ನ್ನು ಗಂಭೀರ ಸ್ಥಿತಿಯಲ್ಲಿ ಹತ್ತಿರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಕಳೆದ ವರ್ಷ ಪತನವಾಗಿತ್ತು ಸಿಡಿಎಸ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್


ಕಳೆದ ವರ್ಷ ಡಿಸೆಂಬರ್‌ನಲ್ಲಿ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಅವರಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿತ್ತು. ಹೆಲಿಕಾಪ್ಟರ್‌ನಲ್ಲಿ ಬಿಪಿನ್ ರಾವತ್ ಅವರ ಪತ್ನಿ, ಸಿಬ್ಬಂದಿ ಸೇರಿದಂತೆ ಒಟ್ಟು 14 ಮಂದಿ ಇದ್ದು, ಎಲ್ಲರೂ ಮೃತಪಟ್ಟಿದ್ದರು. ಹಿಂದಿನ ಸಿಡಿಎಸ್ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ಅಪಘಾತಕ್ಕೀಡಾಗಿತ್ತು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅವರು ತಮಿಳುನಾಡಿನ ವೆಲ್ಲಿಂಗ್ಟನ್‌ಗೆ ತೆರಳುತ್ತಿದ್ದರು.

Published by:Precilla Olivia Dias
First published: