ಕಾಶ್ಮೀರಕ್ಕೆ ಇಂದು ಭೇಟಿ ನೀಡಲಿರುವ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​: ಪರಿಸ್ಥಿತಿ ಅವಲೋಕನ

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಯಾಥಾಸ್ಥಿತಿಗೆ ಮರಳುತ್ತಿದೆ ಎಂದು ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​ ಮತ್ತು ವಿದೇಶಾಂಗ ಸಚಿವರ ಹೇಳಿಕೆ ಬಳಿಕ ಸೇನಾ ಮುಖ್ಯಸ್ಥರು ಕಣಿವೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

Seema.R | news18-kannada
Updated:August 30, 2019, 11:52 AM IST
ಕಾಶ್ಮೀರಕ್ಕೆ ಇಂದು ಭೇಟಿ ನೀಡಲಿರುವ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​: ಪರಿಸ್ಥಿತಿ ಅವಲೋಕನ
ಬಿಪಿನ್​ ರಾವತ್​
  • Share this:
ನವದೆಹಲಿ (ಆ.30): ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಇದೇ ಮೊದಲಬಾರಿಗೆ ಕಣಿವೆ ರಾಜ್ಯಕ್ಕೆ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಭೇಟಿ ನೀಡಲಿದ್ದಾರೆ. ಈ ವೇಳೆ ಇಲ್ಲಿನ ರಕ್ಷಣಾ ವ್ಯವಸ್ಥೆಯನ್ನು ಅವಲೋಕಿಸಲಿದ್ದು, ಕದನ ವಿರಾಮ ಉಲ್ಲಂಘನೆ ಹಿನ್ನೆಲೆ ಇಲ್ಲಿನ ರಕ್ಷಣಾ ವ್ಯವಸ್ಥೆ ಸನ್ನದ್ಧುಗೊಳಿಸುವ ಬಗ್ಗೆ ಪರಮಾರ್ಶಿಸಲಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತಿದೆ ಎಂದು ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​ ಮತ್ತು ವಿದೇಶಾಂಗ ಸಚಿವರ ಹೇಳಿಕೆ ಬಳಿಕ ಸೇನಾ ಮುಖ್ಯಸ್ಥರು ಕಣಿವೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಬುಧವಾರ ಈ ಕುರಿತು ಮಾತನಾಡಿದ ಮಲ್ಲಿಕ್​ ಕಾಶ್ಮೀರದಲ್ಲಿ ಯಾವುದೇ ನಾಗರಿಕ ದಾಳಿಗಳು ನಡೆದಿಲ್ಲ. ಪಂಚಾಯತ್​ ಚುನಾವಣೆ ಲೋಕಸಭಾ ಚುನಾವಣೆ ಸಂದರ್ಭ ಸೇರಿದಂತೆ ಪ್ರಸ್ತುತ  ವೇಳೆ ಕೂಡ ಇಲ್ಲಿನ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿಯೇ ಇದೆ. ಪ್ರತಿಯೊಬ್ಬ ಕಾಶ್ಮೀರಿಗಳ ಜೀವನವೂ ಮೌಲ್ಯಯು. ಯಾರೊಬ್ಬರ ಜೀವನವೂ ಹಾನಿಯಾಗದಂತೆ ಕಾಪಾಡುವುದು ನಮ್ಮ ಜವಾಬ್ದಾರಿ. ಯಾವುದೇ ನಾಗರಿಕ ದಾಳಿಗಳು ನಡೆದಿಲ್ಲ. ಕೆಲವು ಸಣ್ಣಪುಟ್ಟ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು.

ಇದನ್ನು ಓದಿ: ಕಾಶ್ಮೀರ ವಿಷಯ ಕುರಿತು ರಾಹುಲ್​ ಮಾತ್ರವಲ್ಲ, ಹರ್ಯಾಣ ಸಿಎಂ, ಬಿಜೆಪಿ ನಾಯಕರ ಹೇಳಿಕೆಯನ್ನು ವಿಶ್ವಸಂಸ್ಥೆಗೆ ಉಲ್ಲೇಖಿಸಿದ ಪಾಕ್

ಅಲ್ಲದೇ ಇದೇ ವೇಳೆ ಕಣಿವೆ ರಾಜ್ಯದಲ್ಲಿ 50 ಹೊಸ ಕಾಲೇಜ್​ಗಳ ಸ್ಥಾಪನೆ ಮಾಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಹೇಳಿದ್ದರು.

ಕಾಶ್ಮೀರ ವಿಚಾರದಲ್ಲಿ ಭಾರತ ಸರ್ಕಾರ ಕೈಗೊಂಡ ನಿರ್ಧಾರದ ಬಗ್ಗೆ ಪಾಕಿಸ್ತಾನ ವಿರೋಧಿಸಿತು. ಈ ವಿಚಾರ ಕುರಿತು ರಾಹುಲ್​ ಗಾಂಧಿ, ಹರಿಯಾಣ ಸಿಎಂ ಮನೋಹರ್​ ಲಾಲ್​ ಕಟ್ಟರ್​ ಹೇಳಿಕೆ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದಿದೆ. ಇನ್ನು ಕಛ್​ ಪ್ರದೇಶದಿಂದ ಒಳನುಗ್ಗಲು ಪ್ರಯತ್ನಿಸುತ್ತಿರುವ ಕುರಿತು ಮಾತನಾಡಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ,  ಇದು ಭಾರತದ ಆಂತರಿಕ ವಿಷಯವಾಗಿದ್ದು ಪಾಕ್​ ನೆರೆಯ ರಾಷ್ಟ್ರದಂತೆ ವರ್ತಿಸಬೇಕು ಎಂದು ತಿರುಗೇಟು ನೀಡಿದ್ದರು.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading