ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಗುಂಡಿಗೆ ವ್ಯಕ್ತಿಯೋರ್ವ ಬಲಿ, ಸಚಿವ ಅರ್ಜುನ ರಣತುಂಗ ಅರೆಸ್ಟ್‌..!

ಶ್ರೀಲಂಕಾದ ನೂತನ ಪ್ರಧಾನಿ ಮಹಿಂದ ರಾಜಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ವ್ಯಕ್ತಿಯೋರ್ವ ಗುಂಡೇಟಿಗೆ ಬಲಿಯಾಗಿದ್ದು, ಸಚಿವ ರಣತುಂಗಾ ಅವರನ್ನು ಬಂಧಿಸಲಾಗಿದೆ.

Ganesh Nachikethu
Updated:October 29, 2018, 9:32 PM IST
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಗುಂಡಿಗೆ ವ್ಯಕ್ತಿಯೋರ್ವ ಬಲಿ, ಸಚಿವ ಅರ್ಜುನ ರಣತುಂಗ ಅರೆಸ್ಟ್‌..!
ಅರ್ಜುನ ರಣತುಂಗ
  • Share this:
ನ್ಯೂಸ್​​-18 ಕನ್ನಡ

ನವದೆಹಲಿ(ಅ.29): ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಈ ಮಧ್ಯೆ ಸಚಿವ ರಣತುಂಗ ಕಚೇರಿ ಮುಂಭಾಗದಲ್ಲಿ ಗುಂಡೇಟಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಪೊಲೀಸರು ಕ್ರಿಕೆಟ್ ದಂತಕಥೆ, ಸಚಿವ ಅರ್ಜುನ್ ರಣತುಂಗ ಅವರನ್ನು ಬಂಧಿಸಿದ್ದಾರೆ. ಅಲ್ಲದೇ ಗುಂಡೇಟಿಗೆ ಬಲಿಯಾಗಿದ್ದ ವ್ಯಕ್ತಿ ಬಗ್ಗೆ ವಿಚಾರಣೆಯೂ ಪೊಲೀಸರಿಂದ ಮುಂದುವರೆದಿದೆ.

ಇದೇ ಭಾನುವಾರ ಶ್ರೀಲಂಕಾದ ನೂತನ ಪ್ರಧಾನಿ ಮಹಿಂದ ರಾಜಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆಯಿತು. ಈ ವೇಳೆ ದಾಳಿಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದ. ಸಚಿವ ರಣತುಂಗಾ ಕಚೇರಿ ಮುಂಭಾಗದಲ್ಲಿಯೇ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಸಂಬಂಧ ಪ್ರಕರಣದಲ್ಲಿ ಪೊಲೀಸರು ಲಂಕೆಯ ಮಾಜಿ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಬೆಂಬಲಿರಾದ ರಣತುಂಗ ಅವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಂದು ರಾಜಪಕ್ಸ, ಇಂದು ವಿಕ್ರಮಸಿಂಘೆ: ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದ್ದಾರೆ ಸಿರಿಸೇನ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ಲಂಕೆಯ ಮಾಜಿ ಪ್ರಧಾನಿ ರಣಿಲ್‌ ವಿಕ್ರಮಸಿಂಘ ಅವರಿಗೆ ನಿಷ್ಠರಾಗಿರುವ 54ರ ಹರೆಯದ ಸಚಿವ ರಣತುಂಗ ಅವರ ಬೆಂಬಲಿಗರು ಹೊಸ ಪ್ರಧಾನಿ ಬೆಂಬಲಿಗರ ಮೇಲೆ ಭಾನುವಾರ ದಾಳಿ ನಡೆಸಿದ್ಧಾರೆ. ಮಹಿಂದ ರಾಜಪಕ್ಷ ಅವರ ಬೆಂಬಲಿಗರ ಮೇಲೆ ನಿನ್ನೆ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಹೀಗಾಗಿ ರಣತುಂಗ ಅವರನ್ನು ಬಂಧಿಸಿದ್ದೇವೆ ಎಂದಿದ್ದಾರೆ.

ಇನ್ನು ಗುಂಡಿನ ದಾಳಿಗೆ ಇನ್ನಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. ಅಲ್ಲದೇ ಪೊಲೀಸರು ಈ ಮುನ್ನ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದರು. ಇದೀಗ ಕೇಸ್​ನಲ್ಲಿ ಅರ್ಜುನ ರಣತುಂಗ ಅವರನ್ನು ಬಂಧಿಸಲಾಗಿದೆ. ರಣತುಂಗ ಅವರ ಸಚಿವಾಲಯದ ಆವರಣದೊಳಗೆ ಅವರ ಭದ್ರತಾ ಸಿಬಂದಿ ಪೆಟ್ರೋಲಿಯಂ ಕಾರ್ಮಿಕನೋರ್ವನನ್ನು ಗುಂಡಿಕ್ಕಿ ಕೊಂದ ಕಾರಣಕ್ಕೆ ಬಂಧಿಸಲಾಗಿದೆ ಎಂದು ಎಂದು ಪೊಲೀಸ್‌ ವಕ್ತಾರ ರುವಾನ್‌ ಗುಣಶೇಖರ ತಿಳಿಸಿದ್ದಾರೆ.

ಇದನ್ನೂ ಓದಿ: 'ನಾನು ಸತ್ತೇ ಹೋಗಿದ್ದೆ'; ಶ್ರೀಲಂಕಾ ರಾಜಕೀಯ ಬಿಕ್ಕಟ್ಟು ಅರ್ಜುನ್ ರಣತುಂಗಾಗೆ ಹೇಗೆ ಕೆಟ್ಟ ದುಸ್ವಪ್ನವಾಗಿದೆಈ ಮಧ್ಯೆ ಸಚಿವ ರಣತುಂಗಾ ಪರ ವಕೀಲ ಕೊಲಂಬೋ ಕೋರ್ಟ್​​ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಸಚಿವರು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡುವಂತೆ ವಾದಿಸಿದ್ದಾರೆ. ಈ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಸಚಿವ ರಣತುಂಗಾ ಅವರಿಗೆ ಜಾಮೀನು ನೀಡಿದೆ ಎನ್ನಲಾಗಿದೆ.

--------------
ಸಿಎಂಗೆ ಸವಾಲೆಸೆದ ಜೇವರ್ಗಿ ಮಠದ ಸಿದ್ದಲಿಂಗ ಸ್ವಾಮೀಜಿ
First published:October 29, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading