Drug Case: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗರ್ಲ್​​ಫ್ರೆಂಡ್​ನ ಸೋದರ ಮತ್ತೆ ಡ್ರಗ್ ಕೇಸ್​​ನಲ್ಲಿ ಅರೆಸ್ಟ್

Gabriella Demetriades Brother Arrested : ಈ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲೂ ಅಗಿಸಿಲಾವೊವನ ಬಂಧನವಾಗಿತ್ತು.

ಅರ್ಜುನ್​ ರಾಂಪಾಲ್​ ಗರ್ಲ್​​ಫ್ರೆಂಡ್​ ಸೋದರ

ಅರ್ಜುನ್​ ರಾಂಪಾಲ್​ ಗರ್ಲ್​​ಫ್ರೆಂಡ್​ ಸೋದರ

  • Share this:
ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಟಾಲ್ ಹ್ಯಾಂಡ್‍ಸಮ್ ನಟ ಅರ್ಜುನ್ ರಾಂಪಾಲ್ (Arjun Rampal) ಗೆಳತಿ ಗ್ಯಾಬ್ರಿಯೆಲಾ ಡೆಮೆಟ್ರಿಯೇಡ್ಸ್ (Gabriella Demetriades)  ಸೋದರ ಅಗಿಸಿಲಾವೋ ಡೆಮೆಟ್ರಿಯೇಡ್ಸ್ (Agisilaos Demetriades) ನನ್ನು ಎನ್‍ಸಿಬಿ ಬಂಧಿಸಿದೆ. ಗೋವಾದಲ್ಲಿ (Goa) ಅಗಿಸಿಲಾವೋ ಬಳಿ ಡ್ರಗ್ಸ್ ಪತ್ತೆಯಾಗಿದ್ದರಿಂದ ಎನ್‍ಸಿಬಿ (NCB) ಬಂಧಿಸಿದೆ ಎಂದು ವರದಿಯಾಗಿದೆ. ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ನೇತೃತ್ವದಲ್ಲಿ ಡ್ರಗ್ಸ್ ಪೆಡ್ಲರ್ ಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. ಜೊತೆಗೆ ಡ್ರಗ್ಸ್ ಖರೀದಿಸುವ ಮತ್ತು ಸೇವಿಸುವವರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದರು. ಅಗಿಸಿಲವೋ ವಿರುದ್ಧ ದಾಖಲಾದ ಮೂರನೇ ಪ್ರಕರಣ ಎಂದು ಎನ್‍ಸಿಬಿ ಮೂಲಗಳ ಖಚಿತಪಡಿಸಿವೆ. ಈ ಹಿಂದೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಪ್ರಕರಣದಲ್ಲಿ ಅಗಿಸಿಲಾವೊವನ ಬಂಧನವಾಗಿತ್ತು.

2020 ಡಿಸೆಂಬರ್ ನಲ್ಲಿ ಜಾಮೀನು

ಡಿಸೆಂಬರ್ 16, 2020ರಂದು ಮುಂಬೈನ ನಾರ್ಕೋಟಿಕ್ಸ್ ವಿಶೇಷ ನ್ಯಾಯಾಲಯ ಆರೋಪಿ ಅಗಿಸಿಲಾವೋವವನಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. 50 ಸಾವಿರ ರೂ. ಬಾಂಡ್ ಜೊತೆ ಪಾಸ್‍ಪೋರ್ಟ್ ಸಹ ಎನ್‍ಸಿಬಿ ವಶಕ್ಕೆ ನೀಡಬೇಕೆಂದು ಆದೇಶಿಸಿತ್ತು. ನಗರ ತೊರೆಯುವ ಮೊದಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ (Narcotics Control Bureau) ಸಂಪೂರ್ಣ ಮಾಹಿತಿ ನೀಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ಹೇಳಿತ್ತು.

ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ ಎನ್‍ಸಿಬಿ

ಅಕ್ಟೋಬರ್ 2020ರಂದು ಮುಂಬೈ ಹೊರವಲಯದ ಲೊನಾವಾಲಾದಲ್ಲಿರುವ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ ಎನ್‍ಸಿಬಿ ಆಗಿಸಿಲಾವೋವನನ್ನು ಬಂಧಿಸಿತ್ತು. ದಾಳಿ ವೇಳೆ ಮಾದಕದ್ರವ್ಯ ಪತ್ತೆಯಾಗಿದ್ದರ ಬಗ್ಗೆ ವರದಿಯೂ ಆಗಿತ್ತು. ಆದರೆ ಈ ಪ್ರಕರಣದಲ್ಲಿ ಅಕ್ಟೋಬರ್ ನಲ್ಲಿಯೇ ಜಾಮೀನು ಸಿಕ್ಕರೂ ಹೊರ ಬರಲು ಆಗಿರಲಿಲ್ಲ. ಕಾರಣ ಎನ್‍ಸಿಬಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್‍ಐಆರ್ ದಾಖಲಿಸಿತ್ತು. ರೆಸಾರ್ಟ್ ಮೇಲೆ ದಾಳಿ ನಡೆದ ದಿನವೇ ಇತ್ತ ಮನೆಯನ್ನು ಸಹ ಎನ್‍ಸಿಬಿ ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ: Punjab Cabinet List: ಪಂಜಾಬ್ ಕ್ಯಾಬಿನೆಟ್ ಫೈನಲ್; ಅಮರೀಂದರ್ ಆಪ್ತರಿಗೆ ಕೊಕ್, 7 ಹೊಸ ಮುಖಗಳಿಗೆ ಮಣೆ

ಫೆಡರಲ್ ಆ್ಯಂಟಿ ನಾರ್ಕೋಟಿಕ್ಸ್ ಏಜೆನ್ಸಿ ಆಗಿಸಿಲಾವೋವ ಓರ್ವ ಬಾಲಿವುಡ್ ಸೆಲೆಬ್ರಿಟಿಗಳ ಡ್ರಗ್ಸ್ ಸಿಂಡಿಕೇಟ್ ಸದಸ್ಯ (Bollywood drug syndicate) ಎಂಬುದನ್ನ ಖಚಿತಪಡಿಸಿತ್ತು. ಸೆಕ್ಷನ್ 27 (ಕಾನೂನು ಬಾಹಿತ ಚಟುವಟಿಕೆ ಹಾಗೂ ಹಣ ಪೂರೈಕೆ ಮತ್ತು ಅಪರಾಧಿಗಳಿಗೆ ಆಶ್ರಯ) ಅಡಿ ಬಂಧಿಸಲಾಗಿತ್ತು. ಎನ್‍ಡಿಪಿಎಸ್ ಕಾನೂನಿನಲ್ಲಿ ಸೆಕ್ಷನ್ 27 ಅತ್ಯಂತ ಬಲಿಷ್ಠ ಎಂದು ಹೇಳಲಾಗುತ್ತದೆ.

ಸುಶಾಂತ್ ಸಿಂಗ್ ಪ್ರಕರಣ- Sushant Singh Rajput Death Case

ಜೂನ್ 14, 2020ರಂದು ನಟ ಸುಶಾಂಗ್ ಸಿಂಗ್ ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಎಂದು ದಾಖಲಾಹಿದ್ದ ಪ್ರಕರಣ ಹಲವು ರೋಚಕ ತಿರುವು ಪಡೆದುಕೊಂಡಿತ್ತು. ನಂತರ ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಸೇವನೆ ಮಾಡುತ್ತಿರುವ ಕೇಳಿ ಬಂದಿದ್ದವು. ಇದೇ ಪ್ರಕರಣದಲ್ಲಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ (Rhea Chakraborty) ಸೇರಿದಂತೆ ಹಲವರು ಜೈಲುವಾಸ ಅನುಭವಿಸಿ ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಡ್ರಗ್ಸ್ ಖರೀದಿ ವೇಳೆ ವ್ಯಾಪಕ ಹಣ ವರ್ಗಾವಣೆ ಆಗಿರುವ ಬಗ್ಗೆ ಅನುಮಾನಗಳ ವ್ಯಕ್ತವಾದ ಹಿನ್ನೆಲೆ ಎನ್‍ಸಿಬಿ ಸೂಚನೆ ಮೇರೆಗೆ ಜಾರಿ ನಿರ್ದೇಶನಾಲಯ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು.

ಮಹ್ಮದ್ ರಫೀಕ್ ಕೆ.
Published by:Kavya V
First published: