ಎನ್​ಡಿಎ ಸರ್ಕಾರ ಕೊನೇ ಸಚಿವ ಸಂಪುಟ ಸಭೆ ಇಂದು; ಮೇ 30ರಂದು 2ನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ

ಇಂದು ರಾಷ್ಟ್ರಪತಿಗಳನ್ನು ಭೇಟಿಯಾಗಲಿರುವ ಅವರು, ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ. ನಂತರ ರಾಷ್ಟ್ರಪತಿಗಳು ಹೊಸ ಸರ್ಕಾರ ರಚನೆಗೆ ಆಹ್ವಾನ ನೀಡಲಿದ್ದಾರೆ.

Seema.R | news18
Updated:May 24, 2019, 6:18 PM IST
ಎನ್​ಡಿಎ ಸರ್ಕಾರ ಕೊನೇ ಸಚಿವ ಸಂಪುಟ ಸಭೆ ಇಂದು; ಮೇ 30ರಂದು 2ನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ
ನರೇಂದ್ರ ಮೋದಿ
  • News18
  • Last Updated: May 24, 2019, 6:18 PM IST
  • Share this:
ನವದೆಹಲಿ (ಮೇ.24):  17ನೇ ಲೋಕಸಭಾ ಚುನಾವಣೆಯ ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಮಲ ನಾಯಕರು ಮುಳುಗಿದ್ದಾರೆ. ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ 353 ಸ್ಥಾನಗಳನ್ನು ಗೆಲ್ಲುವ  ಮೂಲಕ ಪ್ರಚಂಡ ಜಯಭೇರಿ ಬಾರಿಸಿದೆ. ಈ ದೊಡ್ಡ ಯಶಸ್ಸಿನೊಂದಿಗೆ ಶುಕ್ರವಾರ ತಮ್ಮ 16ನೇ ಲೋಕಸಭೆಯನ್ನು ವಿಸರ್ಜಿಸಿ, ಹೊಸ  ಸರ್ಕಾರ ರಚನೆಗೆ ಮೋದಿ ಅಣಿಯಾಗಿದ್ದಾರೆ.

ಇಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಭೇಟಿ ಮಾಡಲಿರುವ ಅವರು ಸರ್ಕಾರ ವಿಸರ್ಜಿಸುವ ಕುರಿತು ಶಿಫಾರಸ್ಸು ಮಾಡಲಿದ್ದಾರೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ ಬಿಜೆಪಿ ಹಿರಿಯ ನಾಯಕರಾದ ಎಲ್​.ಕೆ ಆಡ್ವಾಣಿ ಹಾಗೂ ಮುರಳಿ ಮನೋಹರ್​ ಜೋಷಿ ಭೇಟಿಯಾಗಿ, ಆಶೀರ್ವಾದ ಪಡೆದರು.

ಅಡ್ವಾನಿ-ಮುರುಳಿ ಮನೋಹರ್​ ಜೋಷಿ ಆಶೀರ್ವಾದ ಪಡೆದ ಮೋದಿ


 

ಇಂದು ಸಂಜೆ 5ಗಂಟೆಗೆ ಸಂಸತ್ತಿನ ಸೌತ್​ ಬ್ಲಾಕ್​ನಲ್ಲಿ ಕೊನೆಯ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಅವರು, ಸರ್ಕಾರ ವಿಸರ್ಜಿಸಲಿದ್ದಾರೆ. ಇನ್ನು ಆರೋಗ್ಯದ ಸಮಸ್ಯೆ ಹಿನ್ನೆಲೆ ಈ ಸಭೆಯಿಂದ ಹಣಕಾಸು ಸಚಿವ ಅರುಣ್​ ಜೇಟ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ದೂರ ಉಳಿಯಲಿದ್ದಾರೆ.

ಇದಾದ ಬಳಿಕ ರಾಷ್ಟ್ರಪತಿಗಳನ್ನು ಭೇಟಿಯಾಗಲಿರುವ ಅವರು, ತಮ್ಮ ರಾಜೀನಾಮೆ  ಸಲ್ಲಿಸಲಿದ್ದಾರೆ. ನಂತರ ರಾಷ್ಟ್ರಪತಿಗಳು ಹೊಸ ಸರ್ಕಾರ ರಚನೆಗೆ ಆಹ್ವಾನ ನೀಡಲಿದ್ದಾರೆ. ಮೂಲಗಳ ಪ್ರಕಾರ ಎರಡನೇ ಬಾರಿ ಪ್ರಧಾನಿಯಾಗಿ ಮೋದಿ ಮೇ 30ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದಾದ ಬಳಿಕ ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಲಿದ್ದಾರೆ.

ಇದನ್ನು ಓದಿ: ಬಿಎಸ್​ಪಿಗೆ ವರವಾದ ಮೈತ್ರಿ ಎಸ್​ಪಿಗೆ ಸಿಹಿ ನೀಡಲಿಲ್ಲ; ಮಾಯಾವತಿಯನ್ನು ದಡಸೇರಿಸುವ ಬರದಲ್ಲಿ ಮುಳುಗಿದ ಅಖಿಲೇಶ್!ಇನ್ನು ಈ ಬಾರಿ ಮೊದಲ ಬಾರಿ ಸಂಸತ್ತು ಪ್ರವೇಶಿಸಿರುವ ಮೋದಿ ಆಪ್ತ, ಬಲಗೈ ಬಂಟ ಅಮಿತ್​ ಶಾ ಗೃಹ, ರಕ್ಷಣಾ ಅಥವಾ ಹಣಕಾಸು ಖಾತೆಗಳಲ್ಲಿ ಒಂದನ್ನು ಪಡೆಯುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಶುರುವಾಗಿದೆ.

ಮೋದಿ ಪ್ರಮಾಣ ವಚನಕ್ಕೂ ಮೊದಲು ವಾರಾಣಸಿಗೆ ಭೇಟಿ ನೀಡಿ ತಮ್ಮ ಗೆಲುವಿಗೆ ಕಾರಣರಾದ ಜನರಿಗೆ ಧನ್ಯವಾದ ತಿಳಿಸಿ, ಶಿವನ ದರ್ಶನ ಪಡೆಯಲಿದ್ದಾರೆ.

ರಾಷ್ಟ್ರಪತಿಗಳಿಂಗ ಇಂದು ಔತಣ ಕೂಟ

16ನೇ ಲೋಕಸಭೆಯ ಸಚಿವ ಸಂಪುಟ ಸದಸ್ಯರಿಗೆ ರಾಷ್ಟ್ರಪತಿ ರಾಮನಾಥ​ ಕೋವಿಂದ್​ ಇಂದು ರಾತ್ರಿ ಔತಣಕೂಟ ನೀಡಲಿದ್ದಾರೆ. ರಾತ್ರಿ 7.30ಕ್ಕೆ ರಾಷ್ಟ್ರಪತಿ ಭವನದಲ್ಲಿ ಈ ಔತಣ ಕೂಡ ನಡೆಲಿದ್ದು, ಈ ವೇಳೆ ಮೋದಿ ರಾಜೀನಾಮೆ ಸಲ್ಲಿಸಲಿದ್ದಾರೆ.
First published:May 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading