ನೀವು ಪಾಕಿಸ್ತಾನದವರಾಗಿದ್ದರೆ ಭಾರತ್ ಮಾತಾ ಕೀ ಜೈ ಎನ್ನಬೇಡಿ; ಬಿಜೆಪಿ ಅಭ್ಯರ್ಥಿ ಸೋನಾಲಿ ವಾಗ್ದಾಳಿ

ಆದಮ್​ ಪುರದ ಹಾಲಿ ಕಾಂಗ್ರೆಸ್​ ಶಾಸಕ ಕುಲದೀಪ್ ಬಿಶ್ನೋಯಿ ವಿರುದ್ಧ ಸ್ಪರ್ಧೆಗೆ ಇಳಿದಿರುವ ಸೋನಾಲಿ, ಸ್ಮೃತಿ ಇರಾನಿ ರಾಹುಲ್​ ಗಾಂಧಿಯನ್ನು ತಮ್ಮ ಭದ್ರಕೋಟೆಯಾದ ಅಮೇಥಿಯಿಂದ ಉಚ್ಚಾಟಿಸಿದಂತೆಯೇ ನಾನು ಕೂಡ ಕುಲದೀಪ್​ ಅವರನ್ನು ಸೋಲಿಸುತ್ತೇನೆ ಎಂದು ಹೇಳಿದರು.

Latha CG | news18-kannada
Updated:October 9, 2019, 9:21 AM IST
ನೀವು ಪಾಕಿಸ್ತಾನದವರಾಗಿದ್ದರೆ ಭಾರತ್ ಮಾತಾ ಕೀ ಜೈ ಎನ್ನಬೇಡಿ; ಬಿಜೆಪಿ ಅಭ್ಯರ್ಥಿ ಸೋನಾಲಿ ವಾಗ್ದಾಳಿ
ಬಿಜೆಪಿ ಅಭ್ಯರ್ಥಿ ಸೋನಾಲಿ ಫೋಗಾಟ್​
  • Share this:
ನವದೆಹಲಿ(ಅ.09): ಹರಿಯಾಣದಲ್ಲಿ ಅ.21ರಂದು ಚುನಾವಣೆ ಇರುವ ಇರುವ ಹಿನ್ನೆಲೆ, ಆದಮ್​ಪುರ ಬಿಜೆಪಿ ಅಭ್ಯರ್ಥಿ ಹಾಗೂ ಟಿಕ್​ಟಾಕ್​​ ಸ್ಟಾರ್ ಸೋನಾಲಿ ಫೋಗಾಟ್​ ಮಂಗಳವಾರ ತಮ್ಮ ಕ್ಷೇತ್ರದಲ್ಲಿ ರ‍್ಯಾಲಿ ಕೈಗೊಂಡಿದ್ದರು.

ರ‍್ಯಾಲಿಯಲ್ಲಿ ಸೋನಾಲಿ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದರು. ಈ ವೇಳೆ ಕೆಲವು ಜನರ ಗುಂಪು ಭಾರತ್ ಮಾತಾ ಕೀ ಜೈ ಹೇಳದೆ ಮೌನ ವಹಿಸಿದ್ದರು. ಇದರಿಂದ ಕೋಪಗೊಂಡ ಸೋನಾಲಿ, "ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ನೀವು ಪಾಕಿಸ್ತಾನಿಯರೇ? ನೀವು ಭಾರತೀಯರಾಗಿದ್ದರೇ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ," ಎಂದು ಆಗ್ರಹಿಸಿದ್ದಾರೆ. ನೀವು ಪಾಕಿಸ್ತಾನದವರಾಗಿದ್ದರೆ ಭಾರತ್ ಮಾತಾ ಕೀ ಜೈ ಎನ್ನಬೇಡಿ ಎಂದು ಹರಿಹಾಯ್ದಿದ್ದಾರೆ.

ಚಳಿಗಾಲ ಆರಂಭ ಹಿನ್ನೆಲೆ; ಬಾಗಿಲು ಮುಚ್ಚಲಿವೆ ಕೇದಾರನಾಥ, ಬದ್ರೀನಾಥ ದೇವಾಲಯಗಳು

ಬಿಜೆಪಿ ರ‍್ಯಾಲಿಯು ನಿನ್ನೆ ಆದಮ್​ಪುರ ಕ್ಷೇತ್ರದ ಬಲ್ಸಾಮಂದ್ ಗ್ರಾಮದಲ್ಲಿ ಜರುಗಿತ್ತು. ಈ ವೇಳೆ ಬಿಜೆಪಿ ಅಭ್ಯರ್ಥಿ ಸೋನಾಲಿ ಫೋಗಾಟ್ ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಪದೇ ಪದೇ ಕೂಗುತ್ತಿದ್ದರು. ಆದರೆ ರ‍್ಯಾಲಿಯಲ್ಲಿ ಕೆಲವು ಮಂದಿಯ ಗುಂಪು ಮಾತ್ರ ಘೋಷಣೆ ಕೂಗದೆ ಸುಮ್ಮನೆ ನಿಂತಿದ್ದರು. ಇದನ್ನು ಗಮನಿಸಿದ ಸೋನಾಲಿ, "ಭಾರತ್​ ಮಾತಾ ಕೀ ಜೈ ಎನ್ನದ ನೀವು ಭಾರತೀಯರಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಯಾರು ಭಾರತ್ ಮಾತಾ ಕೀ ಜೈ ಹೇಳುವುದಿಲ್ಲವೋ ಅವರ ಮತಗಳಿಗೆ ಬೆಲೆ ಇಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋನಾಲಿ ರ‍್ಯಾಲಿಯಲ್ಲಿ ಮಾತನಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ಭಾರೀ ವೈರಲ್​ ಆಗಿದೆ. ರ್ಯಾಲಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜೊಂದನ್ನು ನಿರ್ಮಿಸುವುದಾಗಿ ಆಶ್ವಾಸನೆ ನೀಡಿದರು. ಆಗ ಅಲ್ಲಿ ನೆರೆದಿದ್ದ ಜನರು ಭಾರತ್ ಮಾತಾಕೀ ಜೈ ಎಂದು ಜೋರಾಗಿ ಘೋಷಣೆ ಕೂಗಿದರು.

ಆದಮ್​ ಪುರದ ಹಾಲಿ ಕಾಂಗ್ರೆಸ್​ ಶಾಸಕ ಕುಲದೀಪ್ ಬಿಶ್ನೋಯಿ ವಿರುದ್ಧ ಸ್ಪರ್ಧೆಗೆ ಇಳಿದಿರುವ ಸೋನಾಲಿ, ಸ್ಮೃತಿ ಇರಾನಿ ರಾಹುಲ್​ ಗಾಂಧಿಯನ್ನು ತಮ್ಮ ಭದ್ರಕೋಟೆಯಾದ ಅಮೇಥಿಯಿಂದ ಉಚ್ಚಾಟಿಸಿದಂತೆಯೇ ನಾನು ಕೂಡ ಕುಲದೀಪ್​ ಅವರನ್ನು ಸೋಲಿಸುತ್ತೇನೆ ಎಂದು ಹೇಳಿದರು.

ಸೋನಿಯಾ ಕೈಸೇರಿದ ಮಿಸ್ತ್ರಿ ವರದಿ: ರಾಜ್ಯದ ಕಾಂಗ್ರೆಸ್ ವಿಪಕ್ಷ ನಾಯಕ ಯಾರಾಗ್ತಾರೆ ಎಂಬುದು ಈಗ ಸಸ್ಪೆನ್ಸ್ಬಳಿಕ ಫೋಗಾಟ್​ ತಾನು ನೀಡಿದ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದಳು, ನಾನು ಜನರನ್ನು ಪಾಕಿಸ್ತಾನಿಯರು ಎಂದು ಕರೆಯಲಿಲ್ಲ. ನೀವು ಪಾಕಿಸ್ತಾನದಿಂದ ಬಂದಿದ್ದೀರಾ ಎಂದು ಕೇಳಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಭಾರತ್ ಮಾತಾ ಕೀ ಜೈ ಹೇಳದ ಕೆಲವು ಜನರು ಸೋನಾಲಿ ಬಳಿ ಬಂದು ಕ್ಷಮೆಯಾಚಿಸಿದರು.

First published: October 9, 2019, 9:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading