40 ಟಿಎಂಸಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂದ ಮೋದಿ; ನೀವು ಕುದುರೆ ವ್ಯಾಪಾರ ಮಾಡುತ್ತಿದ್ದೀರೆಂದು ತೃಣಮೂಲ ತಿರುಗೇಟು

ಬಿಜೆಪಿಗೆ ಜನರು ಮತ ಹಾಕುವುದನ್ನು ಟಿಎಂಸಿ ಒತ್ತಾಯ ಪೂರ್ವಕವಾಗಿ ತಡೆ ಹಿಡಿಯುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರ ಪ್ರಚಾರಕ್ಕೆ ನಾಯಕರ ಪ್ರಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ

Seema.R | news18
Updated:April 29, 2019, 5:36 PM IST
40 ಟಿಎಂಸಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂದ ಮೋದಿ; ನೀವು ಕುದುರೆ ವ್ಯಾಪಾರ ಮಾಡುತ್ತಿದ್ದೀರೆಂದು ತೃಣಮೂಲ ತಿರುಗೇಟು
ನರೇಂದ್ರ ಮೋದಿ.
  • News18
  • Last Updated: April 29, 2019, 5:36 PM IST
  • Share this:
ಕೋಲ್ಕತ್ತಾ(ಏ. 29): ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್​ ಪಕ್ಷದ 40 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದು, ಶೀಘ್ರದಲ್ಲಿಯೇ ಅವರು ತಮ್ಮ ಕ್ಯಾಂಪನ್ನು ಬದಲಾಯಿಸಲಿದ್ದಾರೆ ಎಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸೆರಂಪೊರೆಯಲ್ಲಿ ಮಾತನಾಡಿದ ಅವರು, ದೀದಿ ಮೇ 29ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅಂದು ಎಲ್ಲೆಡೆ ಕಮಲ ಅರಳಲಿದೆ. ಈ ವೇಳೆ ನಿಮ್ಮ ಶಾಸಕರು ಕೂಡ ನಿಮ್ಮನ್ನು ಬಿಟ್ಟು ಓಡಿ ಹೋಗಲಿದ್ದಾರೆ. ಇಂದು ಕೂಡ ನಿಮ್ಮ ಪಕ್ಷದ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.

ಅಷ್ಟೇ ಅಲ್ಲದೇ, ಬಿಜೆಪಿಗೆ ಜನರು ಮತ ಹಾಕುವುದನ್ನು ಟಿಎಂಸಿ ಒತ್ತಾಯ ಪೂರ್ವಕವಾಗಿ ತಡೆ ಹಿಡಿಯುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರ ಪ್ರಚಾರಕ್ಕೆ ನಾಯಕರ ಪ್ರಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ: ಮೋದಿ, ಶಾರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ; ಕಾಂಗ್ರೆಸ್​ ಅರ್ಜಿ ಸ್ವೀಕರಿಸಿದ ಸುಪ್ರೀಂಕೋರ್ಟ್

ದೀದಿ ತಮ್ಮ ಸೋದರಳಿಯನನ್ನು ರಾಜಕೀಯವಾಗಿ ಬೆಳೆಸಬೇಕು ಎಂದು ಸ್ವಜನಪಕ್ಷಪಾತ ಮಾಡುತ್ತಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಸೀಟ್​ನಿಂದ ನೀವು ದೆಹಲಿ ತಲುಪಲು ಸಾಧ್ಯವಿಲ್ಲ. ದಿಲ್ಲಿ ಬಹಳ ದೂರವಿದೆ. ಅವರ ಸೋದರಳಿಯನಿಗೆ ರಾಜಕೀಯ ನೆಲೆ ಕಲ್ಪಿಸುವುದು ಮೂಲ ಉದ್ದೇಶ ಎಂದು ಮೋದಿ ಆರೋಪಿಸಿದರು.

ಮಮತಾ ಅವರ ಸೋದರಳಿಯ ಅಭಿಷೇಕ್ ಅವರು ಡೈಮಂಡ್​ ಹಾರ್ಬರ್ ಲೋಕಸಭಾ​ ಕ್ಷೇತ್ರದ ಹಾಲಿ ಸಂಸದರಾಗಿದ್ದು ಈ ಬಾರಿಯೂ ಟಿಎಂಸಿ ಟಿಕೆಟ್​ನಡಿ ಸ್ಪರ್ಧಿಸಿದ್ದಾರೆ.ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿಗಳು ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಟಿಎಂಸಿ ಶಾಸಕ ಡೆರೆಕ್​ ಒ ಬ್ರಿಯನ್​ ಎಚ್ಚರಿಕೆ ನೀಡಿದ್ಧಾರೆ.

ಮೋದಿ ಅವರನ್ನ ಎಕ್ಸ್​ಪೆರಿ ಬಾಬು (ಅವಧಿ ಮೀರಿದ ನಾಯಕ) ಎಂದು ತಮ್ಮ ಟ್ವೀಟ್​ನಲ್ಲಿ ಸಂಬೋಧಿಸಿದ ಟಿಎಂಸಿ ನಾಯಕ, ಮೋದಿ ಅವರ ಅವಧಿ ಮುಗಿದಿದೆ ಎಂದು ಟೀಕಿಸಿದ್ದಾರೆ.

First published: April 29, 2019, 5:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading