ನಾವು ಅರಾಜಕತೆ ಕಡೆಗೆ ಸಾಗುತ್ತಿದ್ದೇವೆಯೇ? ಅತ್ಯಾಚಾರಿಗಳ ಎನ್​ಕೌಂಟರ್ ಬಗ್ಗೆ ಮಾಜಿ ಸಿಜೆಐ ಆರ್​.ಎಂ.ಲೋಧಾ ಅಸಮಾಧಾನ

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೋಬ್ಡೆ ಕೂಡ ಈ ಎನ್​ಕೌಂಟರ್​ಅನ್ನು ಖಂಡಿಸಿದ್ದರು. ನ್ಯಾಯ ಎಂಬುದು ದ್ವೇಷ ಸಾಧನೆಗಾಗಿ ಇರುವುದಲ್ಲ. ದ್ವೇಷ ಸಾಧನೆಗಾಗಿ ಕಾನೂನು ಬಳಸಿದರೆ ನ್ಯಾಯ ತನ್ನ ಮೂಲ ಅರ್ಥವನ್ನೇ ಕಳೆದುಕೊಳ್ಳುತ್ತದೆ, ಎಂದು ಬೋಬ್ಡೆ ಹೇಳಿದ್ದರು.

HR Ramesh
Updated:December 10, 2019, 9:17 PM IST
ನಾವು ಅರಾಜಕತೆ ಕಡೆಗೆ ಸಾಗುತ್ತಿದ್ದೇವೆಯೇ? ಅತ್ಯಾಚಾರಿಗಳ ಎನ್​ಕೌಂಟರ್ ಬಗ್ಗೆ ಮಾಜಿ ಸಿಜೆಐ ಆರ್​.ಎಂ.ಲೋಧಾ ಅಸಮಾಧಾನ
ನಿವೃತ್ತ ಮುಖ್ಯನ್ಯಾಯಮೂರ್ತಿ ಆರ್.ಎಂ. ಲೋಧಾ
  • Share this:
ನವದೆಹಲಿ: ತೆಲಂಗಾಣ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿರುವುದನ್ನು ಖಂಡಿಸಿರುವ ಸುಪ್ರೀಂಕೋರ್ಟ್ ನಿವೃತ್ತ  ಮುಖ್ಯನ್ಯಾಯಮೂರ್ತಿ ಆರ್.ಎಂ.ಲೋಧಾ, ಇದು ದ್ವೇಷದ ಸಂಕೇತ ಎಂದು ಕರೆದಿದ್ದಾರೆ.

ಮಾನವ ಹಕ್ಕು ದಿನ ಸಂಭ್ರಮಾಚರಿಸುತ್ತಿರುವ ನಾವು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಬಳಲುತ್ತಿದ್ದೇವೆ. ಹೈದರಾಬಾದ್ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಹತ್ಯೆ ಮಾಡಲಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರತಿದಿನ ನಡೆಯುತ್ತಿರುತ್ತವೆ. ಇದು ಹಗೆತನದ ಸಂಕೇತವಾಗಿ ಸಮಾಜದಲ್ಲಿ ಪ್ರತಿಬಿಂಬಿತವಾಗುತ್ತದೆ. ನಾವು ಅರಾಜಕತೆ ಎಡೆಗೆ ಸಾಗುತ್ತಿದ್ದೇವೆ? ಎಂದು ಪ್ರಶ್ನೆ ಮಾಡಿದರು.

ಹೈದರಾಬಾದ್ ಸಮೀಪ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್​ಕೌಂಟರ್​ನಲ್ಲಿ ಕೊಂದ ಪೊಲೀಸರ ವಿರುದ್ಧ ತೆಲಂಗಾಣ ಹೈಕೋರ್ಟ್​ನಲ್ಲಿ ಎರಡು ಅರ್ಜಿಗಳು ದಾಖಲಾದ ನಂತರ ಆರ್​.ಎಂ. ಲೋಧಾ ಅವರು ಹೀಗೆ ಹೇಳಿದ್ದಾರೆ.

ಮಾನವ ಹಕ್ಕುಗಳ ದುರುಪಯೋಗದ ಭಯಾನಕ ಕಥೆಯಿಂದ ನಾವು ಆಘಾತಕ್ಕೊಳಗಾಗಲು ಕಾಯುವುದಿಲ್ಲ, ಬದಲಿಗೆ ಪ್ರತಿದಿನ ಅಧಿಕಾರದಲ್ಲಿರುವವರ ಕೃತ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತೇವೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು ಹೇಳಿದ್ದಾರೆ.

ಇದನ್ನು ಓದಿ: ನ್ಯಾಯ ದ್ವೇಷ ಸಾಧನೆಗೆ ಬಳಕೆಯಾದಲ್ಲಿ ಅದರ ಮೂಲ ಅರ್ಥವನ್ನೇ ಕಳೆದುಕೊಳ್ಳುತ್ತದೆ: ಸಿಜೆಐ ಬೋಬ್ಡೆ

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೋಬ್ಡೆ ಕೂಡ ಈ ಎನ್​ಕೌಂಟರ್​ಅನ್ನು ಖಂಡಿಸಿದ್ದರು. ನ್ಯಾಯ ಎಂಬುದು ದ್ವೇಷ ಸಾಧನೆಗಾಗಿ ಇರುವುದಲ್ಲ. ದ್ವೇಷ ಸಾಧನೆಗಾಗಿ ಕಾನೂನು ಬಳಸಿದರೆ ನ್ಯಾಯ ತನ್ನ ಮೂಲ ಅರ್ಥವನ್ನೇ ಕಳೆದುಕೊಳ್ಳುತ್ತದೆ," ಎಂದು ಬೋಬ್ಡೆ ಹೇಳಿದ್ದರು.

 
First published: December 10, 2019, 9:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading