Subramanian Swamy| ಚೀನಾ-ತಾಲಿಬಾನ್ ಆಯ್ತು ಈಗ ಬಾಂಗ್ಲಾವನ್ನೂ ಕಂಡು ಹೆದರುತ್ತಿದೆಯೇ ಭಾರತ?; ಸುಬ್ರಮಣಿಯನ್ ಸ್ವಾಮಿ ಚಾಟಿ

Bangladesh Communal Riots: ಬಾಂಗ್ಲಾದೇಶದಲ್ಲಿ ಕಳೆದ ಮಂಗಳವಾರದಿಂದ ಕೋಮುಗಲಭೆ ಭುಗಿಲೆದ್ದಿತ್ತು. ಇದರ ನಂತರ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ತೀವ್ರಗೊಂಡಿತ್ತು. ಇದರಲ್ಲಿ ಕನಿಷ್ಟ 6 ಜನ ಹಿಂದೂಗಳು ಕೊಲೆಯಾಗಿದ್ದಾರೆ.

ಸುಬ್ರಮಣಿಯನ್ ಸ್ವಾಮಿ.

ಸುಬ್ರಮಣಿಯನ್ ಸ್ವಾಮಿ.

 • Share this:
  ನವ ದೆಹಲಿ: ಬಾಂಗ್ಲಾದೇಶದಲ್ಲಿ (Bangladesh) ಕೋಮು ದಳ್ಳುರಿ (Communal Riots) ಕೈಮೀರಿದೆ. ಕುರ್​-ಆನ್​ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಮಂಗಳವಾರ ನೌಕಾಲಿಯಲ್ಲಿ ಬೃಹತ್​ ಸಂಖ್ಯೆಯ ಮುಸ್ಲೀಮರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ನಂತರ ಹಿಂಸಾಚಾರಕ್ಕೆ ತಿರುಗಿ ಹಿಂದೂಗಳ ದೇವಾಲಯ (Hindu Temple) ಮತ್ತು ನವರಾತ್ರಿ ಪೆಂಡಾಲ್​ಗಳನ್ನು ಗುರಿಯಾಗಿಸಿ ಉದ್ರಿಕ್ತರ ಗುಂಪು ದಾಳಿ ನಡೆಸಿತ್ತು. ಈ ದಾಳಿಯಲ್ಲಿ 6 ಜನ ಹಿಂದೂಗಳು (6 Hindu People Killed) ಮೃತಪಟ್ಟಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು 450ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಆದರೆ, ಈ ನೆರೆ ದೇಶದ ಈ ಕೋಮು ದಳ್ಳುರಿ ಮತ್ತು ಹಿಂದೂಗಳ ಹತ್ಯೆಯ ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ತುಟಿ ಬಿಚ್ಚಿಲ್ಲ. ಹೀಗಾಗಿ "ಬಾಂಗ್ಲಾದೇಶವನ್ನು ಕಂಡರೆ ಭಾರತ ಸರ್ಕಾರಕ್ಕೆ ಭಯವೇ?" ಎಂದು ಬಿಜೆಪಿ ನಾಯಕ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ನರೇಂದ್ರ ಮೋದಿ (Narendra Modi) ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

  ಬಾಂಗ್ಲಾವನ್ನು ಕಂಡು ಭಾರತ ಹೆದರುತ್ತಿದೆಯೇ?; ಸುಬ್ರಮಣಿಯನ್ ಸ್ವಾಮಿ:

  ಈ ಬಗ್ಗೆ ಟ್ವೀಟ್ ಮಾಡಿ ಕಿಡಿಕಾರಿರುವ ಸುಬ್ರಮಣಿಯನ್ ಸ್ವಾಮಿ, "ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯಾಕಾಂಡದ ಬಗ್ಗೆ ಕೇಂದ್ರ ಸರ್ಕಾರ ಯಾಕೆ ಪ್ರತಿಭಟಿಸುತ್ತಿಲ್ಲ? ಈ ಹಿಂದೆ ಚೀನಾ-ತಾಲಿಬಾನ್​ಗೆ ನಾವು ಹೆದರಿದ್ದೆವು, ಮಾತುಕತೆಕತೆಗೆ ಮುಂದಾಗಿದ್ದೆವು. ಈಗ ಬಾಂಗ್ಲಾದೇಶವನ್ನು ಕಂಡೂ ಭಾರತ ಹೆದರುತ್ತಿದೆಯೇ? ಮುಂದೆ ಮಾಲ್ಡೀವ್ಸ್​ಗೂ ನಾವು ಹೆದರುವ ಸ್ಥಿತಿ ಬಂದೊದಗಲಿದೆಯೇ?" ಎಂದು ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಬಾಂಗ್ಲಾದಲ್ಲಿ ಕೋಮು ದಳ್ಳುರಿ:

  ದುರ್ಗಾ ಪೂಜೆ ಆಚರಣೆಯ ಸಮಯ ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಬಾಂಗ್ಲಾದೇಶದಲ್ಲಿ ಕಳೆದ ಮಂಗಳವಾರದಿಂದ ಕೋಮುಗಲಭೆ ಭುಗಿಲೆದ್ದಿತ್ತು. ಇದರ ನಂತರ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ತೀವ್ರಗೊಂಡಿತ್ತು. ಇದರಲ್ಲಿ ಕನಿಷ್ಟ 6 ಜನ ಹಿಂದೂಗಳು ಕೊಲೆಯಾಗಿದ್ದಾರೆ.

  ಈ ಬಗ್ಗೆ ಸೋಮವಾರ ಟ್ವಿಟರ್‌ನಲ್ಲಿ ಪ್ರಶ್ನಿಸಿದ ಸುಬ್ರಮಣಿಯನ್ ಸ್ವಾಮಿ, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ನರಮೇಧದ ವಿಚಾರದಲ್ಲಿ ಬಿಜೆಪಿ ಸರ್ಕಾರ ಏಕೆ ಪ್ರತಿಭಟಿಸುತ್ತಿಲ್ಲ? ನಾವು ಬಾಂಗ್ಲಾದೇಶಕ್ಕೆ ಹೆದರುತ್ತಿದ್ದೇವೆಯೇ?" ಎಂದು ಅವರು ಕೇಳಿದ್ದಾರೆ.

  ಕೇಂದ್ರದ ಮುಂದೆ ಹಲವು ಪ್ರಶ್ನೆ:

  "ಲಡಾಖ್‌ನಲ್ಲಿ ಚೀನಾದ ಆಕ್ರಮಣದ ಬಗ್ಗೆ ಭಯಪಟ್ಟ ನಂತರ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿರುವುದರ ಬಗ್ಗೆ ನಾವು ಹೆದರಿದೆವು. ಈಗ ಅವರೊಂದಿಗೆ ಮಾತನಾಡಲು ಬಯಸುತ್ತಿದ್ದೇವೆ. ಮುಂದಕ್ಕೆ ನಾವು ಮಾಲ್ಡೀವ್ಸ್‌ಗೆ ಹೆದರಲಿದ್ದೇವೆಯೆ?" ಎಂದು ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ಮುಂದೆ ಪ್ರಶ್ನೆಗಳನ್ನಿಟ್ಟಿದ್ದಾರೆ.

  ಭಾನುವಾರ ತಡರಾತ್ರಿ, ಗುಂಪೊಂದು 66 ಮನೆಗಳಿಗೆ ಹಾನಿ ಮಾಡಿದ್ದು, ಕನಿಷ್ಠ 20 ಹಿಂದೂ ಧರ್ಮಿಯರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದೇಶದ ಬೇರೆ ಬೇರೆ ಕಡೆ ನಡೆದ ಪ್ರತ್ಯೇಕ ದಾಳಿಯಲ್ಲಿ ಆರು ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  ಕೋಮು ದಳ್ಳುರಿಯನ್ನು ನಿಯಂತ್ರಿಸಲು ಮುಂದಾದ ಬಾಂಗ್ಲಾ ಸರ್ಕಾರ:

  ಕೋಮು ಹಿಂಸೆಯನ್ನು ಪ್ರಚೋದಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ತನ್ನ ಗೃಹ ಸಚಿವರಿಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಮಂಗಳವಾರ ಸೂಚನೆ ನೀಡಿದ್ದಾರೆ. ಅವರು ದೇಶದ ಜನತೆಯೊಂದಿಗೆ ಸತ್ಯವನ್ನು ಪರಿಶೀಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ನಂಬಬೇಡಿ ಎಂದು ವಿನಂತಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.

  ಇದನ್ನೂ ಓದಿ: Dhanbad Judge Murder| ಧನ್ಬಾದ್ ನ್ಯಾಯಾಧೀಶರ ಕೊಲೆ ಪೂರ್ವ ನಿಯೋಜಿತ; ಚಾರ್ಚ್​ಶೀಟ್ ಫೈಲ್ ಮಾಡಿದ CBI

  ಈ ಮಧ್ಯೆ, ಆಡಳಿತಾರೂಢ ಅವಾಮಿ ಲೀಗ್ ಪಕ್ಷವು ‘ಸಾಮರಸ್ಯ ರ್‍ಯಾಲಿ’ಗಳನ್ನು ನಡೆಸುತ್ತಿದ್ದು, ಕೋಮುಗಲಭೆಗಳ ವಿರುದ್ಧ ಮಂಗಳವಾರ ದೇಶದಾದ್ಯಂತ ಶಾಂತಿ ಮೆರವಣಿಗೆಗಳನ್ನು ನಡೆಸಿದೆ.

  ಬಾಂಗ್ಲಾದಲ್ಲಿ ಶಾಂತಿ ರ್ಯಾಲಿ:

  "ಹಿಂದೂ ಸಹೋದರ ಸಹೋದರಿಯರೇ, ಭಯಪಡಬೇಡಿ. ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ನಿಮ್ಮೊಂದಿಗಿದ್ದಾರೆ. ಶೇಖ್ ಹಸೀನಾ ಸರ್ಕಾರವು ಅಲ್ಪಸಂಖ್ಯಾತ ಸ್ನೇಹಿ ಸರ್ಕಾರವಾಗಿದೆ" ಎಂದು ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್‌‌ ಅವರು ಪಕ್ಷದ ಕೇಂದ್ರ ಕಚೇರಿಯ ಮುಂದೆ ನಡೆದ ರ್‍ಯಾಲಿಯಲ್ಲಿ ಹೇಳಿದ್ದಾರೆ.

  ಇದನ್ನೂ ಓದಿ: Taliban behead: ಆಫ್ಘನ್ ಮಹಿಳಾ ವಾಲಿಬಾಲ್ ಆಟಗಾರ್ತಿಯ ಹತ್ಯೆ; ಶಿರಚ್ಚೇದ ಮಾಡಿ ಕ್ರೌರ್ಯ ಮೆರೆದ ತಾಲಿಬಾನಿಗಳು

  ಕೋಮುವಾದಿ ಶಕ್ತಿಗಳ ವಿರುದ್ಧ ಪ್ರತಿರೋಧವನ್ನು ಒಡ್ಡುವಂತೆ ಅವರು ತಮ್ಮ ಪಕ್ಷದ ಸದಸ್ಯರನ್ನು ಕೇಳಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. ಕೋಮುವಾದಿ ಶಕ್ತಿಗಳನ್ನು ಹೆಡೆಮುರಿ ಕಟ್ಟುವವರೆಗೂ ಆಡಳಿತ ಪಕ್ಷವು ಬೀದಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ. ದೇಶಾದ್ಯಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ಕೋಮುವಾದಿಗಳಿಗೆ ಸರಿಯಾದ ಉತ್ತರ ನೀಡಲು ಸಿದ್ಧರಾಗಿದ್ದಾರೆ ಎಂದು ಒಬೈದುಲ್ ಖಾದರ್‌‌ ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.
  Published by:MAshok Kumar
  First published: