HOME » NEWS » National-international » ARE THE OTHERS FROM BANGLADESH ASKS UDDHAV ON BJPS VACCINE PROMISE FOR BIHAR SESR

ಬಿಹಾರಕ್ಕೆ ಮಾತ್ರ ಉಚಿತ ಕೋವಿಡ್​ ಲಸಿಕೆ; ಉಳಿದ ರಾಜ್ಯಗಳು ಬಾಂಗ್ಲಾದೇಶಿಗರೇ; ಬಿಜೆಪಿಗೆ ಉದ್ಧವ್​ ಪ್ರಶ್ನೆ

ಅಧಿಕಾರಕ್ಕೆ ಬಂದರೆ ಬಿಹಾರದ ಜನರಿಗೆ ಉಚಿತ ಕೊರೋನಾ ಸೋಂಕಿನ ಲಸಿಕೆ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

news18-kannada
Updated:October 25, 2020, 11:32 PM IST
ಬಿಹಾರಕ್ಕೆ ಮಾತ್ರ ಉಚಿತ ಕೋವಿಡ್​ ಲಸಿಕೆ; ಉಳಿದ ರಾಜ್ಯಗಳು ಬಾಂಗ್ಲಾದೇಶಿಗರೇ; ಬಿಜೆಪಿಗೆ ಉದ್ಧವ್​ ಪ್ರಶ್ನೆ
ಉದ್ದವ್ ಠಾಕ್ರೆ.
  • Share this:
ಮುಂಬೈ (ಅ.25): ಬಿಹಾರ ಚುನಾವಣೆಯಲ್ಲಿ ಉಚಿತ ಕೋವಿಡ್​-19 ಲಸಿಕೆ ನೀಡುವ ಭರವಸೆಯನ್ನು ನೀಡಿರುವ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು ತಮ್ಮ ಮಾಜಿ ಮಿತ್ರ ಪಕ್ಷವಾದ ಬಿಜೆಪಿ ವಿರುದ್ಧ ಹರಿಹಾಯ್ದರು. ಅಧಿಕಾರಕ್ಕೆ ಬಂದರೆ ಬಿಹಾರದ ಜನರಿಗೆ ಉಚಿತ ಕೊರೋನಾ ಸೋಂಕಿನ ಲಸಿಕೆ ನೀಡುವುದಾಗಿ ಬಿಜೆಪಿ ಭರವಸೆ ನೀಡಿದ್ದಾರೆ. ಬೇರೆ ರಾಜ್ಯದ ಜನರರು ನಿಮಗೆ ಬಾಂಗ್ಲಾದೇಶಿಗಳೇ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ. ಕೇಂದ್ರದಲ್ಲಿದ್ದು ಎಲ್ಲರನ್ನು ಸರಿಸಮಾವಾಗಿ ನೋಡಬೇಕಾದ ನೀವು ಈ ರೀತಿ ಹೇಳಿಕೆ ನೀಡಲು ನಾಚಿಕೆ ಪಡಬೇಕು ಎಂದು ಟೀಕಿಸಿದ್ದಾರೆ.  ಸೇನಾ ದಸರಾ ವಾರ್ಷಿಕ ಮೆರವಣಿಗೆಯಲ್ಲಿ ಮಾತನಾಡಿದ ಅವರು, ನಾನು ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರವನ್ನು ಉರುಳಿಸಲಾಗುವುದು ಎಂದು ಹೇಳಲಾಗುತ್ತಿದೆ. ನಿಮಗೆ ಧೈರ್ಯವಾದರೆ, ಸರ್ಕಾರ ಬೀಳಿಸಿ ಎಂದು ಇದೇ ವೇಳೆ ಸವಾಲ್​ ಹಾಕಿದರು.

ಇದೇ ವೇಳೆ ಬಾಲಿವುಡ್​ ನಟಿ ಕಂಗನಾ ರನೌತ್​ ವಿರುದ್ಧ ಕೂಡ ಹರಿಹಾಯ್ದ ಠಾಕ್ರೆ, ಕೆಲವರು ಊಟಕ್ಕಾಗಿ ಮುಂಬೈಗೆ ಬರುತ್ತಾರೆ. ಮತ್ತು ಇದೇ ನಗರವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಟೀಕಿಸುತ್ತಾರೆ ಎಂದು ಕಿಡಿಕಾರಿದರು.

ಸುಶಾಂತ್​ ಸಿಂಗ್​ ರಜಪೂತ್​ ಸಾವಿನಲ್ಲಿ ಆದಿತ್ಯ ಠಾಕ್ರೆ ವಿರುದ್ಧ ಕೇಳಿ ಬಂದ ಆರೋಪ ಕುರಿಗು ಇದೇ ಮೊದಲ ಬಾರಿ ಮಾತನಾಡಿದ ಅವರು, ಬಿಹಾರದ ಮಗನಿಗಾಗಿ ನ್ಯಾಯಕ್ಕಾಗಿ ಅಳುತ್ತಿರುವವರು ಇದೇ ವೇಳೆ ಮಹಾರಾಷ್ಟ್ರದ ಮಗನ ಹತ್ಯೆ ಮಾಡುತ್ತಿದ್ದೀರಿ. ಆದಿತ್ಯನನ್ನು ತಪ್ಪಾಗಿ ತೋರಿಸಿ ಆದಿತ್ಯನನ್ನು ನಿಂದಿಸಿದ್ದೀರಿ. ನನ್ನ ಮಗ ಸ್ವಚ್ಛವಾಗಿದ್ದಾನೆ ಎಂದು ಇದೇ ವೇಳೆ ತಿಳಿಸಿದರು.

ಇದನ್ನು ಓದಿ: ಎಲ್​ಜೆಪಿ ಅಧಿಕಾರಕ್ಕೆ ಬಂದರೆ ನಿತೀಶ್​ ಕುಮಾರ್​ಗೆ ಜೈಲು; ಚಿರಾಗ್​ ಪಾಸ್ವಾನ್

ಜಿಎಸ್​ಟಿಯನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಅಗತ್ಯಬಿದ್ದಲ್ಲಿ ರಾಜ್ಯಗಳು ಇದರ ಪ್ರಯೋಜನ ಪಡೆಯುವಂತ ಬದಲಾವಣೆ ತರಬೇಕು ಎಂದರು.

ಮಹಾರಾಷ್ಟ್ರ ರಾಜ್ಯಪಾಲರಾ ಕೋಶ್ಯಾರಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಅವರು, ನೀವು ನಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೀರಾ. ಆದ್ದರಿಂದ ಮಹಾರಾಷ್ಟ್ರದಲ್ಲಿ ಗೋಮಾಂಸ ನಿಷೇಧಿಸುತ್ತೀರಾ. ಆದರೆ, ಗೋವಾದಲ್ಲಿ ನಿಮಗೆ ಗೋಮಾಂಸ ಮಾರಾಟ ಮಾಡುವುದಿಲ್ಲವೇ. ಇದು ನಿಮ್ಮ ಹಿಂದುತ್ವವೇ ಎಂದು ಪ್ರಶ್ನಿಸಿದರು.

ಈ ಹಿಂದೆ ಹಿಂದುತ್ವ ಕುರಿತು ಪತ್ರ ಸಮರ ನಡೆಸಿದ್ದ ರಾಜ್ಯಪಾಲ ಕೋಶ್ಯಾರಿ ಅವರು, ಹಿಂದುತ್ವದ ಪ್ರಬಲ ನಾಯಕರಾಗಿರುವ ಠಾಕ್ರೆ, ರಾಜ್ಯದಲ್ಲಿ ದೇವಾಲಯಗಳ ಬಾಗಿಲು ತೆರೆಯುವ ಸಂಬಂಧ ಯಾವುದದಾರೂ ದೈವಿಕ ಮುನ್ಸೂಚನೆಗೆ ಕಾಯುತ್ತಿದ್ದಾರಾ ಎಂದು ಅಚ್ಚರಿ ಪಡುತ್ತಿದ್ದೇನೆ. ದೇವಾಲಯಗಳ ತೆರೆಯಲು ದಿನಗಳನ್ನು ಅವರು ಮುಂದೂಡುತ್ತಿರುವುದನ್ನು ಗಮನಿಸಿದರೆ, ಅವರು ಜಾತ್ಯಾತೀತರಾದರೆ ಅಥವಾ ನೀವೇ ದ್ವೇಷಕ್ಕೆ ಒಳಗಾಗುತ್ತಿದ್ದೀರಾ  ಎಂದು ಪ್ರಶ್ನಿಸಿದ್ದರು.
Published by: Seema R
First published: October 25, 2020, 10:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories