• Home
  • »
  • News
  • »
  • national-international
  • »
  • Shipwreck: 1,200 ವರ್ಷ ಹಿಂದಿನ ಹಡಗಿನ ಅವಶೇಷ ಪತ್ತೆ, ಪುರಾತತ್ವ ಶಾಸ್ತ್ರಜ್ಞರು ಏನು ಹೇಳಿದ್ದಾರೆ ನೋಡಿ

Shipwreck: 1,200 ವರ್ಷ ಹಿಂದಿನ ಹಡಗಿನ ಅವಶೇಷ ಪತ್ತೆ, ಪುರಾತತ್ವ ಶಾಸ್ತ್ರಜ್ಞರು ಏನು ಹೇಳಿದ್ದಾರೆ ನೋಡಿ

ಹಡಗಿನ ಅವಶೇಷ

ಹಡಗಿನ ಅವಶೇಷ

ಇಸ್ರೇಲ್ ಕರಾವಳಿಯಲ್ಲಿ 1,200 ವರ್ಷಗಳಷ್ಟು ಹಳೆಯದಾದ ಈ ಹಡಗು ಅವಶೇಷ ಕ್ರಿ.ಶ.7 ಅಥವಾ 8ನೇ ಶತಮಾನದಲ್ಲಿ ಸಮುದ್ರದಲ್ಲಿ ಮುಳುಗಿದೆ ಎಂದು ಪುರಾತತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಇಸ್ರೇಲಿ ಕರಾವಳಿಯಲ್ಲಿ ಹಲವಾರು ಹಡಗುಗಳು ಮುಳುಗಿದ್ದು, ಸಹಸ್ರಮಾನಗಳಲ್ಲಿ ಮುಳುಗಿದ ಅನೇಕ ಹಡಗುಗಳಿಗೆ ನೆಲೆಯಾಗಿದೆ.

ಮುಂದೆ ಓದಿ ...
  • Share this:

 ಪುರಾತತ್ವ ಶಾಸ್ತ್ರಜ್ಞರು ಇತ್ತೀಚೆಗೆ ಇಸ್ರೇಲ್ ಕರಾವಳಿಯಲ್ಲಿ (Coast of Israel) ಸಾವಿರ ವರ್ಷಗಳಷ್ಟು ಹಳೆಯದಾದ ಹಡಗಿನ ಅವಶೇಷವೊಂದನ್ನು ಕಂಡುಕೊಂಡಿದ್ದಾರೆ. ಸುದ್ದಿ ಮಾಧ್ಯಮಗಳ ವರದಿ ಮಾಡಿರುವ ಪ್ರಕಾರ ಇದೊಂದು ವ್ಯಾಪಾರಿ ಹಡಗು (Merchant ship) ಎಂದು ತಿಳಿದುಬಂದಿದೆ. 1,200 ವರ್ಷಗಳಷ್ಟು ಹಳೆಯದಾದ ಈ ಹಡಗು ಅವಶೇಷ ಕ್ರಿ.ಶ.7 ಅಥವಾ 8ನೇ ಶತಮಾನದಲ್ಲಿ ಸಮುದ್ರದಲ್ಲಿ ಮುಳುಗಿದೆ ಎಂದು ಅಂದಾಜಿಸಲಾಗಿದೆ. ಇಸ್ರೇಲಿ ಕರಾವಳಿಯಲ್ಲಿ ಹಲವಾರು ಹಡಗುಗಳು ಮುಳುಗಿದ್ದು, ಸಹಸ್ರಮಾನಗಳಲ್ಲಿ ಮುಳುಗಿದ ಅನೇಕ ಹಡಗುಗಳಿಗೆ ನೆಲೆಯಾಗಿದೆ. 7 ಮತ್ತು 8ನೇ ಶತಮಾನದ ಈ ಅವಧಿಯಲ್ಲಿ ಪೂರ್ವ ಮೆಡಿಟರೇನಿಯನ್ ಪ್ರದೇಶಕ್ಕೆ (Mediterranean region) ತನ್ನ ಪ್ರಾಬಲ್ಯವನ್ನು ವಿಸ್ತರಿಸಿದ ಇಸ್ಲಾಮಿಕ್ ಗಣರಾಜ್ಯವು ಕ್ರಿಶ್ಚಿಯನ್ ಬೈಜಾಂಟೈನ್ ಸಾಮ್ರಾಜ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿತ್ತು.


ಈ ಪ್ರದೇಶದಲ್ಲಿ ಧಾರ್ಮಿಕ ಉದ್ವಿಗ್ನತೆಯ ಹೊರತಾಗಿಯೂ, ಮೆಡಿಟರೇನಿಯನ್ ಪ್ರದೇಶದಲ್ಲಿ ವಿಶೇಷವಾಗಿ ಸೈಪ್ರಸ್, ಈಜಿಪ್ಟ್, ಟರ್ಕಿ ಮತ್ತು ಉತ್ತರ ಆಫ್ರಿಕಾದ ಕರಾವಳಿ ಪ್ರದೇಶಗಳಲ್ಲಿ ವಾಣಿಜ್ಯವು ಪ್ರವರ್ಧಮಾನಕ್ಕೆ ಬಂದಿತು ಎಂದು ಹಡಗಿನ ಅವಶೇಷಗಳು ತೋರಿಸುತ್ತವೆ ಎಂದು ಪುರಾತತ್ತ್ವ ಶಾಸ್ತ್ರಜ್ಞರು ತಿಳಿಸಿದ್ದಾರೆ.


25 ಮೀಟರ್ ಉದ್ದವಿದ್ದ ಹಡುಗು
ಪುರಾತತ್ವ ಶಾಸ್ತ್ರಜ್ಞರು ವರದಿ ಮಾಡಿರುವ ಪ್ರಕಾರ, ಸಮುದ್ರದಲ್ಲಿ ಮುಳುಗಿದ ಹಡಗು ಸುಮಾರು 25 ಮೀಟರ್ ಉದ್ದ (82 ಅಡಿ) ಇತ್ತು ಎಂದು ಅಂದಾಜಿಸಲಾಗಿದೆ. ಮೆಡಿಟರೇನಿಯನ್‌ನತ್ತ ಸರಕುಗಳನ್ನು ಹೊತ್ತು ಸಾಗುತ್ತಿರುವಾಗ ಈ ನೌಕಾಘಾತ ಸಂಭವಿಸಿದೆ ಎಂದಿದ್ದಾರೆ. "ಪತ್ತೆಯಾದ ಹಡಗು ಅದರ ಗಾತ್ರದ ಮತ್ತು ಅವಧಿಯ ಕಾರಣ ಇದು ತುಂಬಾ ವಿಶೇಷವಾದ ಹಡಗಾಗಿದೆ" ಎಂದು ಹೈಫಾ ವಿಶ್ವವಿದ್ಯಾನಿಲಯದ ನಾಟಿಕಲ್ ಪುರಾತತ್ವಶಾಸ್ತ್ರಜ್ಞ ಡೆಬೊರಾ ಸಿವಿಕೆಲ್ ಅವರು ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: Ancient Burial Cave: ಕಂಚಿನ ಯುಗದ ಪ್ರಾಚೀನ ಸಮಾಧಿಯಿರುವ ಗುಹೆ ಪತ್ತೆ! ರೋಚಕ ಸಂಗತಿ ಬಯಲು


"ಮೆಡಿಟರೇನಿಯನ್‌ನಲ್ಲಿ ಯಾವುದೇ ಅಂತರರಾಷ್ಟ್ರೀಯ ವಾಣಿಜ್ಯ ಇರಲಿಲ್ಲ. ವಾಣಿಜ್ಯವು ಬಹುತೇಕ ಅಲ್ಲಿ ಸ್ಥಗಿತಗೊಂಡಿದೆ ಎಂದು ಇತಿಹಾಸದಲ್ಲಿ ಸಾಮಾನ್ಯವಾಗಿ ಉಲ್ಲೇಖಿಸಲಾಗಿದೆ. ಆದರೆ ಈ ಹಡಗಿನ ಮೂಲಕ ಸಣ್ಣ ಹಡಗುಗಳು ಕರಾವಳಿಯುದ್ದಕ್ಕೂ ನೌಕಾಯಾನ ಮಾಡುತ್ತಿದ್ದವು" ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ ಡೆಬೊರಾ ಸಿವಿಕೆಲ್.


ದಶಕದ ಮಹಾ ಶೋಧ
ಮುಳುಗು ತಜ್ಞರ ತಂಡವು ಸಮುದ್ರದಾಳದಲ್ಲಿ ಹಲವು ದಿನಗಳ ಕಾಲ ಶೋಧ ನಡೆಸಿ ಹಡಗಿನ ಅವಶೇಷಗಳನ್ನು ಪತ್ತೆ ಮಾಡಿದೆ. ಇದು ದಶಕದ ಮಹಾ ಶೋಧ ಎಂದೂ ಸಹ ಹೇಳಲಾಗಿದೆ.


ಸಮುದ್ರದ ಆಳಕ್ಕೆ ಧುಮುಕಿದ ನಂತರ, ಡೈವರ್‌ಗಳು ಪ್ರಾಚೀನ ಹಡಗಿನ ಭಗ್ನಾವಶೇಷಗಳ ವಿಸ್ಮಯಕಾರಿ ಕಲಾಕೃತಿಗಳನ್ನು ಪತ್ತೆ ಹಚ್ಚಿದರು. ಇದಲ್ಲದೆ, ಇದುವರೆಗೆ ಕಂಡುಹಿಡಿದ ಮುಳುಗಡೆಯಾದ ಅತಿದೊಡ್ಡ ಹಡಗು ಎಂದೂ ಸಹ ಪುರಾತತ್ವ ಶಾಸ್ತ್ರಜ್ಞರು ವರದಿ ಮಾಡಿದ್ದಾರೆ.


ಆಹಾರದ ಗುಡಾಣಗಳು ಪತ್ತೆ
1.5 ಮೀಟರ್ ಮರಳನ್ನು ತೆರವುಗೊಳಿಸಲು ನೀರೊಳಗಿನ ನಿರ್ವಾತಗಳನ್ನು ಬಳಸಿ, ಅವರು 200 ಕ್ಕೂ ಹೆಚ್ಚು ಆಹಾರ ಸಂಗ್ರಹಿಸಿಡುವ ಗುಡಾಣಗಳನ್ನು ಕಂಡುಕೊಂಡಿದ್ದಾರೆ. ಮೀನು ಸಾಸ್, ಹಲವಾರು ವಿಧದ ಆಲಿವ್ಗಳು, ಖರ್ಜೂರಗಳು ಮತ್ತು ಅಂಜೂರದ ಹಣ್ಣುಗಳನ್ನು ಒಳಗೊಂಡಂತೆ ಇನ್ನೂ ಆಹಾರವನ್ನು ಕೆಲವು ಮೆಡಿಟರೇನಿಯನ್ ಆಹಾರವನ್ನು ಒಳಗೊಂಡಿರುವ 200 ಕ್ಕೂ ಹೆಚ್ಚು ಗುಡಾಣಗಳನ್ನು ಪತ್ತೆ ಹಚ್ಚಿದ್ದಾರೆ.


ಇದನ್ನೂ ಓದಿ:  Meteorite: ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಲ್ಲಿ ಭೂಗ್ರಹದ ನೀರು ಪತ್ತೆ!


ಇಷ್ಟೇ ಅಲ್ಲದೇ ಹಗ್ಗಗಳು ಮತ್ತು ಮರದ ಬಾಚಣಿಗೆಗಳು, ಹಾಗೆಯೇ ಜೀರುಂಡೆಗಳು ಮತ್ತು ಆರು ಇಲಿಗಳ ಅವಶೇಷಗಳು ಸೇರಿದಂತೆ ಪ್ರಾಣಿಗಳು ಸಹ ಇದ್ದವು. ಕೆಲವು ಕಾರ್ಗೋ ಬೋರ್ ಕ್ರಿಶ್ಚಿಯನ್ ಬೈಜಾಂಟೈನ್ ಚರ್ಚ್‌ನ ಚಿಹ್ನೆಗಳು ಮತ್ತು ಅರೇಬಿಕ್ ಭಾಷೆಯಲ್ಲಿರುವ ಕೆಲ ಚಿಹ್ನೆಗಳು ಸಹ ಲಭಿಸಿವೆ.
ಉತ್ಖನನವನ್ನು ಇಸ್ರೇಲ್ ಸೈನ್ಸ್ ಫೌಂಡೇಶನ್, ಹಾನರ್ ಫ್ರಾಸ್ಟ್ ಫೌಂಡೇಶನ್ ಮತ್ತು ಟೆಕ್ಸಾಸ್ ಎ & ಎಂ ವಿಶ್ವವಿದ್ಯಾಲಯದ ನಾಟಿಕಲ್ ಆರ್ಕಿಯಾಲಜಿ ಸಂಸ್ಥೆಯು ನಡೆಸಿದೆ.

Published by:Ashwini Prabhu
First published: