ಸೌದಿ ಅರೇಬಿಯಾದ ಗುಹೆಯಲ್ಲಿ ಮೂಳೆಗಳ ರಾಶಿ: ಪುರಾತತ್ವ ಶಾಸ್ತ್ರಜ್ಞರು ಹೇಳೋದು ಹೀಗೆ..!

ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿರುವ ಈ ಮೂಳೆಗಳ ರಾಶಿಯು ಪುರಾತನ ಅರೇಬಿಕ್ ಇತಿಹಾಸ ಅರಿತುಕೊಳ್ಳಲು ಸಹಾಯ ಮಾಡುತ್ತದೆಯಂತೆ. ಮೂಳೆ ಸಂರಕ್ಷಣೆ ನಡೆಸಲು ಉಚಿತವಾಗಿಲ್ಲದ ಪ್ರದೇಶದಲ್ಲಿ ಉಮ್ ಜಿರ್ಸನ್‌ನಂತಹ ತಾಣಗಳು ಹೊಸ ಸುಳಿವು ನೀಡಿವೆಯಂತೆ ಎನ್ನುತ್ತಾರೆ ತಜ್ಞರು.

ಸೌದಿ ಅರೇಬಿಯಾದ ಗುಹೆಯಲ್ಲಿ ಮೂಳೆಗಳ ರಾಶಿ

ಸೌದಿ ಅರೇಬಿಯಾದ ಗುಹೆಯಲ್ಲಿ ಮೂಳೆಗಳ ರಾಶಿ

  • Share this:
1.5 ಕಿಲೋಮೀಟರ್ ಉದ್ದದ ಶಿಲಾರಸದ ಕೊಳವೆಯಾದ್ಯಂತ ಹರಡಿಕೊಂಡಿರುವ ಮೂಳೆಗಳ ಬೃಹತ್ ಸಂಗ್ರಹವನ್ನು ಪುರಾತತ್ವ ಶಾಸ್ತ್ರಜ್ಞರು ಅನ್ವೇಷಣೆ ಮಾಡಿದ್ದು ಈ ಗುಹೆಯನ್ನು ಉಮ್ ಜಿರ್ಸಾನ್ ಎಂದು ಕರೆದಿದ್ದಾರೆ. ಇದು ಜ್ವಾಲಾಮುಖಿಯ ಲಾವಾ ಹರಿವಿನಿಂದ ನಿರ್ಮಾಣವಾಗಿದ್ದು, ಮಾನವ ಸೇರಿದಂತೆ ಬೇರೆ ಬೇರೆ ಜೀವಿಗಳ ಲಕ್ಷಾಂತರ ಮೂಳೆಗಳನ್ನು ಈ ಗುಹೆ ಒಳಗೊಂಡಿದೆ. ಈ ಮೂಳೆಗಳನ್ನು 7,000 ವರ್ಷಗಳ ಅವಧಿಯಲ್ಲಿ ಪಟ್ಟೆ ಇರುವ ಕತ್ತೆಕಿರುಬಗಳು ತಿಂದು ಹಾಕಿರುವ ಕಳೇಬರಗಳು ಇರುವಂತೆ ತೋರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಸೌದಿ ಅರೇಬಿಯನ್ ಗುಹೆಯಲ್ಲಿ ಕಂಡುಬಂದಿರುವ ಮೂಳೆಗಳ ಬೃಹತ್ ಸಂಗ್ರಹವು ದನ, ಒಂಟೆ, ಕುದುರೆ, ದಂಶಕ, ಕ್ಯಾಪ್ರಿಡ್‌ಗಳು ಹಾಗೂ ಇತರ ಅನೇಕ ಪ್ರಾಣಿಗಳ ಮೂಳೆಗಳ ನಡುವೆ ಮಾನವನ ತಲೆ ಬುರುಡೆಯ ಅವಶೇಷಗಳು ಇದರಲ್ಲಿ ಸೇರಿವೆ. ಪುರಾತತ್ವ ಶಾಸ್ತ್ರಜ್ಞರು 1,917 ಮೂಳೆಗಳನ್ನು ಹಾಗೂ ಹಲ್ಲುಗಳನ್ನು ರೇಡಿಯೋ ಕಾರ್ಬನ್ ವಿಶ್ಲೇಷಣೆ ಮಾಡಿದಾಗ ಈ ಪಳೆಯುಳಿಕೆಗಳು 439ರಿಂದ 6,839 ವರ್ಷಗಳಷ್ಟು ಹಳೆಯದು ಎಂಬುದನ್ನು ಕಂಡುಕೊಂಡಿದ್ದಾರೆ. ಉಮ್ ಜಿರ್ಸಾನ್‌ನಂತಹ ಸ್ಥಳಗಳು ವಿಶ್ವದಲ್ಲಿ ಇನ್ನೂ ಸಾಕಷ್ಟಿವೆ ಎಂಬುದು ಅಧ್ಯಯನಕಾರರ ಅಭಿಪ್ರಾಯವಾಗಿದೆ.

ಲಾವಾ ಗುಹೆಯನ್ನು ಮಾಂಸಾಹಾರಿ ಜೀವಿಗಳು ಆಹಾರ ಸೇವನೆಗಾಗಿ ದೀರ್ಘಕಾಲದವರೆಗೆ ಬಳಸುತ್ತಿದ್ದವು ಎಂಬುದಾಗಿ ಸಂಶೋಧನೆಯು ಸೂಚಿಸುತ್ತದೆ. ಮೂಳೆಗಳ ಮೇಲಿರುವ ಕಚ್ಚಿದ ಗುರುತುಗಳು, ಕಡಿತದ ಗುರುತು ಜೀರ್ಣಕ್ರಿಯೆಯ ಸಂಕೇತಗಳನ್ನು ಗಮನಿಸಿದಾಗ ಪ್ರಾಥಮಿಕವಾಗಿ ಈ ಮೂಳೆಗಳನ್ನು ಪಟ್ಟೆಯುಳ್ಳ ಕತ್ತೆಕಿರುಬುಗಳದ್ದಾಗಿರಬಹುದು ಎಂಬುದನ್ನು ಕಂಡುಕೊಂಡಿದ್ದಾರೆ. ಈ ಮೂಳೆಗಳ ಸಂಗ್ರಹದಲ್ಲಿ ಕತ್ತೆಕಿರುಬಗಳ ಮೂಳೆಗಳೂ ಕಂಡುಬಂದಿರುವುದು ಆಶ್ಚರ್ಯಕಾರಿಯಾಗಿದೆ.

ಇದನ್ನೂ ಓದಿ: Rashmika Mandanna: ಮಾಡೋಕೆ ಕೆಲಸ ಇಲ್ಲ ಅಂದ್ರೆ ರಶ್ಮಿಕಾ ಮಂದಣ್ಣ ಏನೆಲ್ಲ ಮಾಡ್ತಾರೆ ನೋಡಿ..!

ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿರುವ ಈ ಮೂಳೆಗಳ ರಾಶಿಯು ಪುರಾತನ ಅರೇಬಿಕ್ ಇತಿಹಾಸ ಅರಿತುಕೊಳ್ಳಲು ಸಹಾಯ ಮಾಡುತ್ತದೆಯಂತೆ. ಮೂಳೆ ಸಂರಕ್ಷಣೆ ನಡೆಸಲು ಉಚಿತವಾಗಿಲ್ಲದ ಪ್ರದೇಶದಲ್ಲಿ ಉಮ್ ಜಿರ್ಸನ್‌ನಂತಹ ತಾಣಗಳು ಹೊಸ ಸುಳಿವು ನೀಡಿವೆ ಎಂದು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್​ಸ್ಟಿಟ್ಯೂಟ್ ಫಾರ್ ಕೆಮಿಕಲ್ ಇಕಾಲಜಿಯ ಪುರಾತತ್ವಶಾಸ್ತ್ರಜ್ಞ ಮ್ಯಾಥ್ಯೂ ಸ್ಟೀವರ್ಟ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಪುರಾತತ್ವ ಮತ್ತು ಮಾನವಶಾಸ್ತ್ರ ವಿಜ್ಞಾನದಲ್ಲಿ ಪ್ರಕಟವಾದ ಸಂಶೋಧನೆಯ ಲೇಖಕರಲ್ಲಿ ಸ್ಟೀವರ್ಟ್ ಕೂಡ ಒಬ್ಬರು.

ಈ ಅಧ್ಯಯನ ಕೇವಲ ಮಾಹಿತಿಯ ಒಂದು ಭಾಗವಾಗಿದೆ ಅಷ್ಟೇ. ಅವರ ಪ್ರಕಾರ ಉಮ್ ಜಿರ್ಸಾನ್ ಮತ್ತು ಅಂತಹುದೇ ತಾಣಗಳು ಈ ಪ್ರದೇಶದ ಪ್ರಾಚೀನ ಪರಿಸರ ವಿಜ್ಞಾನದ ಪ್ರಮುಖ ಒಳನೋಟಗಳನ್ನು ಹೊಂದಿವೆ ಎಂದಾಗಿದೆ.

ಇದನ್ನೂ ಓದಿ: Kannada Bigg Boss: ಕಿಚ್ಚನ ನಿರೂಪಣೆಯಲ್ಲಿ ಬಿಗ್​ ಬಾಸ್​: ಅಪ್ಡೇಟ್​ ಕೊಟ್ಟ ಪರಮೇಶ್ವರ ಗುಂಡ್ಕಲ್​..!

ಕತ್ತೆಕಿರುಬಗಳಿಂದ ಸಂಗ್ರಹಿಸಲಾದ ಮೂಳೆ ಸಂಗ್ರಹಕ್ಕೆ ಉಮ್ ಜಿರ್ಸಾನ್ ಒಂದೇ ಉದಾಹರಣೆಯಲ್ಲ. ಅಂತಹ ಮತ್ತೊಂದು ಮೂಳೆ ಸಂಗ್ರಹವು ಜೆಕ್ ಗಣರಾಜ್ಯದಲ್ಲಿದೆ.  ಅದೇ ಸ್ರಬ್ಸ್ಕೋ ಕ್ಲುಮ್-ಕೋಮಿನ್ ಗುಹೆ. ಇದನ್ನು 1942 ರಲ್ಲಿ ಕಂಡುಹಿಡಿಯಲಾಯಿತು ಮತ್ತು ದೊಡ್ಡ ಸಸ್ತನಿಗಳ 3,500ಕ್ಕೂ ಹೆಚ್ಚು ಮೂಳೆಗಳನ್ನು ಸಂರಕ್ಷಿಸಲಾಗಿದೆ. ಈ ಮೂಳೆಗಳನ್ನು ಕತ್ತೆಕಿರುಬಗಳು ತಂದು ಹಾಕಿವೆಯೇ ಅಥವಾ ಬೇರೆ ಎಲ್ಲಿಂದಲಾದರೂ ಬಂದವುಗಳೇ ಎಂಬುದು ಇನ್ನೂ ವಿಶ್ಲೇಷಣೆ ನಡೆಸಬೇಕಾಗಿದೆ. ಏಕೆಂದರೆ ಈ ಮೂಳೆಗಳ ಸಂಗ್ರಹದಲ್ಲಿ ಕತ್ತೆಕಿರುಬಗಳ ಮೂಳೆಗಳು ಸೇರಿಕೊಂಡಿದ್ದರಿಂದ ಅಧ್ಯಯನಗಳು ಇನ್ನಷ್ಟು ತನಿಖೆ ನಡೆಸಬೇಕಾಗಿದೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Anitha E
First published: