• Home
  • »
  • News
  • »
  • national-international
  • »
  • Chennai: 12,000 ವರ್ಷ ಹಳೆಯ ಕಲ್ಲಿನ ಉಪಕರಣಗಳು ಪತ್ತೆ! ಇವು ಬರೀ ಕಲ್ಲಲ್ಲ, ಅಮೂಲ್ಯ ನಿಧಿ!

Chennai: 12,000 ವರ್ಷ ಹಳೆಯ ಕಲ್ಲಿನ ಉಪಕರಣಗಳು ಪತ್ತೆ! ಇವು ಬರೀ ಕಲ್ಲಲ್ಲ, ಅಮೂಲ್ಯ ನಿಧಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇವುಗಳಲ್ಲಿ ವಿಷ್ಣುವಿನ ಪ್ರತಿಮೆಗಳು ಮತ್ತು ಶಿವಲಿಂಗವೂ ಸೇರಿದೆ ಎಂದು ಸಮೀಕ್ಷಕರು ತಿಳಿಸಿದ್ದಾರೆ.

  • Share this:

ಭಾರತೀಯ ಪುರಾತತ್ವ ಸರ್ವೇಕ್ಷಣೆಯ (Archaeological Survey of India)  ಚೆನ್ನೈ (Chennai) ವೃತ್ತ ವಲಯವು ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಖಜಾನೆಯನ್ನೇ ತನ್ನದಾಗಿಸಿಕೊಂಡಿದೆ. ಚೆನ್ನೈನ ಹೊರವಲಯದಲ್ಲಿರುವ ಒರಗಡಂನಿಂದ ಐದು ಕಿಲೋಮೀಟರ್ ದೂರದಲ್ಲಿರುವ ವಡಕ್ಕುಪಟ್ಟು ಎಂಬ ಹಳ್ಳಿಯಲ್ಲಿ ನಡೆಸಿದ ಉತ್ಖನನವು ಅಮೂಲ್ಯ ನಿಧಿಯನ್ನು ಬಹಿರಂಗಪಡಿಸಿದೆ. ಉಪಕರಣಗಳು, ಆಟಿಕೆಗಳು, ಚಿನ್ನದ ಮಣಿಗಳು, ಶಿಲ್ಪಗಳು, ನಾಣ್ಯಗಳು ಹೀಗೆ ಬರೋಬ್ಬರಿ ಸುಮಾರು 12,000 ವರ್ಷಗಳ ಹಿಂದಿನ ನಿಧಿಯನ್ನು ಕಂಡುಕೊಂಡಿದೆ. ಪಲ್ಲವ ರಾಜವಂಶದ ಆರಂಭಿಕ ಮತ್ತು ಅಂತ್ಯದ ಶಿಲ್ಪಗಳು ಮತ್ತು ಕಲ್ಲಿನ ಕೆತ್ತನೆಗಳು ನೆಲದ ಮೇಲೆ ಸರಳವಾಗಿ ಕಾಣುವಂತೆ ಕಂಡುಬಂದಿವೆ. ವಡಕ್ಕುಪಟ್ಟು ಗ್ರಾಮವು ಈಗ ಸಾಂಸ್ಕೃತಿಕವಾಗಿ ಮತ್ತು ಪುರಾತತ್ತ್ವ ಶಾಸ್ತ್ರದ ಪ್ರಮುಖ ಸ್ಥಳವಾಗಿದೆ ಎಂದು ಪುರಾತತ್ವ ಅಧಿಕಾರಿಗಳು ದೃಢಪಡಿಸಿದರು.


ಪ್ರಸ್ತುತ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಗುರುವನ್ಮೇಡುವಿನಲ್ಲಿ ಪುರಾತನ ಸಮಾಧಿ ಸ್ಥಳ ಪತ್ತೆಯಾದ ನಂತರ, ಇತಿಹಾಸ ಕಾಲೇಜು ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಪುರಾತತ್ತ್ವ ಶಾಸ್ತ್ರದ ಉತ್ಸಾಹಿಗಳು ವಡಕ್ಕುಪಟ್ಟುದಲ್ಲಿ ಕ್ಷೇತ್ರ ಅಧ್ಯಯನ ನಡೆಸುತ್ತಿದ್ದಾರೆ ಎಂದು ವರದಿಗಳು ಉಲ್ಲೇಖಿಸುತ್ತವೆ. ಎಎಸ್‌ಐ ತಂಡಗಳು ಕೆಲವು ತಿಂಗಳ ಹಿಂದೆಯೂ ಇದೇ ಸ್ಥಳದಲ್ಲಿ ಚಿನ್ನವನ್ನು ಪತ್ತೆ ಮಾಡಿತ್ತು.


ಪ್ರಾಚೀನ ಬೇಟೆಗಾರರು ಹಾಗೂ ಸಂಗ್ರಹಕಾರರು
ಈ ಆವಿಷ್ಕಾರಗಳಲ್ಲಿ ಪ್ರಮುಖವಾದವುಗಳು ಮಧ್ಯ ಶಿಲಾಯುಗಕ್ಕೆ ಸಂಬಂಧಪಟ್ಟವುಗಳಾಗಿವೆ. ಅಂದರೆ 12,000 ವರ್ಷಗಳಷ್ಟು ಹಳೆಯ ನಿಧಿಗಳಾಗಿವೆ. ಇವುಗಳಲ್ಲಿ ಕೆಲವೊಂದು ದಿನಬಳಕೆಯ ಪರಿಕರಗಳಾದ ಕತ್ತಿ, ಸುತ್ತಿಗೆ, ಕೈಕೊಡಲಿಗಳು ಸೇರಿವೆ.


ಚೆನ್ನೈ ಸರ್ಕಲ್‌ನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಎಂ. ಕಾಳಿಮುತ್ತು ಸುದ್ದಿ ಮಾಧ್ಯಮಕ್ಕೆ ತಿಳಿಸಿರುವಂತೆ ಉತ್ಖನನದಲ್ಲಿ ದೊರೆತಿರುವ ವಸ್ತುಗಳು ಪ್ರಾಚೀನ ಬೇಟೆಗಾರರು ಹಾಗೂ ಸಂಗ್ರಹಕಾರರು ಕಲ್ಲಿನ ಉಪಕರಣಗಳನ್ನು ತಯಾರಿಸುತ್ತಿದ್ದ ಸ್ಥಳವಾಗಿದೆ ಎಂಬಂತೆ ಕಂಡುಬರುತ್ತಿದೆ ಎಂದಾಗಿದೆ.


ಕಲ್ಲಿನ ಉಪಕರಣಗಳ ಬಳಕೆ
ಸಂಶೋಧಕರ ಪ್ರಕಾರ ಉಪಕರಣಗಳ ಮಧ್ಯಮ ಗಾತ್ರ ಹಾಗೂ ತೀಕ್ಷ್ಣತೆಯನ್ನು ನೋಡಿದಾಗ ಇದು ಕಲ್ಲಿನ ಚಕ್ಕೆಗಳಿಂದ ತಯಾರಿಸಿರುವುದಾಗಿ ತಿಳಿಸಿದ್ದಾರೆ. ಮಧ್ಯಶಿಲಾಯುಕ್ಕೆ ಸಂಬಂಧಪಟ್ಟ ಉಪಕರಣಗಳಾಗಿ ಇದು ತೋರುತ್ತಿದೆ ಎಂಬುದು ಅವರ ಅಭಿಪ್ರಾಯವಾಗಿದೆ.


ಕಾಳಿಮುತ್ತು ಹೇಳಿರುವಂತೆ ಇಲ್ಲಿ ವಾಸವಿದ್ದ ಹೆಚ್ಚು ಸಂಖ್ಯೆಯ ಜನರು ದೊಡ್ಡ ಪ್ರಮಾಣದಲ್ಲಿ ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದರು ಎಂಬುದನ್ನು ಸೂಚಿಸುತ್ತವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.


20 ಸದಸ್ಯರ ಉತ್ಖನನ ತಂಡ
ಸಮೀಕ್ಷಕರು, ಸಂಶೋಧಕರು ಮತ್ತು ಕಾರ್ಮಿಕರನ್ನು ಒಳಗೊಂಡ 20 ಸದಸ್ಯರ ಉತ್ಖನನ ತಂಡವು ಅದೇ ಗುಂಡಿಯ ಮೇಲಿನ ಪದರದಲ್ಲಿ ಮಣಿಗಳು, ಚಿನ್ನದ ಆಭರಣಗಳು, ಟೆರಾಕೋಟಾ ಆಟಿಕೆಗಳು, ನಾಣ್ಯಗಳು, ಮಡಕೆ ಚೂರುಗಳು ಮತ್ತು ಬಳೆ ಚೂರುಗಳ ಜೊತೆಗೆ ರೋಮನ್ ಆಂಫೊರಾ ಚೂರುಗಳು, ರೂಲೆಟ್ ಮಡಕೆಗಳು ಮತ್ತು ಗಾಜಿನ ಮಣಿಗಳನ್ನು ಪತ್ತೆ ಮಾಡಿವೆ.


ಸಂಗಮ್ ಯುಗ, ಅಂದರೆ 2,000 ವರ್ಷಗಳ ಹಿಂದಿನ ಈ ವಸ್ತುಗಳು, ತಜ್ಞರ ಪ್ರಕಾರ ಸಕ್ರಿಯ ವ್ಯಾಪಾರ ಮತ್ತು ವಾಣಿಜ್ಯವನ್ನು ಸೂಚಿಸುತ್ತವೆ.


ಇದನ್ನೂ ಓದಿ: Explained: 3 ಬಾರಿ ಬ್ಯಾನ್ ಆಗಿತ್ತು RSS; ನಿಷೇಧಿಸಿದ್ದಾದ್ರೂ ಯಾರು?


ಸುತ್ತಮುತ್ತಲಿನ ಪ್ರದೇಶವು ಪಲ್ಲವರ ಕಾಲಕ್ಕೆ ಸೇರಿದ ಶಿಲ್ಪಗಳು ಮತ್ತು ಕಲ್ಲಿನ ಕೆತ್ತನೆಗಳನ್ನು ಹೊಂದಿದ್ದು- 275 CE ನಿಂದ 897 CE ಯ ಅಂತ್ಯದ ಯುಗದವರೆಗಿನ ಕಾಲಾವಧಿಯನ್ನು ಸೂಚಿಸುತ್ತವೆ.


ಹೇಗಿವೆ ಗೊತ್ತೇ ಶಿಲ್ಪಗಳು?
ಅನೇಕ ಶಿಲ್ಪಗಳನ್ನು ಮರಳಿನ ಕಲ್ಲಿನಿಂದ ಮಾಡಲಾಗಿವೆ.  ಹವಾಮಾನದಿಂದ ಶಿಥಿಲಗೊಂಡಿವೆ. ಇವುಗಳಲ್ಲಿ ವಿಷ್ಣುವಿನ ಪ್ರತಿಮೆಗಳು ಮತ್ತು ಶಿವಲಿಂಗವೂ ಸೇರಿದೆ ಎಂದು ಸಮೀಕ್ಷಕರು ತಿಳಿಸಿದ್ದಾರೆ.


ಇದನ್ನೂ ಓದಿ: LED ಟಿವಿ ಸ್ಫೋಟಗೊಂಡು ಹದಿಹರೆಯದ ಯುವಕ ದುರ್ಮರಣ; ಗೋಡೆ ಪುಡಿಪುಡಿ


ನಾಲ್ಕು ವಿಭಿನ್ನ ಯುಗಗಳಿಗೆ ಸೇರಿದ ಕಲ್ಲಿನ ಉಪಕರಣಗಳು, ಕಲಾಕೃತಿಗಳು ಹಾಗೂ ಆಭರಣಗಳನ್ನು ಒಂದೇ ಸ್ಥಳದಲ್ಲಿ ಪತ್ತೆಮಾಡುವುದು ಅನನ್ಯವಾಗಿದೆ ಇದೊಂದು ಅತ್ಯಂತ ವಿಶೇಷವಾದುದು ಎಂಬುದಾಗಿ ಈ ಪುರಾತತ್ವ ಸ್ಥಳದ ಪ್ರಾಮುಖ್ಯತೆಯನ್ನು ಕಾಳಿಮುತ್ತು ಮಾಧ್ಯಮಕ್ಕೆ ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: