ನವದೆಹಲಿ(ಸೆ.24): ಇಂದು ಪ್ರಖ್ಯಾತ ಭಾರತೀಯ ಈಜುಗಾರ್ತಿ ಆರತಿ ಸಹಾ ಅವರ 80ನೇ ಜನ್ಮ ದಿನ. ಗೂಗಲ್ ತನ್ನ ಡೂಡಲ್ ಮೂಲಕ ಆರತಿ ಸಹಾ ಅವರಿಗೆ ಗೌರವ ಸಮರ್ಪಣೆ ಮಾಡಿದೆ. ಆರತಿ ಸಹಾ ಎಲ್ಲದರಲ್ಲೂ ಮೊದಲಿಗರೆಂದೇ ಪ್ರಸಿದ್ಧಿ ಪಡೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಆರತಿ ಸಹಾ ಅವರಿಗಿದೆ. ಅಂದಹಾಗೆ ಆರತಿ 1960ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಸಹಾ 1940ರ ಸೆಪ್ಟೆಂಬರ್ 24ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದರು. ಬಾಲ್ಯದಲ್ಲೇ ಈಜುಗಾರ್ತಿಯಾಗಬೇಕೆಂಬ ಕನಸನ್ನು ಕಂಡಿದ್ದರು. ಹೀಗಾಗಿ ಹೂಗ್ಲಿ ನದಿ ದಂಡೆಯಲ್ಲಿ ಪ್ರತಿದಿನ ಈಜು ಕಲಿಯುತ್ತಿದ್ದರು. ಬಳಿಕ ಭಾರತದ ಉತ್ತಮ ಈಜುಪಟುವಾದ ಸಚಿನ್ ನಾಗ್ ಎಂಬುವರ ಬಳಿ ಈಜು ತರಬೇತಿಗೆ ಸೇರಿಕೊಂಡರು. ಸಹಾ 5 ವರ್ಷದವರಾಗಿದ್ದಾಗ ಮೊದಲ ಬಾರಿಗೆ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದರು. 11 ವರ್ಷದ ವೇಳೆಗೆ ಸಹಾ ಹಲವು ಸ್ವಿಮ್ಮಿಂಗ್ ದಾಖಲೆಗಳನ್ನು ಮುರಿದಿದ್ದರು.
ಸಹಾಗೆ ತಮ್ಮ 12ನೇ ವಯಸ್ಸಿನಲ್ಲಿ ಅಂದರೆ 1952ರಲ್ಲಿ ಫಿನ್ಲ್ಯಾಂಡ್ನ ಹೆಲ್ಸಿಂಕಿಯಲ್ಲಿ ನಡೆದ ಸಮ್ಮರ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಭಾರತದ ಮೊದಲ ತಂಡವನ್ನು ಸೇರಿಕೊಂಡರು. ತಂಡವನ್ನು ರಚಿಸಿದ ನಾಲ್ಕು ಮಹಿಳೆಯರಲ್ಲಿ ಸಹಾ ಕೂಡ ಒಬ್ಬರು.
ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ ಕೊತ್ತೂರು ಮಂಜುನಾಥ್ ಕಣ್ಣು?; ಮಿಕ್ಸಿ ವಿತರಿಸುವ ಮೂಲಕ ಅಖಾಡಕ್ಕೆ
1952 ರಲ್ಲಿ ಇಂಗ್ಲಿಷ್ ಚಾನಲ್(ಕಾಲುವೆ) ದಾಟಲು ಯತ್ನಿಸಿದರು. ಆದರೆ ಆ ಪ್ರಯತ್ನ ವಿಫಲವಾಯಿತು. ಮೊದಲ ಯತ್ನದ ಬಳಿಕ ಸಹಾ ಯಶಸ್ವಿಯಾದರು. ಬಳಿಕ ಮೊದಲ ಇಂಗ್ಲಿಷ್ ಕಾಲುವೆ ದಾಟಿದ ಮೊದಲ ಏಷಿಯನ್ ಮಹಿಳೆ ಎಂಬ ಖ್ಯಾತಿ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ