ಚೆನ್ನೈ: ಸಂಗೀತ ಕ್ಷೇತ್ರದ ಅಗ್ರಗಣ್ಯ ಸಾಧಕ, ಆಸ್ಕರ್ ಅವಾರ್ಡ್ ಪುರಸ್ಕೃತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rahman) ಅವರು ಬಹುದೊಡ್ಡ ಅಭಿಮಾನಿ ವರ್ಗವನ್ನು ದೇಶ ಮಾತ್ರವಲ್ಲದೆ ವಿದೇಶದಲ್ಲೂ ಹೊಂದಿದ್ದಾರೆ. ಇವರ ಸಂಗೀತವನ್ನು ಇಷ್ಟಪಡದವರು ಬಹುಶಃ ಯಾರೂ ಇರಲಿಕ್ಕಿಲ್ಲ. ಅವರು ಸಂಯೋಜಿಸುವ ಸಂಗೀತವು ತುಂಬಾನೇ ಇಂಪಾಗಿದ್ದು, ಕೇಳುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಈಗ ಸಂಗೀತ ಲೋಕದ ಈ ಮಾಂತ್ರಿಕ (Music Director) ಎಆರ್ ರೆಹಮಾನ್ ಅವರು ತಮಿಳು ಭಾಷೆಯ (Tamil Language) ಅಭಿಮಾನದಿಂದ ಸುದ್ದಿಲ್ಲಿದ್ದಾರೆ.
ಹೆಂಡತಿ ಸೈರಾಗೆ ತಮಿಳಿನಲ್ಲಿ ಮಾತಾಡಲು ಹೇಳಿದ ರೆಹಮಾನ್
ಹೌದು.. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ, ಎಆರ್ ರೆಹಮಾನ್ ಅವರು ತಮ್ಮ ಪತ್ನಿ ಸೈರಾ ಬಾನು ಅವರಿಗೆ ಹಿಂದಿಯಲ್ಲಿ ಮಾತನಾಡದೆ ತಮಿಳಿನಲ್ಲಿ ಮಾತನಾಡುವಂತೆ ಹೇಳಿರೋದು ಸಾಕಷ್ಟು ಸುದ್ದಿಯಾಗಿದೆ. ಇದರ ವಿಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರೆಹಮಾನ್ ಮತ್ತು ಸೈರಾ ಬಾನು ಅವರ ಇಬ್ಬರ ನಡುವೆ ಇರುವ ಆ ಪ್ರೀತಿಯನ್ನು ನೋಡಿ ಅಭಿಮಾನಿಗಳು ವಿಸ್ಮಯಗೊಂಡಿದ್ದಾರೆ. ವಿಶೇಷವಾಗಿ ರೆಹಮಾನ್ ಅವರಿಗೆ ಮಾತೃಭಾಷೆಯ ಮೇಲೆ ಇರುವ ಪ್ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: Actress Supritha: 120 KG ಇದ್ದ ಸುಪ್ರಿತಾ ಇಷ್ಟೊಂದು ಫಿಟ್ ಆಗಿರೋದು ಹೇಗೆ, 8 ವರ್ಷದ ಮಗ ಇದ್ದಾನೆ ಅಂದ್ರೆ ನಂಬ್ತೀರಾ?
ರೆಹಮಾನ್ ಸಾಮಾನ್ಯವಾಗಿ ತುಂಬಾನೇ ಕಡಿಮೆ ಮಾತನಾಡುವ ವ್ಯಕ್ತಿ. ಚೆನ್ನೈನಲ್ಲಿ ನಡೆದ ವಿಕಟನ್ ಅವಾರ್ಡ್ ಶೋ ನಲ್ಲಿ ಅವರು ತಮ್ಮ ಪತ್ನಿ ಸೈರಾ ಬಾನು ಅವರೊಂದಿಗೆ ಭಾಗವಹಿಸಿದ್ದರು. ನಿರೂಪಕರು ಸೈರಾ ಬಾನು ಅವರನ್ನು ಮಾತನಾಡಲು ಹೇಳಿದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಲು ಹೊರಟಾಗ, ರೆಹಮಾನ್ ತಮ್ಮ ಪತ್ನಿಗೆ ‘ಹಿಂದಿಯಲ್ಲಿ ಮಾತನಾಡಬೇಡ, ತಮಿಳಿನಲ್ಲಿ ಮಾತನಾಡು' ಎಂದು ಅವರು ಹೇಳಿದರು.
ಸೈರಾ ಹೇಳಿದ್ದೇನು?
ಸೈರಾ ತನ್ನ ಸಂದರ್ಶನಗಳನ್ನು ಪದೇ ಪದೇ ನೋಡಲು ಇಷ್ಟಪಡುತ್ತಾರೆ ಎಂದು ರೆಹಮಾನ್ ಹೇಳಿದರು. ಈ ವೇಳೆ ಮಾತನಾಡಿದ ಸೈರಾ, 'ಕ್ಷಮಿಸಿ, ನಾನು ತಮಿಳಿನಲ್ಲಿ ನಿರರ್ಗಳವಾಗಿ ಮಾತನಾಡಲು ಸಾಧ್ಯವಿಲ್ಲ. ಆದ್ದರಿಂದ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ ಮತ್ತು ಅವರ ಧ್ವನಿಯನ್ನು ನಾನು ತುಂಬಾನೇ ಇಷ್ಟ ಪಡುತ್ತೇನೆ. ನಾನು ಅವರ ಧ್ವನಿಯನ್ನು ಪ್ರೀತಿಸುತ್ತೇನೆ. ನಾನು ಇಷ್ಟು ಮಾತ್ರ ಹೇಳಬಲ್ಲೆ' ಅಂತ ಸೈರಾ ಇಂಗ್ಲೀಷ್ ನಲ್ಲಿ ಹೇಳಿದರು.
ಹೀಗೆ ಹಲವಾರು ಬಾರಿ ರೆಹಮಾನ್ ತಮಿಳು ಭಾಷೆಯ ಮೇಲಿನ ಅಭಿಮಾನಕ್ಕೆ ಸುದ್ದಿಯಾಗಿದ್ದಾರೆ. ಹಿಂದಿ ಭಾಷೆಯ ಹೇರಿಕೆಯ ಬಗ್ಗೆಯೂ ಅವರು ಹಲವು ಬಾರಿ ಧ್ವನಿಯೆತ್ತಿದ್ದಾರೆ.
ರೆಹಮಾನ್ ಅವರಿಗೆ ತಮಿಳು ಭಾಷೆಯ ಬಗ್ಗೆ ಅಪಾರ ಅಭಿಮಾನವಂತೆ
ಈ ತಿಂಗಳ ಆರಂಭದಲ್ಲಿ ಮಲ್ಲಿಪೂ ಹಾಡಿಗೆ ಸತತ ಮೂರು ಪ್ರಶಸ್ತಿಗಳನ್ನು ಗೆದ್ದ ಮಧುಶ್ರೀ ಅವರನ್ನು ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದಿಸಿದರು. ಖ್ಯಾತ ಸಂಗೀತಗಾರ ಬಂಗಾಳಿ ಕುಟುಂಬದಿಂದ ಬಂದ ಗಾಯಕಿಯನ್ನು ತಮಿಳು ಭಾಷೆ ಕಲಿಯಲು ಪ್ರೋತ್ಸಾಹಿಸಿದರು. ಎಂದರೆ ಗಾಯಕಿಯನ್ನು ಅಭಿನಂದಿಸಿದ ರೆಹಮಾನ್ ಅವರು ತಮಾಷೆಯಾಗಿ ತಮಿಳು ಭಾಷೆಯನ್ನು ಕಲಿಯುವ ಬಗ್ಗೆ ಕೋರಾ ಲಿಂಕ್ ಅನ್ನು ಸಹ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದರು.
ಏಪ್ರಿಲ್ 28ರಂದು ಬಿಡುಗಡೆಯಾಗಲಿದೆಯಂತೆ ‘ಪೊನ್ನಿಯಿನ್ ಸೆಲ್ವನ್: 2’
ರೆಹಮಾನ್ ಅವರು ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್: 2’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರವು ಏಪ್ರಿಲ್ 28 ರಂದು ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ರೆಹಮಾನ್ ಅವರು ಪಾತು ತಲಾ ಮತ್ತು ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಸಂಗೀತದಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಗಳಿಸಿದರು. ಈ ವರ್ಷ ಶಿವಕಾರ್ತಿಕೇಯನ್ ಅವರ ಅಯಲಾನ್ ಮತ್ತು ಉದಯನಿಧಿ ಸ್ಟಾಲಿನ್ ಅವರ ಮಾಮಣ್ಣನ್ ಚಿತ್ರಗಳು ಬಿಡುಗಡೆಯಾಗಲಿವೆ. ಮೈದಾನ್, ಪಿಪ್ಪಾ, ಆಡುಜೀವಿತಂ, ಲಾಲ್ ಸಲಾಂ ಮತ್ತು ಗಾಂಧಿ ಟಾಕ್ಸ್ ಅವರ ಮುಂಬರುವ ಕೆಲವು ಚಲನಚಿತ್ರಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ