ನೀರು ಅಂದ್ರೆ ಅಲರ್ಜಿ: ಸ್ನಾನ ಮಾಡುವ ಪ್ರಕ್ರಿಯೆ ನೋವು ಕೊಡುತ್ತದೆಯಂತೆ ಈ ಯುವತಿಗೆ..!

ನೀರು ಅಂದರೆ ಕೊಂಚ ಭಯ ಪಡುವವರು ಇದ್ದಾರೆ. ಆದರೆ ಇಲ್ಲೊಬ್ಬರು ಯುವತಿಗೆ ನೀರು ಅಂದ್ರೇನೆ ಅಲರ್ಜಿ. ಸ್ನಾನ ಮಾಡೋ ಪ್ರಕ್ರಿಯೆ ತುಂಬಾ ನೋವು ನೀಡುತ್ತದೆಯಂತೆ.

ನೀರು ಅಂದ್ರೆ ಅಲರ್ಜಿ ಇವರಿಗೆ

ನೀರು ಅಂದ್ರೆ ಅಲರ್ಜಿ ಇವರಿಗೆ

  • Share this:
ನಮ್ಮಲ್ಲಿ ಕೆಲವರಿಗೆ ಬೇಗ ಹಾಸಿಗೆಯಿಂದ ಎದ್ದು ಸ್ನಾನ ಮಾಡುವುದೆಂದರೆ ತುಂಬಾ ಕಷ್ಟಕರವಾದ ಸಂಗತಿ. ಮನೆಯಲ್ಲಿರುವವರು ಅನೇಕ ಬಾರಿ ಹೇಳಿದಾಗ ತುಂಬಾ ಬಲವಂತದಿಂದ ಹೋಗಿ ಸ್ನಾನ ಮಾಡುವುದುಂಟು. ನೀರು ಎಲ್ಲ ಜೀವಿಗಳಿಗೆ ತುಂಬಾ ಮುಖ್ಯವಾದದ್ದು,  ಅದಕ್ಕೆ ನೀರನ್ನು ಜೀವಜಲ ಎನ್ನುತ್ತಾರೆ.  ಆದರೆ ಯುಕೆಯಲ್ಲಿರುವ 23 ವರ್ಷದ ಯುವತಿಗೆ ಸ್ನಾನ ಮಾಡುವುದು ಎಂದರೆ ತುಂಬಾ ನೋವಿನಿಂದ ಕೂಡಿದ  ಸಂಗತಿಯಂತೆ. ಸ್ನಾನ ಮಾಡುವುದು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಸ್ನಾನದ ನಂತರವೂ ತುಂಬಾ ನೋವಿನಿಂದ ಬಳಲುತ್ತಾರೆ. ಹೌದು, ಇವರಿಗೆ ನೀರು ಎಂದರೆ ಅಲರ್ಜಿ ಅಂತೆ. ಆಕ್ವಾಜೆನಿಕ್ ಪ್ರೂರಿಟಸ್ ಎನ್ನುವಂತಹ ಅಪರೂಪದ ಕಾಯಿಲೆಯಿಂದ ಈ ಯುವತಿ ಬಳಲುತ್ತಿದ್ದಾರೆ. ಯುವತಿಯ ಹೆಸರು ನಿಯಾ ಸೇಲ್ವೆ ಆಗಿದ್ದು, ಅವರು ತನ್ನ ಈ ಅಪರೂಪದ ನೀರಿನ ಅಲರ್ಜಿ ಕುರಿತು ವಿಡಿಯೋದಲ್ಲಿ ಹೇಳಿಕೊಂಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.


ವಿಡಿಯೋದಲ್ಲಿ ಯುವತಿಯು ನೀರನ್ನು ತನ್ನ ಮೈಗೆ ತಾಕಿಸಿದರೆ ಸಾಕು ಸ್ನಾನ ಮಾಡಿದ 5-10 ನಿಮಿಷಗಳಲ್ಲಿ ವಿಪರೀತ ತುರಿಕೆ ಮತ್ತು ನೋವು ಶುರುವಾಗುತ್ತದೆಯಂತೆ. ಸುಮಾರು ಮೂರು ಗಂಟೆಗಳವರೆಗೆ ನೋವು ಹಾಗೂ ತುರಿಕೆ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ.
ಸ್ನಾನಕ್ಕೂ ಮುಂಚಿತವಾಗಿ ಅವರು ವೈದ್ಯರು ನೀಡಿದಂತಹ ನಾನಾ ರೀತಿಯ ಕ್ರೀಮ್‌ಗಳನ್ನು ಹಚ್ಚಿಕೊಂಡು ಸ್ನಾನ ಮಾಡಿದರೂ ಅವರು ಈ ನೋವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಹೇಳಿಕೊಂಡಿರುವುದು ದುಃಖದ ಸಂಗತಿಯಾಗಿದೆ. ಸ್ನಾನ ಮಾಡುವ ಮೊದಲು ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರ ಬಗ್ಗೆ ವಿಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.

ನೀರಿನ ಸಂಪರ್ಕಕ್ಕೆ ಬಂದಾಗಲೆಲ್ಲಾ ಚರ್ಮದ ಮೇಲೆ ಗಾಯಗಳು ಮತ್ತು ವಿಪರೀತ ತುರಿಕೆಯಿಂದ ಬಳಲುತ್ತಿರುವುದಾಗಿ ವೈದ್ಯರು ಆಕೆಗೆ ಸೂಕ್ತ ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ. ತುಂಬಾ ದುಬಾರಿಯಾಗಿರುವ ಚಿಕಿತ್ಸೆ ಪಡೆಯಲು ಹಣ ಸಹಾಯ ಮಾಡಿ ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ ಈಕೆ.


23 ವರ್ಷದ ಯುವತಿ ತನ್ನ ಟಿಕ್‌ಟಾಕ್ ಖಾತೆಯಲ್ಲಿ ತಾನು ಸ್ನಾನ ಮಾಡುವ ಮೊದಲು ತೆಗೆದುಕೊಳ್ಳುವಂತಹ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮತ್ತು ಸ್ನಾನದ ನಂತರ ತೆಗೆದುಕೊಳ್ಳುವಂತಹ ಕೆಲವು ಕ್ರಮಗಳ ಬಗ್ಗೆ ಹೇಳಿಕೊಂಡಿದ್ದಾರೆ.


"ನೀರಿನ ಅಲರ್ಜಿ ಇರುವುದರಿಂದ ನಾನು ನನ್ನ ರಕ್ತದೊತ್ತಡ ಮತ್ತು ದೇಹದ ತಾಪಮಾನ ನೋಡಿಕೊಳ್ಳುವ ಮೂಲಕ ಪ್ರಾರಂಭಿಸುತ್ತೇನೆ. ನಂತರ ನನ್ನ ಸೂಕ್ಷ್ಮ ಚರ್ಮ ಸ್ನೇಹಿ ಕ್ರೀಮ್‌ಗಳನ್ನು ಹಚ್ಚಿಕೊಂಡು ನೀರಿಗೆ ಇಳಿಯುತ್ತೇನೆ. ಸ್ನಾನದ ನಂತರ ನನಗೆ ವಿಪರೀತ ಚರ್ಮ ತುರಿಕೆ ಮತ್ತು ನೋವು ಶುರುವಾಗುತ್ತದೆ. ಇದು ಸುಮಾರು ಗಂಟೆಗಳವರೆಗೆ ಹಾಗೆಯೆ ಇರುತ್ತದೆ", ಎಂದು ಹೇಳಿಕೊಂಡಿದ್ದಾರೆ.


"ನೋವು ಸಂಪೂರ್ಣವಾಗಿ ನಿಲ್ಲುವವರೆಗೂ ನಾನು ಅಕ್ಷರಶಃ ಹಾಸಿಗೆಯಲ್ಲಿಯೇ ಮಲಗಿರುತ್ತೇನೆ. ಈ ನೋವಿನಿಂದ ತುಂಬಾ ಆಯಾಸವಾದಂತೆ ಭಾಸವಾಗುತ್ತದೆ" ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada Season 8 Finale: ಫಿನಾಲೆಗೂ ಮುನ್ನವೇ ದೊಡ್ಡ ಮೊತ್ತದ ಹಣ ಪಡೆದ ಅರವಿಂದ್​ ಕೆ ಪಿ

ನಿಯಾ ತನ್ನ ನೋವನ್ನು ನಿವಾರಿಸಿಕೊಳ್ಳಲು ನೋವು ನಿವಾರಕಗಳು ಮತ್ತು ರೋಗನಿರೋಧಕ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಟಿಕ್‌ಟಾಕ್‌ನಲ್ಲಿ ಅವರನ್ನು ಫಾಲೋ ಮಾಡುತ್ತಿರುವ ಲಕ್ಷಾಂತರ ಜನರಿಗೆ ಮಾಹಿತಿಯುಕ್ತ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತರರ ಪ್ರಶ್ನೆಗಳಿಗೆ ಸಲಹೆಗಳನ್ನು ನೀಡುತ್ತಾರೆ. ಇತ್ತೀಚೆಗೆ, ನಿಯಾ ಜರ್ಮನಿಯ ಖಾಸಗಿ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಆಕೆಯದೇ ಆದ ಒಂದು ಪುಟವನ್ನು ಪ್ರಾರಂಭಿಸಿದ್ದಾರೆ.

First published: