HOME » NEWS » National-international » APPLE CO FOUNDER STEVE JOBS IN 1973 HANDWRITTEN JOB APPLICATION IS NOW UP FOR AUCTION STG HG

ಹರಾಜಿಗೆ ಬಂದ ಸ್ಟೀವ್ ಜಾಬ್ಸ್‌ ಉದ್ಯೋಗ ಅರ್ಜಿ; ಅಷ್ಟಕ್ಕೂ 1973ರ ಆ ಅರ್ಜಿಯಲ್ಲಿರೊದೇನು ಗೊತ್ತಾ?

Steve Jobs: ಸ್ಟೀವ್ ಜಾಬ್ ಅವರು 1973ರಲ್ಲಿ ತಮ್ಮ ಕೈಬರಹದ ಮೂಲಕ ಬರೆದಿದ್ದ ಉದ್ಯೋಗದ ಅರ್ಜಿಯನ್ನು ಇದೀಗ ಹರಾಜಿಗೆ ಇಡಲಾಗಿದೆ.

news18-kannada
Updated:February 19, 2021, 4:17 PM IST
ಹರಾಜಿಗೆ ಬಂದ ಸ್ಟೀವ್ ಜಾಬ್ಸ್‌ ಉದ್ಯೋಗ ಅರ್ಜಿ; ಅಷ್ಟಕ್ಕೂ 1973ರ ಆ ಅರ್ಜಿಯಲ್ಲಿರೊದೇನು ಗೊತ್ತಾ?
ಸ್ಟೀವ್ ಜಾಬ್ಸ್ / Steve Jobs
  • Share this:
ಆ್ಯಪಲ್ ಕಂಪನಿಯ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹೆಸರು ಇದೀಗ ಮತ್ತೆ ಸುದ್ದಿಯಲ್ಲಿದೆ. ಹೌದು, ಸ್ಟೀವ್ ಜಾಬ್ಸ್‌ಗೆ ಸಂಬಂಧಿಸಿದ ಅನೇಕ ಸ್ಮರಣಿಕೆಗಳು ಮತ್ತೆ ಮತ್ತೆ ಹರಾಜಾಗುತ್ತಲೇ ಇರುತ್ತವೆ. ಅದನ್ನು ಕೊಳ್ಳುವುದಕ್ಕೆ ಅನೇಕ ಗ್ರಾಹಕರು ನಾ ಮುಂದು ತಾ ಮುಂದು ಎನ್ನುತ್ತಾರೆ. ಇದೀಗ ಅಂತಹದೇ ಮತ್ತೊಂದು ಹರಾಜು ಪ್ರಕ್ರಿಯೆ ನಡೆಯುತ್ತಿದೆ.

ಹೌದು, ಸ್ಟೀವ್ ಜಾಬ್ ಅವರು 1973ರಲ್ಲಿ ತಮ್ಮ ಕೈಬರಹದ ಮೂಲಕ ಬರೆದಿದ್ದ ಉದ್ಯೋಗದ ಅರ್ಜಿಯನ್ನು ಇದೀಗ ಹರಾಜಿಗೆ ಇಡಲಾಗಿದೆ. ಈ ಏಕಪುಟದ ಪತ್ರದಲ್ಲಿ ಅವರು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ? ಮತ್ತು ಯಾವ ಕಂಪನಿಗೆ ಅರ್ಜಿ ಹಾಕುತ್ತಿದ್ದಾರೆ? ಎನ್ನುವುದನ್ನು ನಮೂದಿಸಿಲ್ಲ. ಹೀಗಾಗಿ ಈ ಅರ್ಜಿಯಲ್ಲಿ ಮಾಹಿತಿ ಅಪೂರ್ಣವಾಗಿದೆ.

ಈ ಉದ್ಯೋಗದ ಅರ್ಜಿಯಲ್ಲಿ ಸ್ಟೀವ್ ಜಾಬ್ಸ್ ರೀಡ್ಸ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿ ಎಂದು ನಮೂದಿಸಿದ್ದಾರೆ. ಇನ್ನು ಕೌಶಲ್ಯದ ಖಾಲಿ ಸ್ಥಳಗಳಲ್ಲಿ, ಕಂಪ್ಟೂಟರ್, ಕ್ಯಾಲ್ಕುಲೇಟರ್, ಡಿಸೈನ್ ಹಾಗೂ ತಂತ್ರಜ್ಞಾನದ ವಿಷಯಗಳನ್ನು ಸ್ಟೀವ್ ಜಾಬ್ಸ್ ತುಂಬಿದ್ದಾರೆ. ಅಷ್ಟೇ ಅಲ್ಲದೇ, ಎಲೆಕ್ಟ್ರಾನಿಕ್ ತಂತ್ರಜ್ಞಾನ ಹಾಗೂ ಡಿಸೈನ್ ಇಂಜಿನಿಯರಿಂಗ್ ಈ ಎರಡೂ ವಿಷಯಗಳಲ್ಲಿ ತಮಗೆ ವಿಶೇಷವಾದ ಕೌಶಲ್ಯ ಇರುವುದಾಗಿ ಸ್ಟೀವ್ ಜಾಬ್ಸ್ ನಮೂದಿಸಿದ್ದಾರೆ.

ಇನ್ನು ನಿಮ್ಮ ಬಳಿ ದೂರವಾಣಿ ಇದೆಯೇ ಎನ್ನುವ ಪ್ರಶ್ನೆಗೆ ಸ್ಟೀವ್ ಜಾಬ್ಸ್ ಇಲ್ಲ ಎಂದು, ಡ್ರೈವಿಂಗ್ ಲೈಸೆನ್ಸ್ ಕಾಲಮ್ ಅಡಿಯಲ್ಲಿ, ಡ್ರೈವಿಂಗ್ ಲೈಸೆನ್ಸ್ ಇದೆ ಎಂದು ನಮೂದಿಸಿದ್ದಾರೆ. ಇನ್ನು ಸಾರಿಗೆಗೆ ಸಂಬಂಧಿಸಿದ ಪ್ರಶ್ನೆಗೆ, ಸಾಧ್ಯ ಆದರೆ ಸಂಭವನೀಯವಲ್ಲ ಎಂದು ಅವರು ತಿಳಿಸಿದ್ದಾರೆ.ಅಮೇರಿಕದ ಒರೆಗಾಂವ್‌ನಲ್ಲಿರುವ ಪೋರ್ಟ್ಲ್ಯಾಂಡ್‌ನ ರೀಡ್ಸ್ ಕಾಲೇಜಿನಿಂದ ಡ್ರಾಪ್‌ಔಟ್ ಆದ ಸಂದರ್ಭದಲ್ಲಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು ಎನ್ನಲಾಗಿದೆ. ಒಂದು ವರ್ಷದ ನಂತರ ಟೆಕ್ನಿಷಿಯನ್ ಆಗಿ ಅಟಾರಿ ಎನ್ನುವ ಕಂಪನಿಯನ್ನು ಸೇರಿಕೊಂಡರು. 1976ರಲ್ಲಿ ಆಪಲ್ ಸ್ಥಾಪಿಸುವ ಮೊದಲು ಅವರು ಸ್ಟೀವ್ ವೋಜ್ನಿಯಾಕ್ ಅವರೊಂದಿಗೆ ಕೆಲಸ ಮಾಡಿದ್ದರು ಎಂದು ಚಾರ್ಟರ್ ಫೀಲ್ಡ್ಸ್ ಹರಾಜು ವೆಬ್‌ಸೈಟ್ ನಲ್ಲಿ ವಿವರಿಸಲಾಗಿದೆ.

ಈ ಅರ್ಜಿಯನ್ನು ಸಲ್ಲಿಸಿದ ಮೂರು ವರ್ಷಗಳಲ್ಲಿ ಸ್ಟೀವ್ ಜಾಬ್ಸ್ ತಮ್ಮ ಸ್ನೇಹಿತನ ಜೊತೆಗೂಡಿ ಆಪಲ್ ಕಂಪನಿ ಆರಂಭಿಸಿದ್ದರು.

ಇದೇ ಅರ್ಜಿ 2018ರಲ್ಲಿ $175,000 ಡಾಲರ್‌ಗೆ ಹರಾಜಾಗಿತ್ತು. ಇದೀಗ ಎಷ್ಟು ಮೌಲ್ಯಕ್ಕೆ ಹರಾಜಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
Published by: Harshith AS
First published: February 19, 2021, 4:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories