ಆ್ಯಪಲ್ ಹೊಸ ಇತಿಹಾಸ – ಒಂದು ಟ್ರಿಲಿಯನ್ ಡಾಲರ್ ಮುಟ್ಟಿದ ವಿಶ್ವದ ಮೊದಲ ಕಂಪನಿ


Updated:August 2, 2018, 11:17 PM IST
ಆ್ಯಪಲ್ ಹೊಸ ಇತಿಹಾಸ – ಒಂದು ಟ್ರಿಲಿಯನ್ ಡಾಲರ್ ಮುಟ್ಟಿದ ವಿಶ್ವದ ಮೊದಲ ಕಂಪನಿ

Updated: August 2, 2018, 11:17 PM IST
- ನ್ಯೂಸ್18 ಕನ್ನಡ

ಸ್ಯಾನ್ ಫ್ರಾನ್ಸಿಸ್ಕೋ(ಆ. 02): ಐಫೋನ್ ಮೂಲಕ ಸ್ಮಾರ್ಟ್​ಫೋನ್​ನಲ್ಲೇ ಕ್ರಾಂತಿಕಾರಿ ಬದಲಾವಣೆ ತಂದ ಅಮೆರಿಕದ ಆ್ಯಪಲ್ ಸಂಸ್ಥೆ ಈಗ ಹೊಸ ಮೈಲಿಗಲ್ಲು ಮುಟ್ಟಿದೆ. 1 ಟ್ರಿಲಿಯನ್ ಡಾಲರ್(10 ಲಕ್ಷ ಕೋಟಿ ಡಾಲರ್ – ಸುಮಾರು 685 ಲಕ್ಷ ಕೋಟಿ ರೂಪಾಯಿ) ಮೌಲ್ಯ ಮುಟ್ಟಿದ ವಿಶ್ವದ ಮೊದಲ ಕಂಪನಿ ಎನಿಸಿದೆ. ಈ ಮೂಲಕ ಅದು ವಿಶ್ವದ ಅತಿದೊಡ್ಡ ಕಂಪನಿ ಎಂಬ ಹೆಗ್ಗಳಿಕೆ ಪಡೆದಿದೆ. ಎರಡನೇ ತ್ರೈಮಾಸಿಕ ಅವಧಿಯಲ್ಲಿ ಆ್ಯಪಲ್ ಸಂಸ್ಥೆಯ ಲಾಭದ ಪ್ರಮಾಣ ಹೆಚ್ಚಾದ ವರದಿ ಬರುತ್ತಿದ್ದಂತೆಯೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಆ್ಯಪಲ್​ನ ಷೇರುಗಳ ಬೆಲೆ ಶೇ. 2.8ರಷ್ಟು ಹೆಚ್ಚಳವಾಯಿತು. ಇದರಿಂದಾಗಿ, ಆ್ಯಪಲ್​ನ ಒಟ್ಟಾರೆ ಮೌಲ್ಯವು 1 ಟ್ರಿಲಿಯನ್ ಡಾಲರ್ ಗಡಿ ಮುಟ್ಟಲು ಸಾಧ್ಯವಾಯಿತು.

ಅತೀ ಹೆಚ್ಚು ಜಿಡಿಪಿ ಹೊಂದಿದ ದೇಶಗಳ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿರುವ ಟರ್ಕಿ ದೇಶಕ್ಕಿಂತಲೂ ಆ್ಯಪಲ್ ಸಂಸ್ಥೆಯ ಮೌಲ್ಯ ಹೆಚ್ಚೇ ಇದೆ. ಭಾರತದ ಶೇ. 50ರಷ್ಟು ಜಿಡಿಪಿಯ ಮೌಲ್ಯವನ್ನ ಆ್ಯಪಲ್ ಹೊಂದಿದೆ. ಜಪಾನ್​ನದ್ದು 4.8 ಟ್ರಿಲಿಯನ್ ಡಾಲರ್ ಆರ್ಥಿಕತೆಯಾದರೆ, ಆ್ಯಪಲ್​ನದ್ದು 1 ಟ್ರಿಲಿಯನ್ ಡಾಲರ್ ಆಗಿದೆ.

ಕಂಪ್ಯೂಟರ್ ತಯಾರಿಯಲ್ಲಿ ದಶಕಗಳ ಕಾಲ ಕಳೆದ ಆ್ಯಪಲ್ ಸಂಸ್ಥೆ 2007ರಲ್ಲಿ ಐಫೋನ್ ಮೂಲಕ ಮೊಬೈಲ್ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿತು. ಮೈಕ್ರೋಸಾಫ್ಟ್, ಸ್ಯಾಮ್ಸುಂಗ್, ನೊಕಿಯಾ ಸಂಸ್ಥೆಗಳ ಅಜಾಗರೂಕತೆಯ ನಡುವೆ ಆ್ಯಪಲ್ ತನ್ನ ವಿಶೇಷ ತಂತ್ರಜ್ಞಾನದ ಮೂಲಕ ಮಿಂಚಿತು. ಆ್ಯಪಲ್ ಸ್ಮಾರ್ಟ್​ಫೋನ್​ಗಳು ದುಬಾರಿಯಾದರೂ ಜನರಿಗೆ ಪ್ರಿಯವಾದ ಮತ್ತು ಪ್ರತಿಷ್ಠಿತವಾದ ಮೊಬೈಲ್ ಎನಿಸಿತು. ಎದುರಾಳಿ ಸಂಸ್ಥೆಗಳು ತೀವ್ರ ಪೈಪೋಟಿ ನೀಡಿ ಅಗ್ಗದ ದರದಲ್ಲಿ ಸ್ಮಾರ್ಟ್​ಫೋನ್​ಗಳನ್ನ ನೀಡಿದರೂ ಐಫೋನ್​ನ ಓಟಕ್ಕೆ ಬ್ರೇಕ್ ಹಾಕಲಾಗಲಿಲ್ಲ.

ಆದರೆ, ಸ್ಮಾರ್ಟ್​ಫೋನ್ ಒಂದು ಸ್ಯಾಚುರೇಷನ್ ಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ಆ್ಯಪಲ್ ಸಂಸ್ಥೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳದಿದ್ದರೆ ಅದರ ಭರ್ಜರಿ ಓಟ ಮಂಕಾಗಲಿದೆ. ಅಮೇಜಾನ್ ಮೊದಲಾದ ಇಕಾಮರ್ಸ್ ಸಂಸ್ಥೆಗಳು ಈ ವಿಶ್ವ ಮಾರುಕಟ್ಟೆಯಲ್ಲಿ ಬಿಗಿಹಿಡಿತ ಸಾಧಿಸುತ್ತಿವೆ. ಮುಂದಿನ ದಿನಗಳಲ್ಲಿ ಕಂಪನಿಗಳ ಇ-ಫೈಟ್ ಕುತೂಹಲ ಮೂಡಿಸುವಂತಿದೆ.
First published:August 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...