• Home
 • »
 • News
 • »
 • national-international
 • »
 • Politics: ವಕೀಲನಾಗಿ ಅಮಿತ್ ಶಾ ಪರ ಹಾಜರಾಗಿದ್ದು ನಿಜ, ಆದರೆ; ನಿವೃತ್ತ ಸಿಜೆಐ ಉದಯ್ ಲಲಿತ್ ಅಚ್ಚರಿಯ ಮಾತು

Politics: ವಕೀಲನಾಗಿ ಅಮಿತ್ ಶಾ ಪರ ಹಾಜರಾಗಿದ್ದು ನಿಜ, ಆದರೆ; ನಿವೃತ್ತ ಸಿಜೆಐ ಉದಯ್ ಲಲಿತ್ ಅಚ್ಚರಿಯ ಮಾತು

ಯು. ಯು. ಲಲಿತ್

ಯು. ಯು. ಲಲಿತ್

ಮೇ 2014 ರಲ್ಲಿ ಸರ್ಕಾರ ಬದಲಾಗಿತ್ತು. ಆದರೆ ಇದಕ್ಕೂ ಒಂದು ತಿಂಗಳ ಮುಂಚೆ ಅಂದರೆ ಎಪ್ರಿಲ್‌ನಲ್ಲಿ ಈ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಪ್ರತಿನಿಧಿಸುವಂತೆ ಕೇಳಲಾಗಿತ್ತು. ಆಗ ಹಿಂದಿನ ಸರ್ಕಾರ ಅಧಿಕಾರದಲ್ಲಿತ್ತು. ಸರ್ಕಾರ ಬದಲಾಗುವುದಕ್ಕೂ ಮುನ್ನ ಪ್ರಕ್ರಿಯೆ ಆರಂಭವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂದೆ ಓದಿ ...
 • Trending Desk
 • Last Updated :
 • New Delhi, India
 • Share this:

  ನವದೆಹಲಿ: ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ (Sohrabuddin Sheikh Encounter Case) ಈಗಿನ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಪರ ಹಾಜರಾಗಿದ್ದು ನಿಜ. ಆದರೆ ತಾವು ಎಂದಿಗೂ ಪ್ರಮುಖ ವಕೀಲರಾಗಿಲ್ಲದ ಕಾರಣ ಇದು ಅಪ್ರಸ್ತುತ ಎಂದು ಇತ್ತೀಚೆಗಷ್ಟೇ ನಿವೃತ್ತರಾದ ಸುಪ್ರೀಂಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ (Justice UU Lilit) ಹೇಳಿದ್ದಾರೆ. ಸುದ್ದಿ ವಾಹಿನಿ ಜತೆ ಮಾತನಾಡಿದ ನ್ಯಾ. ಯು.ಯು ಲಲಿತ್, "ಹೌದು, ನಾನು ಅಮಿತ್ ಶಾ ಪರ ಹಾಜರಾಗಿದ್ದು ನಿಜ. ಆದರೆ ಪ್ರಕರಣದ ಮುಖ್ಯ ವಕೀಲರು ರಾಮ್ ಜೇಠ್ಮಲಾನಿ ಅವರಾಗಿದ್ದರಿಂದ ಅದು ಮುಖ್ಯವಾಗುವುದಿಲ್ಲ" ಎಂದು ತಿಳಿಸಿದ್ದಾರೆ.


  ಮೇ 2014 ರಲ್ಲಿ ಸರ್ಕಾರ ಬದಲಾಗಿತ್ತು. ಆದರೆ ಇದಕ್ಕೂ ಒಂದು ತಿಂಗಳ ಮುಂಚೆ ಅಂದರೆ ಎಪ್ರಿಲ್‌ನಲ್ಲಿ ಈ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಪ್ರತಿನಿಧಿಸುವಂತೆ ಕೇಳಲಾಗಿತ್ತು. ಆಗ ಹಿಂದಿನ ಸರ್ಕಾರ ಅಧಿಕಾರದಲ್ಲಿತ್ತು. ಸರ್ಕಾರ ಬದಲಾಗುವುದಕ್ಕೂ ಮುನ್ನ ಪ್ರಕ್ರಿಯೆ ಆರಂಭವಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.


  ಪ್ರಕರಣದ ಬಗ್ಗೆ ನಾನು ಸಂಕ್ಷಿಪ್ತ ವಿವರಣೆ ನೀಡಿದ್ದೆ. ಆದರೆ ಮುಖ್ಯ ವಕೀಲನಾಗಿರಲಿಲ್ಲ. ನಾನು ಅಮಿತ್ ಶಾ ಅವರ ಸಹ ಆರೋಪಿಗಳ ಪರವಾಗಿ ಪ್ರಕರಣದಲ್ಲಿ ಹಾಜರಾಗಿದ್ದೆ ಹೊರತು ಮುಖ್ಯ ಪ್ರಕರಣದಲ್ಲಿ ಅಲ್ಲ" ಎಂದು ವಿವರಿಸಿದ್ದಾರೆ.


  ಹೈ ಪ್ರೊಫೈಲ್ ಕೇಸ್‌ಗಳಲ್ಲಿ ವಕೀಲರಾಗಿದ್ದ ಯುಯು ಲಲಿತ್


  ಆಗಸ್ಟ್ 2014 ರಲ್ಲಿ ನ್ಯಾಯಾಧೀಶರಾಗಿ ಉನ್ನತೀಕರಿಸುವ ಮೊದಲು, ನ್ಯಾಯಮೂರ್ತಿ ಲಲಿತ್ ಅವರು ಹಲವಾರು ಉನ್ನತ ಮತ್ತು ವಿವಾದಾತ್ಮಕ ಪ್ರಕರಣಗಳಲ್ಲಿ ವಕೀಲರಾಗಿದ್ದರು. ಗುಜರಾತ್‌ನಲ್ಲಿ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಮ್ ಪ್ರಜಾಪತಿ ಅವರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಪರ ಹಾಜರಾಗಿದ್ದರು.‌


  ಯಾವ ಕೇಸ್‌ನಲ್ಲಿ ವಕೀಲರಾಗಿದ್ದರು?


  ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ಸೊಹ್ರಾಬುದ್ದೀನ್ ಶೇಖ್, ಅವರ ಪತ್ನಿ ಕೌಸರ್ಬಿ ಮತ್ತು ಸಹವರ್ತಿ ತುಳಸಿರಾಮ್ ಪ್ರಜಾಪತಿ ಅವರ ನಕಲಿ ಎನ್‌ಕೌಂಟರ್ ಹತ್ಯೆಗಳನ್ನು ಮುಚ್ಚಿಹಾಕಿದ್ದಾರೆ ಎಂದು ಆರೋಪ ಕೇಳಿಬಂದಾಗ ಯುಯು ಲಲಿತ್ ಆಗಿನ ಗುಜರಾತ್ ಗೃಹ ಸಚಿವ ಅಮಿತ್ ಶಾ ಅವರ ವಕೀಲರಾಗಿದ್ದರು.


  2014 ರಲ್ಲಿ ಪಿಎಂ ಮೋದಿ ನೇತೃತ್ವದ ಹೊಸದಾಗಿ ರಚನೆಯಾದ ಬಿಜೆಪಿ ಸರ್ಕಾರವು ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರನ್ನು ನ್ಯಾಯಮೂರ್ತಿ ಸ್ಥಾನಕ್ಕೆ ಪದೋನ್ನತಿಗೆ ಮಾಡಿದ್ದ ಶಿಫಾರಸನ್ನು ಹಿಂದಕ್ಕೆ ಕಳಿಸಿದ್ದ ನಂತರ ನ್ಯಾಯಾಧೀಶರಾಗಿ ಜಸ್ಟಿಸ್ ಲಲಿತ್ ಅವರನ್ನು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಮಾಡಲಾಗಿತ್ತು. ಶ್ರೀ ಸುಬ್ರಮಣಿಯಂ ಅವರ ಬದಲಿಯಾಗಿ ಶ್ರೀ ಲಲಿತ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ, ಅವರ ಹೆಸರನ್ನು ಬಿಜೆಪಿ ನೇತೃತ್ವದ ಸರ್ಕಾರವು ಮರುಪರಿಶೀಲನೆಗಾಗಿ ಹಿಂದಕ್ಕೆ ಕಳುಹಿಸಿತ್ತು ಎನ್ನಲಾಗಿದೆ.


  ಸೊಹ್ರಾಬುದ್ದೀನ್ ಶೇಖ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡುವಲ್ಲಿ ತನ್ನ ಪಾತ್ರಕ್ಕಾಗಿ "ಸ್ವಾತಂತ್ರ್ಯ ಮತ್ತು ಸಮಗ್ರತೆ" ಪ್ರದರ್ಶಿಸಲು ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಶ್ರೀ ಸುಬ್ರಮಣಿಯಂ ಆಗ ಮೋದಿ ಸರ್ಕಾರದ ವಿರುದ್ಧ ಆರೋಪಿಸಿದ್ದರು.


  49ನೇ ಸಿಜೆಐ ಆಗಿದ್ದ ಉದಯ್ ಉಮೇಶ್ ಲಲಿತ್


  ನಂತರ ಇತ್ತೀಚೆಗಷ್ಟೆ ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ನಿವೃತ್ತಿಯ ವಯಸ್ಸಿನ ಸಮೀಪದ ಕಾರಣ ಕೇವಲ ಮೂರು ತಿಂಗಳಿಗಿಂತ ಕಡಿಮೆ ಅವಧಿಗೆ ಸಿಜೆಐ ಆಗಿ ಕಾರ್ಯನಿರ್ವಹಿಸಿದರು.


  ಪ್ರಸ್ತುತ ಡಿ.ವೈ ಚಂದ್ರಚೂಡ್ ನೇಮಕ


  ಪ್ರಸ್ತುತ ಭಾರತದ ಸುಪ್ರೀಂ ಕೋರ್ಟ್ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ ಚಂದ್ರಚೂಡ್ ನೇಮಕಗೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಉದಯ್ ಉಮೇಶ್ ಲಲಿತ್ ಅವರ ಉತ್ತರಾಧಿಕಾರಿಯಾಗಿ ಎರಡು ವರ್ಷಗಳ ಅವಧಿಗೆ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ.

  Published by:Precilla Olivia Dias
  First published: