ಆಂಧ್ರದಲ್ಲಿ ಐಪಿಎಲ್​​ ಜತೆಗೆ ಎಲೆಕ್ಷನ್​​​ ಬೆಟ್ಟಿಂಗ್ ಜೋರು; ಗೆಲ್ಲುವ ಕ್ಷೇತ್ರಗಳ ಮೇಲೆ ಹಣದ ಹೊಳೆಯನ್ನೇ ಹರಿಸುತ್ತಿರುವ ಜನಸೇನಾ

ಇನ್ನು ಒಂದೇ ಹಂತದಲ್ಲಿ ಏಕಕಾಲದಲ್ಲಿ ಏಪ್ರಿಲ್​​ 11ರಂದು ಆಂಧ್ರದಲ್ಲಿ 175 ವಿಧಾನಸಭಾ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆದಿತ್ತು. ಇದೀಗ ಮೇ 23 ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಚಾರಗಳು ಜೋರಾಗಿವೆ.

Ganesh Nachikethu | news18
Updated:April 30, 2019, 4:49 PM IST
ಆಂಧ್ರದಲ್ಲಿ ಐಪಿಎಲ್​​ ಜತೆಗೆ ಎಲೆಕ್ಷನ್​​​ ಬೆಟ್ಟಿಂಗ್ ಜೋರು; ಗೆಲ್ಲುವ ಕ್ಷೇತ್ರಗಳ ಮೇಲೆ ಹಣದ ಹೊಳೆಯನ್ನೇ ಹರಿಸುತ್ತಿರುವ ಜನಸೇನಾ
ಪವನ್​ ಕಲ್ಯಾಣ್​
  • News18
  • Last Updated: April 30, 2019, 4:49 PM IST
  • Share this:
ಹೈದರಾಬಾದ್​​(ಏ.30:ಆಂಧ್ರಪ್ರದೇಶದಲ್ಲಿ ಐಪಿಎಲ್​​ ಜತೆಗೆ ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ? ಎಂಬುದರ ಸುತ್ತ ಬೆಟ್ಟಿಂಗ್​ ಜೋರಾಗಿಯೇ ನಡೆಯುತ್ತಿದೆ. ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ, ವೈಎಸ್​​ಆರ್​​​ ಕಾಂಗ್ರೆಸ್​​ ಮತ್ತು ಜನಸೇನಾ ಕಾರ್ಯಕರ್ತರು ಬೆಟ್ಟಿಂಗ್​​​ ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ಟಿಡಿಪಿ ಮತ್ತು ವೈಎಸ್ಆರ್​​ ಕಾಂಗ್ರೆಸ್​​ ಈ ಎರಡರಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದಲ್ಲಿ ಜನಸೇನಾ ಬೆಂಬಲ ಅತ್ಯಗತ್ಯ ಎಂಬುದು ನಟ ಪವನ್ ಕಲ್ಯಾಣ್​​ ಅಭಿಮಾನಿಗಳ ಲೆಕ್ಕಚಾರವಾಗಿದೆ. ಹಾಗಾಗಿ ಪವನ್​​​ ಪಕ್ಷ ಕೆಲವು ಕ್ಷೇತ್ರಗಳಲ್ಲಿ ಪಕ್ಕಾ ಗೆಲುವು ಸಾಧಿಸಲಿದೆ ಎಂದು ಭಾವಿಸಿದಂತಿದೆ.

ಅತ್ತ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎನ್ನುತ್ತಿದ್ದರೇ, ಇತ್ತ ಸಮೀಕ್ಷೆಗಳು ಈ ಬಾರಿ ಜನ ಜಗನ್​​ ಕಡೆಗೆ ಮುಖ ಮಾಡಿದ್ದಾರೆ ಎಂದು ಭವಿಷ್ಯ ನುಡಿಯುತ್ತಿವೆ. ಹಾಗಾಗಿ ಉಭಯ ಪಕ್ಷಗಳ ಕಾರ್ಯಕರ್ತರು ಭಾರೀ ಬೆಟ್ಟಿಂಗ್​​ ದಂಧೆಗಿಳಿದಿದ್ದಾರೆ. ಇನ್ನೊಂದೆಡೆ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಒಂದಷ್ಟು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಈ ಎರಡು ಪಕ್ಷಗಳಿಗಿಂತ ಜನಸೇನಾ ಒಂದೆಜ್ಜೆ ಮುಂದೋಗಿ ತಾನು ಗೆಲ್ಲಬಹುದಾದ ಕ್ಷೇತ್ರಗಳ ಮೇಲೆ ಬೆಟ್ಟಿಂಗ್​​ ಹಾಕುತ್ತಿದೆ.

ಟಿಡಿಪಿ ಮತ್ತು ವೈಎಸ್​​ಆರ್​​ ಕಾಂಗ್ರೆಸ್​​ ಅಧಿಕಾರಕ್ಕೆ ಬರಲಿದೆಯಾ? ಇಲ್ಲವೇ ಎಂದು ಬೆಟ್ಟಿಂಗ್​​ ನಡೆಯುತ್ತಿದ್ದರೇ, ಜನಸೇನಾ ಮಾತ್ರ ಕೆಲವು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಭಾವಿಸಿದೆ. ಕೋಸ್ಟಲ್​​ ಆಂಧ್ರದಲ್ಲಿ ಕೃಷ್ಣಾ, ಈಸ್ಟ್​​​ ಗೋದಾವರಿ, ವಿಶಾಖಪಟ್ಟಣ ಜಿಲ್ಲೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ನರಸಾಪುರಂ(ಪಶ್ಚಿಮ​​ ಗೋದಾವರಿ), ರಾಜೊಲು(ಈಸ್ಟ್​​ ಗೋದಾವರಿ), ಪೆಡನ್​​(ಕೃಷ್ಣಾ ಜಿಲ್ಲಾ), ಅವನಿಗಡ್ಡ(ಕೃಷ್ಣಾ), ವಿಜಯವಾಡ ಪೂರ್ವ ಕ್ಷೇತ್ರದಲ್ಲಿ ಗೆಲ್ಲುವುದು ನಾವೇ ಎಂದು ಪವನ್​​ ಅಭಿಮಾನಿಗಳು ಅದಮ್ಯ ವಿಶ್ವಾಸ ಹೊಂದಿದ್ದಾರೆ. ಹಾಗೆಯೇ ಜನಸೇನಾ ಅಧ್ಯಕ್ಷ ಪವನ್​​ ಕಲ್ಯಾಣ್​​ ಅವರು ಸ್ಪರ್ಧಿಸಿರುವ ಭೀಮಾವರಂ, ಗಾಜುವಾಕ ಕ್ಷೇತ್ರಗಳಲ್ಲಿ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Karnataka SSLC Result 2019: ಹಾಸನ ಪ್ರಥಮ, ಈ ಬಾರಿಯೂ ಯಾದಗಿರಿಗೆ ಕಡೇ ಸ್ಥಾನ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರ ಗದ್ದುಗೆ ಹಿಡಿಯಲು ಜನಸೇನಾ ಬೆಂಬಲ ಪಡೆಯಲೇಬೇಕು. ನಮ್ಮ ಪಕ್ಷದ ನೆರವಿನೊಂದಿಗೆ ಮಾತ್ರ ಸರ್ಕಾರ ರಚಿಸಲು ಸಾಧ್ಯ ಎಂದು ಜನಸೇನಾ ಕಾರ್ಯಕರ್ತರು ಎಲ್ಲೆಡೆ ಬೆಟ್ಟಿಂಗ್​​ಗೆ ಮುಂದಾಗಿದ್ಧಾರೆ. ಅಲ್ಲದೇ ಈ ಮಧ್ಯೆ ಇನ್ನೊಂದು ಸ್ಥಳೀಯ ಸಂಸ್ಥೆ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಜನಸೇನಾ 14 ರಿಂದ 22 ವಿಧಾನಸಭಾ ಸೀಟುಗಳು ಮತ್ತು 2 ರಿಂದ 3 ಲೋಕಸಭಾ ಸೀಟುಗಳು ಗೆಲ್ಲಲಿದೆ ಎಂದು ಹೇಳಿದೆ. ಈ ಬಗೆಗಿನ ಆಡಿಯೋ ಕೂಡ ವೈರಲ್​​ ಆಗಿದ್ದು, ಇಲ್ಲಿ ನಡೆಯುತ್ತಿರುವ ಬೆಟ್ಟಿಂಗ್​​ಗೆ ಮತ್ತಷ್ಟು ಪುಷ್ಠಿ ನೀಡಿದೆ.

ಇದನ್ನೂ ಓದಿ: SSLC Results: ಎ ಗ್ರೇಡ್, ಶೇ.100, ಶೇ. 0 ಫಲಿತಾಂಶ; ಬಾಲಕ ಬಾಲಕಿಯರು, ಸರಕಾರಿ ಶಾಲೆಗಳ ರಿಸಲ್ಟ್; ಇಲ್ಲಿದೆ ಹೈಲೈಟ್ಸ್

ಇನ್ನು ಒಂದೇ ಹಂತದಲ್ಲಿ ಏಕಕಾಲದಲ್ಲಿ ಏಪ್ರಿಲ್​​ 11ರಂದು ಆಂಧ್ರದಲ್ಲಿ 175 ವಿಧಾನಸಭಾ ಹಾಗೂ 25 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆದಿತ್ತು. ಇದೀಗ ಮೇ 23 ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಚಾರಗಳು ಜೋರಾಗಿವೆ.-----------
First published:April 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading