Punjab: ಪಂಜಾಬ್​ ಕಾಂಗ್ರೆಸ್​ ಬಿಕ್ಕಟ್ಟು: ಸೋನಿಯಾ ಅವರ ಯಾವ ತೀರ್ಮಾನಕ್ಕೂ ನಾನು ಬದ್ಧ- ಕ್ಯಾಪ್ಟನ್​ ಅಮರೀಂದರ್​

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಮರಿಂದರ್ ಅವರ ಭೇಟಿಯ ಮೊದಲು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದರು. ಕಳೆದ ವಾರ ಸಿಧು ಮತ್ತು ರಾಹುಲ್ ಗಾಂಧಿ ನಡುವೆ ಸಭೆ ಆಯೋಜಿಸುವಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರ ವಹಿಸಿದ್ದರು.

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

 • Share this:
  ಇಡೀ ದೇಶದಲ್ಲಿ ಕಾಂಗ್ರೆಸ್​ ಅಧಿಕಾರದಲ್ಲಿ ಇರುವ ಬೆರಳೆಣಿಕೆ ರಾಜ್ಯಗಳಲ್ಲಿ ಪಂಚ ನದಿಗಳ ನಾಡು ಪಂಜಾಬ್​ ಕೂಡ ಒಂದು. ಕಳೆದ ಹಲವು ದಿನಗಳಿಂದ ಪಂಜಾಬ್​ ರಾಜ್ಯ ಕಾಂಗ್ರೆಸ್ಸಿನಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಅದನ್ನು ಆರಿಸಲು ಅನೇಕ ದಿನಗಳಿಂದ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ. 

  ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಮತ್ತು ನವಜೋತ್​ ಸಿಂಗ್​ ಸಿದು ನಡುವಿನ ಭಿನ್ನಭಿಪ್ರಾಯ ಈಗ ಸೋನಿಯಾಗಾಂಧಿ ಅವರ ಬಳಿಗೆ ಹೋಗಿದೆ.

  ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಈಗ ಚೆಂಡು ಸೋನಿಯಾ ಅವರ ಬಳಿ ಇದೆ ಅವರು ಯಾವ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ದ ಎಂದು ಹೇಳಿದ್ದಾರೆ.

  ಪಂಜಾಬ್ ಕಾಂಗ್ರೆಸ್ ಎದುರಿಸುತ್ತಿರುವ ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಪಕ್ಷದ ಮುಖ್ಯಸ್ಥರೊಂದಿಗೆ ಒಂದುವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ಪಂಜಾಬ್ ಸಿಎಂ ಈ ವಿಷಯ ತಿಳಿಸಿದರು.


  "ಪಂಜಾಬಿನಲ್ಲಿ ಪಕ್ಷದ  ಭವಿಷ್ಯದ ಬಗ್ಗೆ ಸೋನಿಯಾ ಗಾಂಧಿ ಅವರು ಏನೇ ನಿರ್ಧರಿಸಿದರೂ ಅದು ನಮಗೆ ಸ್ವೀಕಾರಾರ್ಹವಾಗಿರುತ್ತದೆ ಮತ್ತು ನಾವು ಅವರ ನಿರ್ಧಾರಕ್ಕೆ ಅಡ್ಡ ಬರುವುದಿಲ್ಲ" ಎಂದು ಅವರು ಸಭೆಯ ನಂತರ ದೆಹಲಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

  ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು ಅವರ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಳ್ಳಲಾಯಿತೆ ಅಥವಾ ಇತರೇ ಏನಾದರೂ ಪ್ರಸ್ತಾಪವನ್ನು ಚರ್ಚಿಸಲಾಗಿದೆಯೇ ಎಂದು ಕೇಳಿದಾಗ, ಅಮರಿಂದರ್ ನಕಾರಾತ್ಮಕವಾಗಿ ಉತ್ತರಿಸಿದರು.

  "ನವಜೋತ್ ಸಿಂಗ್ ಸಿಧು ಬಗ್ಗೆ ನನಗೆ ಏನೂ ತಿಳಿದಿಲ್ಲ, ನಾವು ಸರ್ಕಾರ ಮತ್ತು ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ನಾನು ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿ ಮತ್ತು ಪಂಜಾಬ್‌ಗೆ ಸಂಬಂಧಿಸಿದ ರಾಜಕೀಯ ವಿಷಯಗಳ ಬಗ್ಗೆ ಮಾತ್ರ ಚರ್ಚಿಸಿದೆ. ಅಭಿವೃದ್ಧಿ ರಂಗದಲ್ಲಿ ಆಕೆಗೆ ಏನು ಬೇಕೋ ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ನಾನು ಪಕ್ಷದ ಅಧ್ಯಕ್ಷರಿಗೆ ಹೇಳಿದ್ದೆನೆ ’’ ಎಂದರು.

  ಕಳೆದ ಕೆಲವು ವಾರಗಳಿಂದ ಸಿಧು ಮತ್ತು ಅಮರಿಂದರ್ ಪರಸ್ಪರ ಜಗಳವಾಡುತ್ತಿದ್ದಾರೆ ಮತ್ತು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ನಾಯಕತ್ವವು ಬಿಕ್ಕಟ್ಟನ್ನು ನಿವಾರಿಸಲು ಪ್ರಯತ್ನಿಸುತ್ತಿದೆ. ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ರಾಜ್ಯಸಭಾ ಸಂಸದ, ಹಿರಿಯ ನಾಯಕ ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದ ಸೋನಿಯಾ ಗಾಂಧಿ ಅವರ ಸಮಿತಿಯನ್ನೂ ರಚಿಸಲಾಗಿದೆ.


  ಇಬ್ಬರು ನಾಯಕರುಗಳ ನಡುವೆ ರಾಜಿ ಮಾಡಲು ಯಾವುದೇ ಒಪ್ಪಂದದ ರೂಪಿಸಲಾಗಿದೆಯೆ ಅದಕ್ಕೆ  ಅಮರಿಂದರ್ ಒಪ್ಪಿದರೇ ಈ ಬಗ್ಗೆ ಅವರು ಮೌನವಾಗಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.


  ಇತ್ತೀಚಿನ ದಿನಗಳಲ್ಲಿ ಅಮರಿಂದರ್​ ತೆಗೆದುಕೊಳ್ಳಲಾದ ಹಲವಾರು ಮಹತ್ವದ ಕ್ಯಾಬಿನೆಟ್ ನಿರ್ಧಾರಗಳೊಂದಿಗೆ ಪಂಜಾಬ್ ಸಿಎಂ ತಾವು ಏನು ಕಡಿಮೆ ಅಲ್ಲ ಎನ್ನುವ ಸಂದೇಶವನ್ನು ರವಅನಿಸಿದ್ದಾರೆ ಅಲ್ಲದೆ ಕೋಟ್ಕಾಪುರ ಶೂಟೌಟ್​ ಪ್ರಕರಣದ ಬಗ್ಗೆ ಮರು ತನಿಖೆಗೆ ಆದೇಶಿಸುವ ಸಾದ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಮರಿಂದರ್ ಅವರ ಭೇಟಿಯ ಮೊದಲು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದರು. ಕಳೆದ ವಾರ ಸಿಧು ಮತ್ತು ರಾಹುಲ್ ಗಾಂಧಿ ನಡುವೆ ಸಭೆ ಆಯೋಜಿಸುವಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರ ವಹಿಸಿದ್ದರು.


  ಇದನ್ನೂ ಓದಿ: US military: ರಾತ್ರೋ ರಾತ್ರಿ ಅಫ್ಘಾನ್​ನ​ ಬಾಗ್ರಾಮ್ ವಾಯುನೆಲೆ​ ತೊರೆದ ಅಮೆರಿಕ ಸೇನಾಪಡೆ; ಕಾರಣವೇನು?

  ಪ್ರಿಯಾಂಕಾ ಅವರು ಈ ಹಿಂದೆ ಸಿಧು ಅವರೊಂದಿಗೆ ತಾವು ನಡೆಸಿದ್ದ ಭೇಟಿಯ ಬಗ್ಗೆ ತಾಯಿಗೆ ವಿವರಿಸಿದರು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಇತ್ತೀಚೆಗೆ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಿದರೂ ಅಮರೀಂದರ್ ಮತ್ತು ಸಿಧು ನಡುವಿನ ಕಿತ್ತಾಟ ಸದ್ಯಕ್ಕೆ ಬಗೆಹರಿಯುವ ಸಾಧ್ಯತೆ ಕಡಿಮೆ ಇದೆ ಎಂದು ಮೂಲಗಳು ಹೇಳಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: