ಮಗುವಿನ ದುಬಾರಿ ಔಷಧಕ್ಕಾಗಿ 16 ಕೋಟಿ ನಿಧಿ ಸಂಗ್ರಹಿಸಿದ ಅನುಷ್ಕಾ ಶರ್ಮಾ - ವಿರಾಟ್​ ಕೊಹ್ಲಿ

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಅಯಾನ್ಶ್​​ ಎನ್ನುವ ಮಗುವಿಗೆ 16 ಕೋಟಿ ಮೌಲ್ಯದ ಔಷಧಿ ಪಡೆಯಲು ಅಭಿಯಾನ ನಡೆಸಿ, ಎಳೆ ಕಂದನ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ ಸ್ಟಾರ್ ಕಪಲ್​ ಅನುಷ್ಕಾ ಹಾಗೂ ವಿರಾಟ್​ ಕೊಹ್ಲಿ.

ವಿರುಷ್ಕಾ ದಂಪತಿ ಇದೇ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

ವಿರುಷ್ಕಾ ದಂಪತಿ ಇದೇ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

  • Share this:
ಅನುಷ್ಕಾ ಶರ್ಮಾ ಮತ್ತು ವಿರಾಟ್​​ ಕೊಹ್ಲಿ ದಂಪತಿ ಕಪಲ್​ ಗೋಲ್ಸ್​​ ಫಾಲೋ ಮಾಡುವವರಿಗೆ ನಿಜಕ್ಕೂ ಮಾದರಿ ಇದ್ದಂತೆ. ಸಮಾಜದಲ್ಲಿ ಗಣ್ಯರ ಸ್ಥಾನಕ್ಕೆ ತಲುಪಿ ಅದನ್ನು ಯಶಸ್ವಿಯಾಗಿ ನಿಭಾಯಿಸುವುದು ಎಂದರೆ ಸಮಾಜಕ್ಕೆ ಅಗತ್ಯವಿದ್ದಾಗ ನೆರವಾಗುವುದು ಎನ್ನುವುದನ್ನು ಈ ದಂಪತಿ ಸಾಬೀತು ಮಾಡಿದ್ದಾರೆ. ಅಯಾನ್ಶ್​​ ಎನ್ನುವ ಮಗುವಿನ ಕಾಯಿಲೆಗೆ 16 ಕೋಟಿ ಮೌಲ್ಯದ ಔಷಧಿ ಪಡೆಯಲು ಅಭಿಯಾನ ನಡೆಸಿ ಎಳೆ ಕಂದನ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ ಈ ಸ್ಟಾರ್ ಕಪಲ್​. ಬೆನ್ನುಮೂಳೆಯ ಸ್ನಾಯು ಕ್ಷೀಣತೆ (ಎಸ್‌ಪಿಎ) ಹೊಂದಿರುವ ಅಯಾನ್ಶ್​ ಗುಪ್ತಾ ಎನ್ನುವ ಮಗುವಿಗೆ ಅಪರೂಪದ ಅನುವಂಶಿಕ ಕಾಯಿಲೆ ಇದೆ. ಅದರ ಚಿಕಿತ್ಸೆಗೆ 16 ಕೋಟಿ ರೂ. ಬೆಲೆಯ ಜೋಲ್ಗೆನ್​ಸ್ಮಾ ಔಷಧಿಗಾಗಿ ನಿಧಿ ಸಂಗ್ರಹ ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಬಾಲಿವುಡ್​ ಸೆಲೆಬ್ರಿಟಿ ಅನುಷ್ಕಾ ಶರ್ಮಾ ಮತ್ತು ಅವರ ಪತಿ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹಣ ಸಂಗ್ರಹಿಸಲು ಸಹಕರಿಸಿದ್ದಾರೆ.

ಅಯಾನ್ಶ್​ಗೆ ಔಷಧಿ ಖರೀದಿಸಲು ದೇಣಿಗೆ ಸಂಗ್ರಹಿಸಲು, ಅವರ ಪೋಷಕರು Ayaansh Fights SMA ಎಂಬ ಟ್ವಿಟ್ಟರ್‌ ಖಾತೆಯನ್ನು ಪ್ರಾರಂಭಿಸಿದ್ದರು. ಭಾನುವಾರ ತಾವು ಔಷಧಿಯನ್ನು ಪಡೆಯಲು ಸಾಧ್ಯವಾಯಿತು ಎಂದು ಟ್ವೀಟ್​ ಮಾಡಿದ್ದಾರೆ.

"ನಾವು #saveayaanshgupta ಎಂದು ಪ್ರಾರಂಭಿಸಿದ ಅಭಿಯಾನವು ಇಷ್ಟು ಸುಂದರವಾಗಿ ಮುಕ್ತಾಯವಾಗುತ್ತದೆ ಎಂದು ಭಾವಿಸಿರಲಿಲ್ಲ. #Ayaansh ಗೆ ನಾವು #Zolgensma ಔಷಧಿಯನ್ನು ಪಡೆಯಲು ಈ ಹಂತವನ್ನು ತಲುಪಿದ್ದು ಬಹಳ ಖುಷಿ ನೀಡಿದೆ ಎಂದು ಹೇಳಿದ್ದಾರೆ. ನಿಜಕ್ಕೂ ಇದೊಂದು ಅದ್ಭುತವಾದ ವಿಜಯದ ಕ್ಷಣಗಳು ಎಂದಿದ್ದಾರೆ. ಔಷಧಿ ಕೊಳ್ಳಲು 16 ಕೋಟಿ ರೂ. ಸಂಗ್ರಹಿಸಿದ್ದೇವೆ. ಈ ನಿಟ್ಟಿನಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪೂಲ್​ ಪಾರ್ಟಿಯಲ್ಲಿ ಸುಹಾನಾ ಖಾನ್​: ವೈರಲ್​ ಆಗುತ್ತಿವೆ ಶಾರುಖ್​ ಖಾನ್​ ಮಗಳ ಫೋಟೋಗಳು..!

ಅಲ್ಲದೇ ಈ ಒಳ್ಳೆಯ ಅಭಿಯಾನವನ್ನು ಬೆಂಬಲಿಸಿ ಪ್ರಚಾರ ಮಾಡಿದ್ದ ಸಮಾಜದ ಗಣ್ಯ ವ್ಯಕ್ತಿಗಳಿಗೆ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಿಮ್ಮ ಅಭಿಮಾನಿಗಳಾಗಿ ನಾವು ಸದಾ ನಿಮ್ಮನ್ನು ಆರಾಧಿಸುತ್ತೇವೆ. ಆದರೆ ನೀವು ಅಯಾನ್ಶ್​​​ಗಾಗಿ ನಿಮ್ಮ ಸಮಯ ಕೊಟ್ಟು ಯಶಸ್ವಿಗೊಳಿಸಿದ್ದಕ್ಕೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ, ನಿಮ್ಮಿಂದ ಈ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಧನ್ಯವಾದಗಳು ಎಂದಿದ್ದಾರೆ.

ನಿಮ್ಮ ಕರುಣಾಳು ಮನೋಭಾವಕ್ಕೆ ಧನ್ಯವಾದಗಳು. ಈ ಜೀವನ ಪಂದ್ಯವನ್ನು ಗೆಲ್ಲಲು ನೀವು ನಮಗೆ ಸಹಾಯ ಮಾಡಿದ್ದೀರಿ! #Saveayaanshgupta ಅನ್ನು ಉಳಿಸುವಲ್ಲಿ ನಿಮ್ಮ ಸಹಾಯಕ್ಕಾಗಿ ನಾವು ಶಾಶ್ವತವಾಗಿ ಕೃತಜ್ಞರಾಗಿದ್ದೇವೆ ಎಂದಿದ್ದಾರೆ.

ಇಂತಹ ಅಪರೂಪದ ಸಮಸ್ಯೆಯನ್ನು ಮೊದಲು ಮುಖ್ಯವಾಹಿನಿಗೆ ತಂದಿದ್ದಕ್ಕಾಗಿ ನಕುಲ್ ಮೆಹ್ತಾ ಅವರನ್ನು ಶ್ಲಾಘಿಸಿದರು. ಕಾರ್ತಿಕ್ ಆರ್ಯನ್, ರಾಜ್‌ಕುಮಾರ್​​​ ರಾವ್, ದಿಯಾ ಮಿರ್ಜಾ, ಅರ್ಜುನ್ ಕಪೂರ್, ಇಮ್ರಾನ್ ಹಶ್ಮಿ ಮತ್ತು ಸಾರಾ ಅಲಿ ಖಾನ್ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಧನ್ಯವಾದಗಳನ್ನು ಅರ್ಪಿಸಿದರು.

ಅನುಷ್ಕಾ ಮತ್ತು ವಿರಾಟ್ ಕೂಡ ಇತ್ತೀಚೆಗೆ ಕೋವಿಡ್ -19 ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದ್ದರು. ಜೊತೆಗೆ ಈ ಅಭಿಯಾನದಲ್ಲಿ ಈ ದಂಪತಿ 11 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಲು #InThisTogether ನಿಧಿ ಸಂಗ್ರಹವನ್ನು ಪ್ರಾರಂಭಿಸಲು ಕೆಟೊ ಜೊತೆ ಕೈಜೋಡಿಸಿದ್ದರು.
Published by:Anitha E
First published: